image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುಳ್ಯದ ನರೇಂದ್ರ ವಿಹಾರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುಳ್ಯ ಮಂಡಲ ಮಹಿಳಾ ಮೋರ್ಚಾ ಸಭೆ

ಸುಳ್ಯದ ನರೇಂದ್ರ ವಿಹಾರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಸುಳ್ಯ ಮಂಡಲ ಮಹಿಳಾ ಮೋರ್ಚಾ ಸಭೆ

ಸುಳ್ಯ: ಮಂಡಲಾಧ್ಯಕ್ಷರಾದ ವೆಂಕಟ್ ಒಳಲoಬೆ  ಅಧ್ಯಕ್ಷತೆಯಲ್ಲಿ ಇಂದು ಮಹಿಳಾ ಮೋರ್ಚಾದ 22 ಜನರ ಪೂರ್ಣ ಸಮಿತಿ ಘೋಷಣೆ ಮಾಡಿ ಶಾಲು ಹಾಕಿ ಗೌರವಿಸಲಾಯಿತು ಮಾಡಲಾಯಿತು

ಈ ಸಂಧರ್ಭದಲ್ಲಿ ಮಾತನಾಡಿದ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿಯಾದ ಭಾಗೀರತಿ ಮುರುಳ್ಯ ಮಾತನಾಡಿ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ. ಮಂಜುಳಾ ರಾವ್  ನೂತನ ಸದಸ್ಯರಿಗೆ ಶುಭ ಹಾರೈಸಿ ಸಕ್ರಿಯ ಸದಸ್ಯತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ಮಾಹಿತಿ ನೀಡಿದರು.

ಈ ಸಂಧರ್ಭ ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ಇವರನ್ನು ಸುಳ್ಯ ನಗರ ಸಭೆ ಅಧ್ಯಕ್ಧೆಯಾದ ಹಿನ್ನಲೆ ಗೌರವಿಸಲಾಯಿತು.

ವೇದಿಕೆಯಲ್ಲಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ. ಬಿ. ಕೆ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕಿತ ಶೆಟ್ಟಿ, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಬಬಿತ, ಜಿಲ್ಲಾ ಮಹಿಳಾ ಮೊರ್ಚಾ ಸುಳ್ಯ ಮಂಡಲ ಪ್ರಭಾರಿ ಯಶಸ್ವಿನಿ ಶಾಸ್ತ್ರಿ, ಜಿಲ್ಲಾ ಉಪಾಧ್ಯಕ್ಷೆ ಗುಣವತಿ ಕೊಲ್ಲ0ತಡ್ಕ,ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಪುಷ್ಪ ಮೇದಪ್ಪ, ಹಿರಿಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಉಪಸ್ಥಿತರಿದ್ದರು.

ಸದಸ್ಯೆ ಹೇಮಾ ಮೋಹನ್ ದಾಸ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಶಶಿಕಲಾ ನಿರಬಿದಿರೆ ಸ್ವಾಗತಿಸಿ ಧನ್ಯವಾದವಿತ್ತರು.

Category
ಕರಾವಳಿ ತರಂಗಿಣಿ