image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ವಿವಾದ : ಎಡಪಂಥೀಯ ಷಡ್ಯಂತ್ರದ ಚರ್ಚೆ!

ನಾರ್ವೆ ಪತ್ರಕರ್ತೆ ಹೆಲ್ಲೆ ಲಿಂಗ್ ವಿವಾದ : ಎಡಪಂಥೀಯ ಷಡ್ಯಂತ್ರದ ಚರ್ಚೆ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ನಾರ್ವೆ ಪ್ರವಾಸದ ವೇಳೆ ಓಸ್ಲೊದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ನಾರ್ವೇಜಿಯನ್‌ ಪತ್ರಕರ್ತೆ ಹೆಲ್ಲೆ ಲಿಂಗ್‌ (Helle Lyng) ಸೃಷ್ಟಿಸಿದ ಹಠಾತ್‌ ಪ್ರಸಂಗವು ಈಗ ಕೇವಲ ಮಾಧ್ಯಮದ ಪ್ರಶ್ನೆಯಾಗಿ ಉಳಿದಿಲ್ಲ. ಇದು ಭಾರತದ ರಾಜತಾಂತ್ರಿಕ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ "ಪೂರ್ವನಿಯೋಜಿತ ಎಡಪಂಥೀಯ ಷಡ್ಯಂತ್ರ" ಎಂಬ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿಯವರು ನಾರ್ವೆ ಪ್ರಧಾನಿಯವರೊಂದಿಗೆ ಜಂಟಿ ಹೇಳಿಕೆ ನೀಡಿ ಹೊರಡುವಾಗ, ಪ್ರೋಟೋಕಾಲ್ ಉಲ್ಲಂಘಿಸಿ "ನೀವೇಕೆ ಮಾಧ್ಯಮಗಳ ಪ್ರಶ್ನೆಯನ್ನು ಸ್ವೀಕರಿಸುವುದಿಲ್ಲ?" ಎಂದು ಜೋರಾಗಿ ಕೂಗುತ್ತಾ ಹಿಂಬಾಲಿಸಿದ ಹೆಲ್ಲೆ ಲಿಂಗ್ ಚಟುವಟಿಕೆಗಳು ಹಲವು ಅನುಮಾನಗಳನ್ನು ಹುಟ್ಟುಹಾಕಿವೆ.

​ಈ ಘಟನೆಯ ನಂತರ ಭಾರತೀಯ ವಿದೇಶಾಂಗ ಸಚಿವಾಲಯವು ಆಕೆಗೆ ಅಧಿಕೃತವಾಗಿ ಮಾಧ್ಯಮ ಪ್ರಕಟಣೆಗೆ ಆಹ್ವಾನ ನೀಡಿ ಮುಕ್ತಾವಕಾಶ ಕಲ್ಪಿಸಿತ್ತು. ಅಲ್ಲಿಯೂ ಭಾರತದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪ್ರಶ್ನೆ ಎತ್ತಿದ ಲಿಂಗ್ ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಸಿಬಿ ಜಾರ್ಜ್ ಖಡಕ್ ತಿರುಗೇಟು ನೀಡಿದರು. ಭಾರತದ ಬೃಹತ್ ಸಂವಿಧಾನ, ಮೂಲಭೂತ ಹಕ್ಕುಗಳು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ನೆನಪಿಸಿದ ಸಿಬಿ ಜಾರ್ಜ್, "ಭಾರತದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ಕೆಲವು ವಿದೇಶಿ ಮಾಧ್ಯಮಗಳು ಮತ್ತು ಸ್ವಾರ್ಥಿ ಎನ್‌ಜಿಒಗಳು ನೀಡುವ ವರದಿಗಳನ್ನು ಆಧರಿಸಿ ಭಾರತದ ಮಾನವ ಹಕ್ಕುಗಳ ಬಗ್ಗೆ ಮಾತನಾಡಬೇಡಿ" ಎಂದು ತಪರಾಕಿ ನೀಡಿದ್ದರು. ಈ ವಾಗ್ವಾದವು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ಆದರೆ, ಈ ಇಡೀ ಘಟನೆಯ ಬೆನ್ನಲ್ಲೇ ಹೆಲ್ಲೆ ಲಿಂಗ್ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆದ ಹಠಾತ್ ಬದಲಾವಣೆಗಳು ಇದು ಆಕಸ್ಮಿಕವಲ್ಲ, ಬದಲಿಗೆ ವ್ಯವಸ್ಥಿತ ಸಂಚು ಎಂಬ ವಾದಕ್ಕೆ ಬಲ ನೀಡುತ್ತಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ.

Category
ಕರಾವಳಿ ತರಂಗಿಣಿ