image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಒಪ್ಪಲ್ಲ : ಸಂಜಯ್ ರಾವತ್ ಹೇಳಿದ್ದಾರೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಒಪ್ಪಲ್ಲ : ಸಂಜಯ್ ರಾವತ್ ಹೇಳಿದ್ದಾರೆ

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ತಿರುಚಿದ್ದು, ಪ್ರತಿಪಕ್ಷಗಳ ಸ್ಥಾನಗಳನ್ನು ಕದಿಯಲಾಗಿದೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಆರೋಪಿಸಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆಗೆ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು 221 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ ಸಂದರ್ಭದಲ್ಲಿ ರಾವತ್ ಈ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಏಕಾಂಗಿಯಾಗಿ 128 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಪ್ರತಿಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ (ಎಂವಿಎ) ಕೇವಲ 52 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಂದಿನ ಫಲಿತಾಂಶಗಳು ಮಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿರುವುದನ್ನು ಸೂಚಿಸುತ್ತವೆ.

"ಅವರು ಏನೋ 'ಗಡ್ ಬಡ್' (ಕಿತಾಪತಿ) ಮಾಡಿದ್ದಾರೆ. ಅವರು ನಮ್ಮ ಕೆಲ ಸ್ಥಾನಗಳನ್ನು ಕದ್ದಿದ್ದಾರೆ. ಇದು ಜನಾಭಿಪ್ರಾಯವಾಗಿರಲು ಸಾಧ್ಯವಿಲ್ಲ. ಜನತೆ ಸಹ ಈ ಫಲಿತಾಂಶಗಳನ್ನು ಒಪ್ಪುವುದಿಲ್ಲ" ಎಂದ ರಾವತ್ ಚುನಾವಣಾ ಫಲಿತಾಂಶಗಳ ನ್ಯಾಯಸಮ್ಮತತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

"ಮಹಾ ವಿಕಾಸ್ ಅಘಾಡಿಗೆ (ಎಂವಿಎ) 75 ಸ್ಥಾನಗಳು ಸಹ ಬಂದಿಲ್ಲ ಎಂದಾದರೆ ಈ ಫಲಿತಾಂಶಗಳು ಅನುಮಾನಾಸ್ಪದವಾಗಿವೆ. ಏಕನಾಥ್ ಶಿಂಧೆ 56 ಸ್ಥಾನಗಳಲ್ಲಿ ಮತ್ತು ಅಜಿತ್ ಪವಾರ್ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವುದು ಅಸಾಧ್ಯ. ಇದು ಮಹಾರಾಷ್ಟ್ರದ ಜನರ ತೀರ್ಪು ಎಂದು ನಂಬಲು ನಾನು ಒಪ್ಪುವುದಿಲ್ಲ. ಅವರ ಹೃದಯದಲ್ಲಿ ಏನಿದೆ ಎಂಬುದು ನನಗೆ ತಿಳಿದಿದೆ" ಎಂದು ಅವರು ಹೇಳಿದರು.

Category
ಕರಾವಳಿ ತರಂಗಿಣಿ