image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕದಿಂದ ಮರಳಿದ ಬಳಿಕ ಸ್ಫೋಟಕ ಮಾಹಿತಿ ಬಹಿರಂಗ: ಹೆಚ್.ಡಿ. ಕುಮಾರಸ್ವಾಮಿ

ಅಮೆರಿಕದಿಂದ ಮರಳಿದ ಬಳಿಕ ಸ್ಫೋಟಕ ಮಾಹಿತಿ ಬಹಿರಂಗ: ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳುತ್ತಿದ್ದು, ಅಲ್ಲಿಂದ ಮರಳಿದ ಬಳಿಕ ದೇಶವೇ ಅಲ್ಲೋಲ ಕಲ್ಲೋಲವಾಗುವಂತಹ ಮಹತ್ವದ ವಿಷಯಗಳು ಹಾಗೂ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ಪ್ರಾಮಾಣಿಕವಾಗಿ ಜನರ ಮುಂದೆ ಹಲವು ದಾಖಲೆಗಳನ್ನು ಇಡಲಿದ್ದು, ದಿನಕ್ಕೊಂದು ಸುದ್ದಿ ನೀಡುವ ಮೂಲಕ ತಮ್ಮ ಶಕ್ತಿ ಏನೆಂಬುದನ್ನು ತೋರಿಸುವುದಾಗಿ ಹೇಳಿದರು.

ಇದೇ ವೇಳೆ ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಕುರಿತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಸದನದಲ್ಲಿ ಮುಖ್ಯಮಂತ್ರಿಗಳು ನೀಡಿದ್ದ ಉತ್ತರದ ದಾಖಲೆಗಳನ್ನು ಬಿಡುಗಡೆ ಮಾಡಿದರು. ‘ಆರ್ಡರ್ ಕಾಪಿ ಕೊಡಬೇಡಿ’ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಹೇಳಿದ್ದರೂ ಸರ್ಕಾರ ಮೇಲ್ಮನವಿ ಸಲ್ಲಿಸದಿರುವುದನ್ನು ಪ್ರಶ್ನಿಸಿದ ಕುಮಾರಸ್ವಾಮಿ, OMR ಶೀಟ್ ತಿದ್ದಿ ಪರೀಕ್ಷೆ ಪಾಸ್ ಆದವರನ್ನು ಸರ್ಕಾರ ಯಾರನ್ನು ಕಾಪಾಡಲು ರಕ್ಷಿಸುತ್ತಿದೆ ಎಂದು ಕಿಡಿಕಾರಿದರು. ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡುವ ಮುನ್ನ ಈ ಅಕ್ರಮಕ್ಕೆ ಉತ್ತರಿಸಲಿ ಎಂದು ಸವಾಲು ಎಸೆದರು.

ಕೆಪಿಎಸ್‌ಸಿ ಸಂಸ್ಥೆ ಇಂದು ಬೀದಿಯಲ್ಲಿ ಹರಾಜಿಗೆ ಬಂದಂತಾಗಿದೆ ಎಂದ ಅವರು, ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ಕಾನೂನುಬಾಹಿರ ಸೂಚನೆ ನೀಡಿರಲಿಲ್ಲ ಹಾಗೂ ದಲಿತ ನಾಯಕರನ್ನು ಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿದ್ದೇನೆಯೇ ಹೊರತು ತಮ್ಮ ಸಂಬಂಧಿಕರನ್ನಾಗಲಿ, ಆಪ್ತರನ್ನಾಗಲಿ ನೇಮಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ