ನವದೆಹಲಿ : ನೀಟ್ ಹಗರಣದ ಹೋರಾಟದಂತೆ ಎಸ್ಐಆರ್ ವಿರೋಧಿ ಹೋರಾಟದಲ್ಲಿ ನಿಖರ ದಾಖಲೆಗಳಿಲ್ಲದೆ ಕೇವಲ ಆರೋಪಗಳು ಕೇಳಿಬರುತ್ತಿದ್ದು, ಸಿಜೆಪಿ ಸಂಘಟನೆಯ ನೇಹಾ ಬೋರಾ ಹಾಗೂ ಪ್ರಶಾಂತ್ ಭೂಷಣ್ ಅವರ 'ಬಾಂಗ್ಲಾ ಮಾದರಿ' ಹಾಗೂ 'ರೆಜಿಮ್ ಚೇಂಜ್' ಹೇಳಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ವಿವಾದ ಸೃಷ್ಟಿಸಿವೆ. ಭಾರತದಂತಹ ಬಲವಾದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಿಂಸಾತ್ಮಕ ಹೋರಾಟಕ್ಕೆ ಕರೆ ನೀಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಆರಂಭದಲ್ಲಿ ಬೆಂಬಲ ನೀಡಿದ್ದ ಜನತೆ ಈಗ ಹಿಂದೆ ಸರಿಯುತ್ತಿದ್ದಾರೆ. ಈ ಬೆಳವಣಿಗೆಯಿಂದಾಗಿ ಇಷ್ಟು ದಿನ ಬ್ಯಾಕ್ಫುಟ್ನಲ್ಲಿದ್ದ ಬಿಜೆಪಿಗೆ ಪ್ರಬಲ ರಾಜಕೀಯ ಅಸ್ತ್ರ ಸಿಕ್ಕಂತಾಗಿದ್ದು, ಪಕ್ಷವು ಆಕ್ರಮಣಕಾರಿ ಧೋರಣೆ ತಾಳಿದೆ. ಮತ್ತೊಂದೆಡೆ, ಸಿಜೆಪಿಯ ಈ ಎಡವಟ್ಟಿನಿಂದ ಖಾಲಿಬಿದ್ದಿರುವ ಚಳವಳಿಯ ಜಾಗವನ್ನು ತುಂಬಲು ಕಾಂಗ್ರೆಸ್ ಮುಂದಾಗಿದ್ದು, ನವೆಂಬರ್ 1 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರು, ಕೋಲ್ಕತಾ ಸೇರಿದಂತೆ ದೇಶಾದ್ಯಂತ ಬೃಹತ್ ಹೋರಾಟವನ್ನು ವಿಸ್ತರಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಪ್ರಜಾಸತ್ತಾತ್ಮಕ ಹೋರಾಟದ ಈ ಹೊಸ ಆಯಾಮದಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.