image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಕಸಿತ ಭಾರತ ಎಂಬುದು ಕೇವಲ ಗುರಿಯಲ್ಲ, ಅದು ಮುಂದಿನ ಎರಡು ದಶಕಗಳಲ್ಲಿ ನಾವು ತಲುಪಬೇಕಾದ ಮಹತ್ವದ ಹಂತ-ಸಚಿವೆ ನಿರ್ಮಲಾ ಸೀತಾರಾಮನ್

ವಿಕಸಿತ ಭಾರತ ಎಂಬುದು ಕೇವಲ ಗುರಿಯಲ್ಲ, ಅದು ಮುಂದಿನ ಎರಡು ದಶಕಗಳಲ್ಲಿ ನಾವು ತಲುಪಬೇಕಾದ ಮಹತ್ವದ ಹಂತ-ಸಚಿವೆ ನಿರ್ಮಲಾ ಸೀತಾರಾಮನ್

ಮಂಗಳೂರು:ವಿಕಸಿತ ಭಾರತ ಎಂಬುದು ಕೇವಲ ಗುರಿಯಲ್ಲ, ಅದು ಮುಂದಿನ ಎರಡು ದಶಕಗಳಲ್ಲಿ ನಾವು ತಲುಪಬೇಕಾದ ಮಹತ್ವದ ಹಂತವಾಗಿದೆ. 2047ರ ವೇಳೆಗೆ ಭಾರತವನ್ನು ವಿಶ್ವದ ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರವನ್ನಾಗಿ ರೂಪಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ  ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಮಂಗಳೂರಿನ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಸಭಾಂಗಣದಲ್ಲಿ  ನಡೆದ ನಿಟ್ಟೆ ಡಾ.ಎನ್.ವಿನಯ ಹೆಗ್ಡೆ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವಿಕಸಿತ ಭಾರತ-2047ರ ದೃಷ್ಟಿಕೋನ’ ಎಂಬ ವಿಷಯದ ಕುರಿತು ಅವರು ಮಾತನಾಡಿ, ಕಳೆದ ಒಂದು ದಶಕದಲ್ಲಿ ಭಾರತವು ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ದೇಶದ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ಶ್ಲಾಘಿಸಿದ ಸಚಿವರು, ಕರಾವಳಿ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ನಿಟ್ಟೆ ವಿನಯ ಹೆಗ್ಡೆಯವರ ಸೇವೆಯನ್ನು ಸ್ಮರಿಸಿದರು. ಇದೇ ವೇಳೆ ದೇಶದ ಆರ್ಥಿಕ ಪ್ರಗತಿಯ ಅಂಕಿಅಂಶಗಳನ್ನು ಹಂಚಿಕೊಂಡ ಅವರು, 2014ರಲ್ಲಿ 1.9 ಲಕ್ಷ ಕೋಟಿ ರೂ. ಇದ್ದ ಆರ್ಥಿಕ ವಲಯವು 2026ರ ವೇಳೆಗೆ 21.2 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿರುವುದು ದೇಶದ ಆರ್ಥಿಕ ಬಲಕ್ಕೆ ಸಾಕ್ಷಿಯಾಗಿದೆ ಎಂದರು. ಚಂದ್ರಯಾನ-3 ಅಂತಹ ಸಾಧನೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿವೆ. ಯುವಜನತೆ ತಂತ್ರಜ್ಞಾನ ಮತ್ತು ನವೀನತೆಯತ್ತ ಗಮನಹರಿಸಬೇಕು ಹಾಗೂ ದೇಶವು ಆಮದು ಅವಲಂಬನೆಯನ್ನು ಕಡಿಮೆ ಮಾಡಿ ಸ್ವಾವಲಂಬಿ ಕೈಗಾರಿಕಾ ಕೇಂದ್ರವಾಗಿ ಹೊರಹೊಮ್ಮಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಡಾ.ಶಾಂತರಾಮ್ ಶೆಟ್ಟಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ