image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನ ನಾಗುರಿಯಲ್ಲಿ ಭೀಕರ ಭೂಕುಸಿತ: ಬಿಹಾರ ಮೂಲದ ಒಂದೇ ಕುಟುಂಬದ ಮೂವರ ದುರ್ಮರಣ

ಮಂಗಳೂರಿನ ನಾಗುರಿಯಲ್ಲಿ ಭೀಕರ ಭೂಕುಸಿತ: ಬಿಹಾರ ಮೂಲದ ಒಂದೇ ಕುಟುಂಬದ ಮೂವರ ದುರ್ಮರಣ

ಮಂಗಳೂರು: ನಗರದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ನಾಗುರಿ ಪ್ರದೇಶದಲ್ಲಿ ಇಂದು ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮನೆ ಸಂಪೂರ್ಣ ನೆಲಸಮವಾಗಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿ ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

​ಭಾರೀ ಮಳೆಯಿಂದಾಗಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿದ್ದ ಗುಡ್ಡ ಕುಸಿದು, ಅಲ್ಲಿನ ಹೆಂಚಿನ ಮನೆಯ ಮೇಲೆ ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಆರು ಮಂದಿ ಮಣ್ಣಿನಡಿ ಸಿಲುಕಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವು ತೀವ್ರ ಕಾರ್ಯಾಚರಣೆ ನಡೆಸಿತು. ಆದರೆ, ದುರದೃಷ್ಟವಶಾತ್ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ ಮೃತಪಟ್ಟವರು ಬಿಹಾರ ಮೂಲದವರಾಗಿದ್ದು, ಅವರ ವಿವರ ಹೀಗಿದೆ:
​ಶಾಂತ (46 ವರ್ಷ), ಮಹಿಳೆ.
​ಅನಾಮಿಕ ಚೌರಾಸಿಯ (8 ವರ್ಷ), ಬಾಲಕಿ.
​ಪರಿ (4 ವರ್ಷ), ಬಾಲಕಿ.
ಅವಶೇಷಗಳ ಅಡಿಯಿಂದ ರಕ್ಷಣಾ ತಂಡವು ಬದುಕಿ ಉಳಿದ ಮೂವರನ್ನು ಹೊರತೆಗೆದು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದೆ. ಪಾರಾದವರು
​ಬಾಲಕೃಷ್ಣ (48 ವರ್ಷ), ಪುರುಷ.
​ಅಲ್ಕಾ (14 ವರ್ಷ), ಬಾಲಕಿ.
​ಅನುಷಾ (11 ವರ್ಷ), ಬಾಲಕಿ.

ಮೃತಪಟ್ಟವರು ಮತ್ತು ಗಾಯಾಳುಗಳು ಬಿಹಾರ ರಾಜ್ಯದ ಮೂಲದವರಾಗಿದ್ದು, ಕಳೆದ 20 ವರ್ಷಗಳಿಂದ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಈ ದುರಂತ ಅನಿರೀಕ್ಷಿತವಾಗಿ ಆಘಾತವನ್ನುಂಟುಮಾಡಿದೆ.
​ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Category
ಕರಾವಳಿ ತರಂಗಿಣಿ