image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟೆಲಿಪ್ರಾಮ್ಟರ್ ಇಲ್ಲದೆ ವಂದೇ ಮಾತರಂ ಪೂರ್ಣವಾಗಿ ಹಾಡಿ: ಮೋದಿ-ಶಾಗೆ ಸಂಜಯ್ ರಾವತ್ ಸವಾಲು

ಟೆಲಿಪ್ರಾಮ್ಟರ್ ಇಲ್ಲದೆ ವಂದೇ ಮಾತರಂ ಪೂರ್ಣವಾಗಿ ಹಾಡಿ: ಮೋದಿ-ಶಾಗೆ ಸಂಜಯ್ ರಾವತ್ ಸವಾಲು

ಮುಂಬೈ : ದೇಶದಲ್ಲಿ 'ವಂದೇ ಮಾತರಂ' ಗೀತೆ ಕುರಿತಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಟೆಲಿಪ್ರಾಮ್ಟರ್ ಸಹಾಯವಿಲ್ಲದೆ ವಂದೇ ಮಾತರಂ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡಿ ತೋರಿಸುವಂತೆ ಸವಾಲು ಹಾಕಿದ್ದಾರೆ. ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗಷ್ಟೇ ಮಂಡಿಸಿದ್ದ ಇದೇ ರೀತಿಯ ಸವಾಲನ್ನು ರಾವತ್ ಇದೀಗ ಪುನರುಚ್ಚರಿಸಿದ್ದಾರೆ.

ದೇಶದಲ್ಲಿ ಹಣದುಬ್ಬರದಿಂದಾಗಿ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ, ಆದರೆ ಕೇಂದ್ರ ಸರ್ಕಾರ ನೈಜ ಸಮಸ್ಯೆಗಳನ್ನು ಮರೆಮಾಚಲು ಉದ್ದೇಶಪೂರ್ವಕವಾಗಿ ಈ ವಿವಾದವನ್ನು ಸೃಷ್ಟಿಸಿ ಗೀತೆ ಹಾಡುವಂತೆ ಜನರನ್ನು ಒತ್ತಾಯಿಸುತ್ತಿದೆ ಎಂದು ರಾವತ್ ಕಿಡಿಕಾರಿದ್ದಾರೆ. ಸಮಾಜವಾದಿ ಪಕ್ಷ ಹಾಗೂ ಎಡಪಕ್ಷಗಳು ಕೂಡ ಇದೇ ರೀತಿಯ ಆರೋಪ ಮಾಡಿವೆ. ಇತ್ತೀಚೆಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆ ಸೋನಿಯಾ ಗಾಂಧಿ ಅವರು ಗೀತೆಯ ಪೂರ್ಣ ಆವೃತ್ತಿಗೆ ಅಡ್ಡಿಪಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಈ ರಾಷ್ಟ್ರ ರಾಜಕಾರಣದಲ್ಲಿ ಈ ವಿವಾದ ಮತ್ತಷ್ಟು ಕಾವು ಪಡೆದುಕೊಂಡಿದೆ.

Category
ಕರಾವಳಿ ತರಂಗಿಣಿ