image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟರ್ಕಿ ಪೊಲೀಸರ ಬಲೆಯಲ್ಲಿ ದಾವುದ್ ಇಬ್ರಾಹಿಂ ಆಪ್ತ ಸಲೀಂ ದೋಲಾ: ಅಂಡರ್‌ವರ್ಲ್ಡ್ ಸಾಮ್ರಾಜ್ಯಕ್ಕೆ ಬಿತ್ತು ಭಾರಿ ಪೆಟ್ಟು

ಟರ್ಕಿ ಪೊಲೀಸರ ಬಲೆಯಲ್ಲಿ ದಾವುದ್ ಇಬ್ರಾಹಿಂ ಆಪ್ತ ಸಲೀಂ ದೋಲಾ: ಅಂಡರ್‌ವರ್ಲ್ಡ್ ಸಾಮ್ರಾಜ್ಯಕ್ಕೆ ಬಿತ್ತು ಭಾರಿ ಪೆಟ್ಟು

ಟರ್ಕಿ : ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವುದ್ ಇಬ್ರಾಹಿಂನ ನೆರಳಿನಂತೆ ಕೆಲಸ ಮಾಡುತ್ತಿದ್ದ ಹಾಗೂ ಡಿ-ಕಂಪನಿಯ ಪ್ರಮುಖ ಆರ್ಥಿಕ ಆಧಾರಸ್ತಂಭವೆಂದೇ ಗುರುತಿಸಲ್ಪಟ್ಟಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಕೋರ ಸಲೀಂ ದೋಲಾನನ್ನು ಟರ್ಕಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನದ ನೆಲದಲ್ಲಿ ಆಶ್ರಯ ಪಡೆದಿರುವ ಭಾರತದ ಶತ್ರುಗಳ ಮೇಲೆ ಅನಾಮಿಕರು ನಡೆಸುತ್ತಿರುವ ದಾಳಿಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇದೀಗ ದಾವುದ್‌ನ ಬಲಗೈ ಬಂಟನ ಬಂಧನವಾಗಿರುವುದು ಅಂಡರ್‌ವರ್ಲ್ಡ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಮುಂಬೈನಿಂದ ದಾವುದ್ ಜೊತೆಗೇ ದುಬೈಗೆ ಪರಾರಿಯಾಗಿದ್ದ ದೋಲಾ, ಅಲ್ಲಿಂದಲೇ ಭಾರತ ಸೇರಿದಂತೆ ಹತ್ತಾರು ದೇಶಗಳಲ್ಲಿ ಹರಡಿಕೊಂಡಿದ್ದ ಬೃಹತ್ ಡ್ರಗ್ ಮಾಫಿಯಾ ಮತ್ತು ಹವಾಲಾ ಜಾಲವನ್ನು ಮುನ್ನಡೆಸುತ್ತಿದ್ದನು.

​ಕಳೆದ 2025ರಲ್ಲಿ ಮುಂಬೈ ಪೊಲೀಸರು ಈತನ ಜಾಲದ ಮೇಲೆ ದಾಳಿ ನಡೆಸಿ ಹಲವು ಆಪ್ತರು ಹಾಗೂ ಕುಟುಂಬಸ್ಥರನ್ನು ಬಂಧಿಸಿದಾಗ ಈತ ಜಾರಿಕೊಂಡಿದ್ದನು. ಆದರೆ ಭಾರತೀಯ ಭದ್ರತಾ ಸಂಸ್ಥೆಗಳು ಈತನ ವಿರುದ್ಧ ಹೊರಡಿಸಿದ್ದ ರೆಡ್ ಕಾರ್ನರ್ ನೋಟಿಸ್ ಇದೀಗ ಫಲ ನೀಡಿದ್ದು, ಟರ್ಕಿಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ಮುಂಬೈ ಸರಣಿ ಸ್ಫೋಟದ ಸಂಚುಗಳು ಹಾಗೂ ದಾವುದ್ ಇಬ್ರಾಹಿಂಗೆ ತಲುಪುತ್ತಿದ್ದ ಹವಾಲಾ ಹಣದ ಹರಿವಿನ ಬಗ್ಗೆ ದೋಲಾ ಬಳಿ ಮಹತ್ವದ ಮಾಹಿತಿಗಳಿದ್ದು, ಈತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಬಂಧನವು ಭಾರತದ ಶತ್ರುಗಳನ್ನು ಹಂತ ಹಂತವಾಗಿ ಮಟ್ಟಹಾಕುತ್ತಿರುವ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯಾಚರಣೆಗೆ ಸಂದ ಮತ್ತೊಂದು ದೊಡ್ಡ ಯಶಸ್ಸಾಗಿದೆ.

Category
ಕರಾವಳಿ ತರಂಗಿಣಿ