image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಚಾರ ಬಿಟ್ಟು ಶಾಲೆಗಳನ್ನು ಉಳಿಸಿ: ಸರ್ಕಾರದ ವಿರುದ್ಧ ಸಿ ಟಿ ರವಿ ಆಕ್ರೋಶ

ಪ್ರಚಾರ ಬಿಟ್ಟು ಶಾಲೆಗಳನ್ನು ಉಳಿಸಿ: ಸರ್ಕಾರದ ವಿರುದ್ಧ ಸಿ ಟಿ ರವಿ ಆಕ್ರೋಶ

ಬೆಂಗಳೂರು : ರಾಜ್ಯ ಸರ್ಕಾರದ ಪ್ರಚಾರ ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನ ಆದ್ಯತೆಗಳನ್ನು ಪ್ರಶ್ನಿಸಿರುವ ಸಿ ಟಿ ರವಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರಚಾರಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ, ಆದರೆ ಶಾಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆಯಿದೆ. ಇದು ಕಾಂಗ್ರೆಸ್ ಸರ್ಕಾರದ ಶಿಕ್ಷಣ ನೀತಿಯೇ?” ಎಂದು ಅವರು ಪ್ರಶ್ನಿಸಿದ್ದಾರೆ. ಮಕ್ಕಳ ಕೈಯಲ್ಲಿ ರಾಜಕೀಯ ಪ್ರಚಾರದ ಸಂದೇಶಗಳ ಬದಲು ಪುಸ್ತಕಗಳಿರಬೇಕು, ಶಾಲೆಗಳಲ್ಲಿ ಪ್ರಚಾರದ ಬದಲು ಶಿಕ್ಷಕರಿರಬೇಕು ಹಾಗೂ ವೇದಿಕೆಗಳ ಮೇಲಿನ ಘೋಷಣೆಗಳ ಬದಲು ತರಗತಿ ಕೊಠಡಿಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ಮೊದಲು ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಲಿ. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ನೇಮಿಸಲಿ ಹಾಗೂ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶೂ-ಸಮವಸ್ತ್ರವನ್ನು ನೀಡಲಿ. ಮಕ್ಕಳ ಶಿಕ್ಷಣದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿದ ನಂತರ ಸರ್ಕಾರದ ಪ್ರಚಾರದ ಬಗ್ಗೆ ಮಾತನಾಡಲಿ ಎಂದು ಸಿ ಟಿ ರವಿ ಅವರು ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ