ಮಂಗಳೂರು: ಅನಂತಕುಮಾರ್ ಹೆಗಡೆ ಕಿನ್ನತೆಯಲ್ಲಿದ್ದಾರೆ. ಅವರಿಗೆ ಉತ್ತಮ ಔಷಧಿ ಕೊಡಿಸುವ ಅಗತ್ಯ ಇದೆ
ಆದಷ್ಟು ಬೇಗ ಅವರಿಗೆ ಚಿಕಿತ್ಸೆ ಕೊಡಿಸಿದರೆ ಚುನಾವಣೆವರೆಗೆಯಾದರೂ ಶಾಂತಿ ಇರುತ್ತದೆ ಎಂದು ಐವನ್ ಡಿಸೋಜಾ ವ್ಯಂಗ್ಯವಾಡಿದರು. ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಒಂದು ಕಡೆ ಸಂವಿಧಾನವನ್ನು ಒಪ್ಪಿಕೊಳ್ಳುತ್ತೇವೆ ಎನ್ನುತ್ತೀರಿ. ಇನ್ನೊಂದು ಕಡೆ ಸಂವಿಧಾನವನ್ನು ತಿದ್ದುಪಡಿ ತರುತ್ತೇವೆ ಎನ್ನುತ್ತೀರಿ. ಮತ್ತೊಂದು ಕಡೆ ಅನಂತಕುಮಾರ್ ಹೆಗಡೆ ಹೇಳಿಕೆ ಪಕ್ಷದ ಹೇಳಿಕೆಯಲ್ಲ ಎನ್ನುತ್ತೀರಿ. ಹಾಗಿರುವಾಗ ಅನಂತಕುಮಾರ್ ಅವರನ್ನು ಉಚ್ಚಾಟನೆ ಮಾಡಬೇಕಿತ್ತು ಎಂದರು