image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚೆಂಬುಗುಡ್ಡೆ-ದಾರಂದಬಾಗಿಲು-ನಿತ್ಯಾಧರ್ ನಗರ -ಪಂಡಿತ್ ಹೌಸ್ ಸಂಪರ್ಕ ರಸ್ತೆ ಅಭಿವೃದ್ಧಿಗೆ ಎರಡು ಕೋಟಿ ಅನುದಾನ ಬಿಡುಗಡೆಗೊಳಿಸಿದ ಯು.ಟಿ ಖಾದರ್

ಚೆಂಬುಗುಡ್ಡೆ-ದಾರಂದಬಾಗಿಲು-ನಿತ್ಯಾಧರ್ ನಗರ -ಪಂಡಿತ್ ಹೌಸ್ ಸಂಪರ್ಕ ರಸ್ತೆ ಅಭಿವೃದ್ಧಿಗೆ ಎರಡು ಕೋಟಿ ಅನುದಾನ ಬಿಡುಗಡೆಗೊಳಿಸಿದ ಯು.ಟಿ ಖಾದರ್

ಮಂಗಳೂರು: ಉಳ್ಳಾಲ ನರಗಸಭೆ ವ್ಯಾಪ್ತಿಯ ಚೆಂಬುಗುಡ್ಡೆ-ದಾರಂದಬಾಗಿಲು-ನಿತ್ಯಾಧರ್ ನಗರ -ಪಂಡಿತ್ ಹೌಸ್ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಶಾಸಕರೂ ಸಭಾಧ್ಯಕ್ಷರಾದ ಯು ಟಿ ಖಾದರ್ ರವರು ಒಂದು ಕೋಟಿ ಅನುದಾನವನ್ನು ಈ ಹಿಂದೆಯೇ ಬಿಡುಗಡೆಗೊಳಿಸಿದ್ದರು.ಆದರೆ ಒಂದು ಕೋಟಿಯಲ್ಲಿ ರಸ್ತೆ ಸಂಪೂರ್ಣ ಅಭಿವೃದ್ಧಿಗೊಳಿಸಲು ಸಾಧ್ಯವಾಗದ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ,ನಗರಸಭೆ ಸದಸ್ಯರಾದ ಬಾಝಿಲ್ ಡಿಸೋಜಾ ,ದೀಕ್ಷಿತಾ,ನಗರಸಭೆ ಮಾಜಿ ಅಧ್ಯಕ್ಷ ಕುಂಞಿಮೋನಾಕ,ಚೆಂಬುಗುಡ್ಡೆ ಮಸೀದಿಯ ಆಡಳಿತ ಸಮಿತಿ, ನಿತ್ಯಾಧರ್ ನಗರ ಚರ್ಚ್ ಆಡಳಿತ ಸಮಿತಿ, ಶ್ರೀ ರಾಜ ರಾಜೇಶ್ವರಿ ದೇವಸ್ಥಾನ ಆಡಳಿತ ಸಮಿತಿ, ಅನಿತಾ ಡಿಸೋಜಾ, ಕಣಚೂರ್ ರಹಿಮಾನ್, ಸೋಮೇಶ್ವರ ಪುರಸಭೆ ಸದಸ್ಯರಾದ ದೀಪಕ್ ಪಿಲಾರ್, ಪುರೋಷೋತ್ತಮ್ ಪಿಲಾರ್, ಶ್ರೀಧರ್ ಆಳ್ವ, ಲೆಸ್ಲಿ ಡಿಸೋಜಾ ಪಂಡಿತ್ ಹೌಸ್ ಹಾಗೂ ಸ್ಥಳೀಯರು ಹೆಚ್ಚಿನ ಅನುದಾನಕ್ಕಾಗಿ ಯು ಟಿ ಖಾದರ್ ರವರಲ್ಲಿ ಮನವಿ ಮಾಡಿ ಕೊಂಡಿದ್ದರು.

ಈ ಬಗ್ಗೆ ಅಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದ ಯು ಟಿ ಖಾದರ್ ಹೆಚ್ಚಿನ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಸದರಿ ರಸ್ತೆಗೆ ಹೆಚ್ಚುವರಿಯಾಗಿ ಇನ್ನೂ ಒಂದು ಕೋಟಿ ಸರಕಾರದಿಂದ ಯು ಟಿ ಖಾದರ್ ಬಿಡುಗಡೆಗೊಳಿಸಿದ್ದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.ಇದೀಗ ಎರಡು ಕೋಟಿ ರೂ ವೆಚ್ಚದಲ್ಲಿ ಚೆಂಬುಗುಡ್ಡೆ-ದಾರಂದಬಾಗಿಲು-ನಿತ್ಯಾಧರ್ ನಗರ -ಪಂಡಿತ್ ಹೌಸ್ ಸಂಪರ್ಕ ರಸ್ತೆ ಸುಸಜ್ಜಿತ ರೀತಿಯಲ್ಲಿ ಅಭಿವೃದ್ಧಿಯಾಗಲಿದ್ದು ಮಳೆ ಕಡಿಮೆಯಾದ ತಕ್ಷಣ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ