image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಖ್ಯಾತ ಜಾನಪದ ಗಾಯಕಿ ಟೀಜನ್ ಬಾಯಿ ಇನ್ನಿಲ್ಲ; ಪ್ರಧಾನಿ ಮೋದಿ ಸಂತಾಪ

ಖ್ಯಾತ ಜಾನಪದ ಗಾಯಕಿ ಟೀಜನ್ ಬಾಯಿ ಇನ್ನಿಲ್ಲ; ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಪಾಂಡವಾನಿ ಜಾನಪದ ಗಾಯಕಿ ಟೀಜನ್ ಬಾಯಿ ಅವರು ಭಾನುವಾರ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ರಾಯ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ (ಜುಲೈ 04) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿ ಒಂದು ದಿನ ತಡವಾಗಿ ಹೊರಬಿದ್ದಿದೆ.

ತಮ್ಮ ವಿಶಿಷ್ಟ ಮತ್ತು ಕಂಠಸಿರಿಯ ಮೂಲಕ ಛತ್ತೀಸ್‌ಗಢದ ಈ ಪ್ರಾಚೀನ ಜಾನಪದ ಕಲೆ 'ಪಾಂಡವಾನಿ'ಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟ ಕೀರ್ತಿ ಟೀಜನ್ ಬಾಯಿ ಅವರಿಗೆ ಸಲ್ಲುತ್ತದೆ. ಅವರ ಅಗಲಿಕೆಯಿಂದ ಭಾರತೀಯ ಕಲೆ ಮತ್ತು ಸಂಸ್ಕೃತಿಗೆ ತುಂಬಲಾರದ ನಷ್ಟವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಟೀಜನ್ ಬಾಯಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. "ಖ್ಯಾತ ಪಾಂಡವಾನಿ ಗಾಯಕಿ ಟೀಜನ್ ಬಾಯಿ ಜೀ ಅವರ ನಿಧನದಿಂದ ತುಂಬಾ ದುಃಖವಾಗಿದೆ. ತಮ್ಮ ಅಮೋಘ ಪ್ರದರ್ಶನಗಳ ಮೂಲಕ ಅವರು ಛತ್ತೀಸ್‌ಗಢದ ಈ ಜಾನಪದ ಕಲಾ ಪ್ರಕಾರಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿದ್ದಾರೆ. ಈ ದುಃಖದ ಸಮಯದಲ್ಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು" ಎಂದು ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಾರತೀಯ ಜಾನಪದ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಟೀಜನ್ ಬಾಯಿ ಅವರ ಅಪಾರ ಸೇವೆ ಮತ್ತು ಕೊಡುಗೆಗಳು ಚಿರಸ್ಮರಣೀಯವಾಗಿವೆ. ಪಾಂಡವಾನಿ ಎಂದರೆ ಮೊದಲಿಗೆ ನೆನಪಾಗುವುದೇ ಟೀಜನ್ ಬಾಯಿ, ಅವರ ಹೆಸರು ಜಾನಪದ ಕಲೆಯ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿದೆ.

Category
ಕರಾವಳಿ ತರಂಗಿಣಿ