ಧರ್ಮಸ್ಥಳ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತೀರ್ಥಕ್ಷೇತ್ರ ಬೇಟಿ ನೀಡುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಧರ್ಮಸ್ಥಳ ಕ್ಷೇತ್ರಕ್ಕೆ ಮಂಗಳವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಧರ್ಮಸ್ಥಳದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್ ಅವರು, ಶ್ರೀ ಮಂಜುನಾಥಸ್ವಾಮಿಯು ಅನುಗ್ರಹ ಪಡೆದು ಚುನಾವಣಾ ಯುದ್ಧಕ್ಕೆ ಹೊರಟಿದ್ದೇವೆ. ನನಗೆ ಸದಾ ರಕ್ಷಣೆ ನೀಡುವವರು ಶ್ರೀ ಮಂಜುನಾಥ, ಶಿವ. ಹಾಗಾಗಿ ಕ್ಷೇತ್ರಕ್ಕೆ ಬಂದು ದರ್ಶನ ಪಡೆದು ಪೂಜೆ ಸಲ್ಲಿಸಿ ಚುನಾವಣಾ ಕಾರ್ಯಕ್ಕೆ ಇಳಿದಿದ್ದೇನೆ.
ಜನ ಆಶೀರ್ವಾದ ಮಾಡುವ ನಂಬಿಕೆಯಿದೆ ಎಂದರು. ನಾವು ನುಡಿದಂತೆ ನಡೆದಿದ್ದೇವೆ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ಮಾತುಬಿಡ ಮಂಜುನಾಥ ನುಡಿದಂತೆ ನಡೆಯಲು ನಮಗೆ ಶಕ್ತಿ ನೀಡಿದ್ದಾನೆ. ಅದೇ ದೊಡ್ಡ ಆಶೀರ್ವಾದವಾಗಿದೆ. ಜನರು ನೀಡಿದ ಅವಕಾಶದ ಸದುಪಯೋಗ ಪಡೆದುಕೊಂಡು ಜನರ ಋಣ ತೀರಿಸಿದ್ದೇವೆ. ಜನರು ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಿಥುನ್ ರೈ, ರಂಜನ್. ಜಿ ಗೌಡ, ನಾಗೇಶ್ ಕುಮಾರ್, ಅಭಿನಂದನ್ ಹರೀಶ್, ಭರತ್, ಅಭಿದೇವ್, ಹಾಗೂ ಇತರರು ಇದ್ದರು