image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಂಡಿಯಾ ಒಕ್ಕೂಟಕ್ಕೆ ಸಿಜೆಐ ಜಸ್ಟಿಸ್ ಸೂರ್ಯ ಕಾಂತ್ ಶಾಕ್

ಇಂಡಿಯಾ ಒಕ್ಕೂಟಕ್ಕೆ ಸಿಜೆಐ ಜಸ್ಟಿಸ್ ಸೂರ್ಯ ಕಾಂತ್ ಶಾಕ್

ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 'ಇಂಡಿಯಾ' (INDIA) ಒಕ್ಕೂಟದ ಪ್ರಮುಖ ನಾಯಕರು ನೀಡಿದ್ದ ಭೇಟಿಯ ಮನವಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಜಸ್ಟಿಸ್ ಸೂರ್ಯ ಕಾಂತ್ ಅವರು ಅಧಿಕೃತವಾಗಿ ತಿರಸ್ಕರಿಸಿದ್ದಾರೆ. ಈ ಕುರಿತು ವಿರೋಧ ಪಕ್ಷದ ನಾಯಕರಿಗೆ ಇಮೇಲ್ ಮೂಲಕ ಮಾಹಿತಿ ರವಾನಿಸಿರುವ ಸಿಜೆಐ, ಭೇಟಿಯನ್ನು ನಿರಾಕರಿಸಲು ಸೂಕ್ತ ಸಕಾರಣಗಳನ್ನು ನೀಡಿ ಸ್ಪಷ್ಟನೆ ನೀಡಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಚುನಾವಣಾ ಆಯೋಗದ ಕಾರ್ಯಾಚರಣೆ ಹಾಗೂ ಪ್ರಜಾಪ್ರಭುತ್ವದ ಮೇಲಿನ ಸವಾಲುಗಳ ಕುರಿತು ಚರ್ಚಿಸಿ ಮನವಿ ಪತ್ರ ಸಲ್ಲಿಸಲು 'ಇಂಡಿಯಾ' ಕೂಟದ ನಾಯಕರು ಮುಖ್ಯ ನ್ಯಾಯಮೂರ್ತಿಗಳಿಂದ ಸಮಯ ಕೋರಿದ್ದರು. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಅರ್ಜಿಗಳು ಹಾಗೂ ವಿಷಯಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ನ್ಯಾಯಾಂಗ ಪರಿಶೀಲನೆಯಲ್ಲಿ (Sub-Judice) ಇರುವುದರಿಂದ, ಈ ಹಂತದಲ್ಲಿ ರಾಜಕೀಯ ನಾಯಕರ ನಿಯೋಗವನ್ನು ಪ್ರತ್ಯೇಕವಾಗಿ ಭೇಟಿಯಾಗುವುದು ನ್ಯಾಯಾಂಗದ ಸಿದ್ಧಾಂತ ಮತ್ತು ಸಾಂವಿಧಾನಿಕ ಮರ್ಯಾದೆಗೆ ಸೂಕ್ತವಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದ್ದಾರೆ.

ಯಾವುದೇ ವಿಷಯ ಅಥವಾ ಕುಂದುಕೊರತೆಗಳಿದ್ದರೂ ಅದನ್ನು ಅರ್ಜಿಯ ಮೂಲಕ ನ್ಯಾಯಾಂಗ ಪ್ರಕ್ರಿಯೆಯ ಚೌಕಟ್ಟಿನಲ್ಲೇ ಕೋರ್ಟ್‌ಗೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಿಜೆಐ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಮುಂದೆ ನ್ಯಾಯಾಂಗ ವಿಚಾರಣೆಗಳು ನಿಯಮಿತವಾಗಿ ಜರುಗುತ್ತಿದ್ದು, ಕಾನೂನಾತ್ಮಕವಾಗಿಯೇ ವಿಷಯಗಳನ್ನು ಪ್ರಸ್ತಾಪಿಸುವುದು ಸೂಕ್ತ ಎಂಬ ಇಮೇಲ್ ಸಂದೇಶ ನೀಡುವ ಮೂಲಕ ಪ್ರತಿಪಕ್ಷಗಳ ಮುಖಂಡರ ಭೇಟಿಯ ಯತ್ನಕ್ಕೆ ತೆರೆಬಿದ್ದಿದೆ.

Category
ಕರಾವಳಿ ತರಂಗಿಣಿ