image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಂದೇ ಮಾತರಂಗೆ ಅಡ್ಡಿ ಪಡಿಸುವುದು ಕಾಂಗ್ರೆಸ್ಸಿನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ - ಶಾಸಕ ಕಾಮತ್

ವಂದೇ ಮಾತರಂಗೆ ಅಡ್ಡಿ ಪಡಿಸುವುದು ಕಾಂಗ್ರೆಸ್ಸಿನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ - ಶಾಸಕ ಕಾಮತ್

ಮಂಗಳೂರು:ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಹಾಡುತ್ತೇವೆ, ಪೂರ್ತಿ ಅಲ್ಲ ಎಂದು ಹೇಳಿ, ಪ್ರಜಾಪ್ರಭುತ್ವದ ದೇಗುಲ ಸಂಸತ್ತು ಅಂಗೀಕರಿಸಿರುವ ಕಾನೂನನ್ನು ಕೇವಲ ಓಲೈಕೆ ರಾಜಕಾರಣಕ್ಕೆ ವಿರೋಧಿಸುತ್ತಿರುವುದು ಕಾಂಗ್ರೆಸ್ಸಿನ ದೇಶ ವಿರೋಧಿ ಮನಸ್ಥಿತಿ ಹಾಗೂ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವಂದೇ ಮಾತರಂ ಕೇವಲ ಯಾವುದೋ ನಾಲ್ಕು ಸಾಲುಗಳ ಹಾಡಲ್ಲ. ಅದು ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಗಲ್ಲಿಗೇರುವಾಗಲೂ ಮೊಳಗಿಸಿದ ಪವಿತ್ರ ಮಂತ್ರ. ಬ್ರಿಟಿಷರ ಲಾಠಿ, ಬಂದೂಕುಗಳಿಗೂ ಜಗ್ಗದ ಹೆಮ್ಮೆಯ ಗೀತೆಯನ್ನು ಕಾಂಗ್ರೆಸ್ ಕೇವಲ ತನ್ನ ಮತಬ್ಯಾಂಕ್ ರಾಜಕಾರಣಕ್ಕಾಗಿ ವಿರೋಧಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು ದೇಶದ ಏಕತೆಯನ್ನು ವಿಭಜಿಸುವವರು ಯಾವುದೇ ಕ್ಷಮೆಗೆ ಅರ್ಹರಲ್ಲ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಓಲೈಕೆಗಾಗಿ ವಂದೇ ಮಾತರಂಗೆ ಕತ್ತರಿ ಹಾಕಿ ಕಾಂಗ್ರೆಸ್ ಬಹುದೊಡ್ಡ ಪ್ರಮಾದ ಎಸಗಿತ್ತು. ಇತಿಹಾಸದಲ್ಲಿ ಆದ ತಪ್ಪುಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಒಂದೊಂದಾಗಿ ಸರಿಪಡಿಸುತ್ತಿರುವ ಈ ಸಂದರ್ಭದಲ್ಲಿಯೂ ಕಾಂಗ್ರೆಸ್ ಮತ್ತೆ ನಿರ್ಲಜ್ಜತನದಿಂದ ತುಷ್ಟೀಕರಣಕ್ಕೆ ಇಳಿದು ದೇಶದ ಕಾನೂನಿಗೆ ಹಾಗೂ ಸಾರ್ವಭೌಮತ್ವಕ್ಕೆ ಸವಾಲು ಹಾಕುತ್ತಿರುವುದು ಖಂಡನೀಯ ಎಂದರು.

Category
ಕರಾವಳಿ ತರಂಗಿಣಿ