ಮಂಗಳೂರು: ಆನ್ಲೈನ್ ಮೂಲಕ ಔಷಧಿಗಳ ಮಾರಾಟವನ್ನು ವಿರೋಧಿಸಿ ಬುಧವಾರ ಮೆಡಿಕಲ್ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಔಷಧಿಗಳ ಪೂರೈಕೆಗೆ ಜಿಲ್ಲಾಡಳಿತವು ಪರ್ಯಾಯ ವ್ಯವಸ್ಥೆ ಮಾಡಿದ್ದು, ಕೆಲವು ಪ್ರಮುಖ ಮೆಡಿಕಲ್ ಶಾಪ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಸಹಾಯಕ ಔಷಧ ನಿಯಂತ್ರಕರ ಪ್ರಕಟಣೆ ತಿಳಿಸಿದೆ.
ಬಂದ್ ಸಂದರ್ಭದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲೆಯ ಒಟ್ಟು 38 ಅಪೋಲೋ ಫಾರ್ಮಸಿಗಳು, 48 ಮೆಡ್ ಪ್ಲಸ್ ಸಂಸ್ಥೆಗಳು ಹಾಗೂ 130 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು ತೆರೆದಿರಲಿವೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿರುವ ಮೆಡಿಕಲ್ ಅಂಗಡಿಗಳು ಕೂಡ ಎಂದಿನಂತೆ ಗ್ರಾಹಕರಿಗೆ ಲಭ್ಯವಿರಲಿವೆ.
ಔಷಧಿಗಳ ತುರ್ತು ಅಗತ್ಯತೆ ಹಾಗೂ ಮಾಹಿತಿಗಾಗಿ ಸಾರ್ವಜನಿಕರು ಆಯಾ ಭಾಗದ ಮೆಡ್ಪ್ಲಸ್ ಮತ್ತು ಅಪೋಲೋ ಮೆಡಿಕಲ್ಗಳನ್ನು ಈ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ:
ಮಂಗಳೂರು ನಗರ: 9108466827
ಮುಲ್ಕಿ, ಕಿನ್ನಿಗೋಳಿ, ಮೂಡಬಿದ್ರಿ: 6364908172, 7625081353
ಬಂಟ್ವಾಳ, ಬಿ.ಸಿ. ರೋಡ್, ವಿಟ್ಲ:9187234432
ಯಾವುದೇ ತುರ್ತು ನೆರವು ಅಥವಾ ದೂರುಗಳಿದ್ದಲ್ಲಿ ಮಂಗಳೂರಿನ ಸಹಾಯಕ ಡ್ರಗ್ಸ್ ನಿಯಂತ್ರಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಸಾರ್ವಜನಿಕರು ಮೊಬೈಲ್ ಸಂಖ್ಯೆ: 9448205177 ಅಥವಾ ಲ್ಯಾಂಡ್ಲೈನ್ ಸಂಖ್ಯೆ: 0824-2218451 ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.