image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಒತ್ತುವರಿಯಾಗಿರುವ ವಕ್ಫ್ ಭೂಮಿ ಮರು ಸ್ವಾಧೀನ; ಬಿಜೆಪಿ ಚುನಾವಣಾ ಪ್ರಣಾಳಿಕೆ -ಶಾಹುಲ್ ಹಮೀದ್.

ಒತ್ತುವರಿಯಾಗಿರುವ ವಕ್ಫ್ ಭೂಮಿ ಮರು ಸ್ವಾಧೀನ; ಬಿಜೆಪಿ ಚುನಾವಣಾ ಪ್ರಣಾಳಿಕೆ -ಶಾಹುಲ್ ಹಮೀದ್.

ಮಂಗಳೂರು: ವಕ್ಫ್ ಭೂಮಿ ರಕ್ಷಣೆಗೆ ವಕ್ಫ್ ಮಂಡಳಿಗೆ ಸ್ವಾಯತ್ತತೆ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ಒತ್ತು ವರಿಯಾಗಿರುವ ವಕ್ಫ್ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ವಕ್ಫ್ ಮಂಡಳಿಗೆ ನೀಡುವುದಾಗಿ 2014 ಚುನಾವಣೆಯಲ್ಲಿ ಬಿಜೆಪಿ ಘೋಷಣೆ ಮಾಡಿತ್ತು.ಇದೀಗ ಜನರನ್ನು ದಿಕ್ಕು ತಪ್ಪಿಸಲು ಅಪಪ್ರಚಾರದಲ್ಲಿ ತೊಡಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ  ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.

 ಈ ಹಿಂದೆ ವಕ್ಫ್ ಗೆ 1.10ಲಕ್ಷ ಎಕರೆ ಭೂಮಿ ಇತ್ತು ಈ ಪೈಕಿ ಒತ್ತುವರಿಯಾಗಿ ಈಗ ಕೇಬಲ 23ಸಾವಿರ ಭೂಮಿ ಮಾತ್ರ ವಕ್ಫ್ ಮಂಡಳಿಯಲ್ಲಿದೆ.ವಕ್ಫ್ ಭೂಮಿ ಸಂರಕ್ಷಣೆಗೆ ಸರಕಾರ ನೋಟೀಸು ಜಾರಿ ಮಾಡಿರುವು ದನ್ನು ಕೆಲವು ಬಿಜೆಪಿ ಜನಪ್ರತಿನಿಧಿಗಳು ಮುಖಂಡರು ರಾಜ್ಯ ಸರಕಾರ ರೈತರ ಭೂಮಿಯನ್ನು ವಕ್ಫ್ ಮಂಡಳಿಗಾಗಿ  ಕಸಿದುಕೊಳ್ಳುತ್ತಿದೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ.ಬಿಜಾಪುರದಲ್ಲಿ2019ರಿಂದ 2023ರವರೆಗೆ 138 ಪ್ರಕರಣಗಳಲ್ಲಿ ವಕ್ಫ್ ಆಸ್ತಿಯನ್ನು ತಿದ್ದುಪಡಿ ಮಾಡಿ ಸ್ವಾಧೀನ ಪಡಿಸಿ ಕೊಳ್ಳ ಲಾಗಿದೆ ಎಂದರು.ಈಗ ಅಲ್ಲೇ ಜನಪ್ರತಿನಿಧಿಯಾಗಿದ್ದ ಬಸವನ ಗೌಡ ಪಾಟೀಲ್ ಯತ್ನಾಳ್ ಈಗ ಅಪಪ್ರಚಾರದಲ್ಲಿ ತೊಡಗಿದ್ದಾರೆ.ವಕ್ಫ್ ಆಸ್ತಿ ಯಾರು ಅತಿಕ್ರಮಣ ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಂಡು ವಕ್ಫ್ ಆಸ್ತಿಯ ರಕ್ಷಣೆಯಾಗಬೇಕೆಂದು ಶಾಹುಲ್ ಹಮೀದ್  ಆಗ್ರಹಿಸಿದರು.

 ಸುದ್ದಿಗೋಷ್ಠಿಯಲ್ಲಿ ಮ ನ ಪಾ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು ಅಬ್ದುಲ್ ರವೂಫ್, ಕಾಂಗ್ರೆಸ್ ಪದಾಧಿಕಾರಿಗಳಾದ ಮುಹಮ್ಮದ ಬಪ್ಪಳಿಗೆ,  ಅಶ್ರಫ್ ಬಜಾಲ್, ಶಮೀರ್ ಕಾಟಿಪಳ್ಳ , ಆಲ್ವಿನ್ ಪ್ರಕಾಶ್, ಸಬಿತ ಮಿಸ್ಕಿತ್,  ಇಮ್ರಾನ್ ಎ ಆರ್, ಫಯಾಜ್ ಅಮ್ಮೆಮಾರ್, ಇಕ್ಬಾಲ್ ಉಪ್ಪಿನಂಗಡಿ  ಉಪಸ್ಥಿತರಿದ್ದರು

Category
ಕರಾವಳಿ ತರಂಗಿಣಿ