image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಸರಾ ರನ್ - ಹಾಫ್ ಮ್ಯಾರಥಾನ್‌ನಲ್ಲಿ 1,500ಕ್ಕೂ ಅಧಿಕ ಓಟಗಾರರು ಭಾಗಿ

ದಸರಾ ರನ್ - ಹಾಫ್ ಮ್ಯಾರಥಾನ್‌ನಲ್ಲಿ 1,500ಕ್ಕೂ ಅಧಿಕ ಓಟಗಾರರು ಭಾಗಿ

ಮಂಗಳೂರು: ಕುದ್ರೋಳಿಯ ಶ್ರೀಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ 'ಮಂಗಳೂರು ದಸರಾ'ದ ಅಂಗವಾಗಿ ಜಿಯೂಸ್ ಫಿಟ್ನೆಸ್ ಕೇಂದ್ರ, ಖೇಲೋ ಇಂಡಿಯಾ ಹಾಗೂ ಡೆಕತ್ಲಾನ್ ಸಹಭಾಗಿತ್ವದಲ್ಲಿ ರವಿವಾರ ಬೆಳಗ್ಗೆ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ 'ಹಾಫ್ ಮ್ಯಾರಥಾನ್' ಆಯೋಜನೆಗೊಂಡಿತು.

'ವನ್ ಸಿಟಿ ವನ್ ಸ್ಪಿರಿಟ್' ಧ್ಯೇಯವಾಕ್ಯದೊಂದಿಗೆ ದ.ಕ.ಜಿಲ್ಲೆಯನ್ನು ವ್ಯಸನಮುಕ್ತ ಜಿಲ್ಲೆಯನ್ನಾಗಿಸಲು ಹಾಫ್ ಮ್ಯಾರಥಾನ್ ಆಯೋಜಿಸಲಾಗಿತ್ತು.

ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ 21ಕಿ.ಮೀ., 10ಕಿ.ಮೀ. ಹಾಗೂ 5ಕಿ.ಮೀ. ಸೇರಿದಂತೆ ಮೂರು ವಿಭಾಗಗಳಲ್ಲಿ 'ಹಾಫ್ ಮ್ಯಾರಥಾನ್' ನಡೆಯಿತು. ಹಾಫ್ ಮ್ಯಾರಥಾನ್‌ನಲ್ಲಿ 1,500ಕ್ಕೂ ಅಧಿಕ ಮಂದಿ ಉತ್ಸಾಹದಿಂದ ಭಾಗವಹಿಸಿದರು.

 21ಕಿಮೀ ಹಾಫ್ ಮ್ಯಾರಥಾನ್‌ ವಿಜೇತರಿಗೆ ಪ್ರಥಮ ಬಹುಮಾನ 25ಸಾವಿರ, ದ್ವಿತೀಯ 15ಸಾವಿರ, ತೃತೀಯ 10ಸಾವಿರ, ಅದೇ ರೀತಿ 10ಕಿಮೀ ಹಾಫ್ ಮ್ಯಾರಥಾನ್‌ ವಿಜೇತರಿಗೆ ಪ್ರಥಮ 15ಸಾವಿರ, ದ್ವಿತೀಯ, 10ಸಾವಿರ, ತೃತೀಯ 5ಸಾವಿರ ಬಹುಮಾನ, ಪದಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ‌‌. ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಪದಕ ಹಾಗೂ ಪ್ರಮಾಣ ಪತ್ರವನ್ನು ನೀಡಲಾಯಿತು. 

ಮ್ಯಾರಥಾನ್ ವೇಳೆ ಸ್ವಯಂಸೇವಕರ ಜತೆಗೆ, ಫಿಸಿಯೋಥೆರಪಿಸ್ಟ್‌ಗಳು, ಐದು ಆ್ಯಂಬುಲೆನ್ಸ್‌ ಗಳನ್ನು ನಿಗದಿತ ಸ್ಥಗಳಲ್ಲಿ ನಿಯೋಜಿಸಲಾಗಿತ್ತು.

ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ದಾರಿತಪ್ಪಿ ಹೋಗದಂತೆ ಲೊಕೇಶನ್ ವ್ಯವಸ್ಥೆಗಾಗಿ ಮೈಕ್ರೋ ಚಿಪ್ ಗಳನ್ನು ನೀಡಲಾಗಿತ್ತು. ಜೊತೆಗೆ ಎಲ್ಲರಿಗೂ ಟೀ ಶರ್ಟ್‌ಗಳನ್ನು ಒದಗಿಸಲಾಗಿತ್ತು.

Category
ಕರಾವಳಿ ತರಂಗಿಣಿ