’ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಸಂಕಲ್ಪದೊಂದಿಗೆ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಯಶಸ್ವಿ 12 ವರ್ಷಗಳನ್ನು ಪೂರ್ಣಗೊಳಿಸಿದ ಪ್ರಯುಕ್ತ ಬುಧವಾರ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಶ್ರೀ ಕ್ಷೇತ್ರ ಕದ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ, ಪ್ರಾರ್ಥಿಸಲಾಯಿತು. ಬಳಿಕ ಕದ್ರಿ ಮಲ್ಲಿಕಟ್ಟೆ ಬಳಿಯ ಅಲ್ವಾರಿಸ್ ರಸ್ತೆಯಲ್ಲಿ ಸಸಿ ನೆಡುವ ಕಾರ್ಯಕ್ರಮವು ನಡೆಯಿತು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಭಾರತದಲ್ಲಿ ಇದೊಂದು ದಾಖಲೆಯ ಆಡಳಿತ. ಒಂದು ಪ್ರಧಾನ ಮಂತ್ರಿಗಳಾಗಿ ಇಷ್ಟೊಂದು ದಿನ ಪ್ಬೇರೆ ಯಾರೂ ಈ ದೇಶದ ಸೇವೆ ಮಾಡಿಲ್ಲ. ಭಾರತೀಯ ಜನತಾ ಪಾರ್ಟಿಯ ಪ್ರತಿಯೊಂದು ಕಾರ್ಯಕರ್ತರಿಗೆ ಸಂತೋಷದ ಕ್ಷಣವಾಗಿದೆ. ಹಾಗಾಗಿ ಅವರ ಕೊಡುಗೆ ಇನ್ನಷ್ಟು ದೇಶಕ್ಕೆ ಬೇಕು. ಆರ್ಥಿಕವಾಗಿ ದೇಶವನ್ನು ಪ್ರಪಂಚದಲ್ಲಿ ಉನ್ನತ ಮಟ್ಟಕ್ಕೆ ಹೋಗುತ್ತಿದೆ. ಇದಕ್ಕೆಲ್ಲಾ ಕಾರಣವಾದ ಪ್ರಧಾನಿಯವರು ಇಡೀ ಪ್ರಪಂಚಕ್ಕೆ ಒಂದು ವಿಶ್ವ ನಾಯಕನಾಗಿ ದೇಶವನ್ನು ಮುನ್ನಡೆಸುವಂತಿರುವಂತದ್ದು ಶ್ಲಾಘನೀಯ. ಬೇರೆ ದೇಷದ ನಾಯಕರು ಅಧಿಕಾರಿಗಳೂ ಕೂಡಾ ಅಷ್ಟೇ ಗೌರವ ನೀಡುತ್ತಿದ್ದಾರೆ. ದೇವರ ಆಶೀರ್ವಾದ ಪ್ರಧಾನಿಯರಿಗೆ ಯಾವಗಲೂ ಇರಬೇಕು ಎಂದು ಹೇಳಿದರು
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪ್ರಧಾನಿಯರ ಆಡಳಿತದ ಯಶಸ್ಸಿಗಾಗಿ ಕಾರ್ಯಕರ್ತರು ಪ್ರಾರ್ಥಿಸಿದ್ದಾರೆ. ಇನ್ನಷ್ಟು ಅಭಿವೃದ್ದಿಗಾಗಿ ಇದು ಪ್ರೇರಣೆ ನೀಡಲಿದೆ. ೧೨ ವರ್ಷಗಳ ಸುದೀರ್ಘ ಆಡಳಿತ ಮಾಡಿ, ಪ್ರಾಮಾಣಿಕ ಸೇವೆ ಮಾಡುವ ಮೂಲಕ ವಿಶ್ವಕ್ಕೇ ಮಾದರಿಯಾಗಿದ್ದಾರೆ. ಇದರಿಂದ ಹುರುಪು ಪಡೆದು ನಾವೆಲ್ಲರೂ ಮತ್ತಷ್ಟು ಸಾಮಾಜಿಕ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುವತ್ತ ಮುನ್ನಡೆಯುತ್ತೇವೆ ಎಂದು ಹೇಳಿದರು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಎಂ.ಎಲ್.ಸಿ ಮೋನಪ್ಪ ಭಂಡಾರಿ, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾ ವಕ್ತಾರ ರಾಜಗೋಪಾಲ್ ರೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಹಾಗೂ ಯತೀಶ್ ಆರ್ವರ್, ಕೋಶಾಧಿಕಾರಿ ಸಂಜಯ್ ಪ್ರಭು, ಮನಪಾ ನಿಕಟಪೂರ್ವ ಸದಸ್ಯರಾದ ಶಕೀಲಾ ಕಾವ, ಕಿಶೋರ್ ಕೊಟ್ಟಾರಿ, ಶೈಲೇಶ್ ಶೆಟ್ಟಿ, ಮನೋಹರ್ ಕದ್ರಿ, ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಕಮಲಾಕ್ಷಿ, ಮಂಗಳೂರು ನಗರ ದಕ್ಷಿಣ ಮಂಡಲದ ಪಧಾದಿಕಾರಿಗಳು ಹಾಗೂ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.