image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಮ್ಮ ಕ್ಷಿಪಣಿಗಳನ್ನು ಭಾರತದ ವಿರುದ್ದ ಕನಿಷ್ಠ ಪ್ರತಿರೋಧವನ್ನು ತೋರುವ ಸಲುವಾಗಿ ಮಾತ್ರ ಸಿದ್ದಪಡಿಸಲಾಗಿದೆ : ಪಾಕಿಸ್ಥಾನ

ನಮ್ಮ ಕ್ಷಿಪಣಿಗಳನ್ನು ಭಾರತದ ವಿರುದ್ದ ಕನಿಷ್ಠ ಪ್ರತಿರೋಧವನ್ನು ತೋರುವ ಸಲುವಾಗಿ ಮಾತ್ರ ಸಿದ್ದಪಡಿಸಲಾಗಿದೆ : ಪಾಕಿಸ್ಥಾನ

ಇಸ್ಲಾಮಾಬಾದ್ : ಅಮೆರಿಕಕ್ಕೆ ಪಾಕಿಸ್ತಾನವೂ ಸೇರಿದಂತೆ ಹಲವು ರಾಷ್ಟ್ರಗಳ ಪರಮಾಣು ಬೆದರಿಕೆ ಇದೆ ಎನ್ನುವ ಅಲ್ಲಿನ ಗುಪ್ತಚರ ಇಲಾಖೆಯ ವರದಿಗೆ, ಪಾಕ್ ಬೆಚ್ಚಿಬಿದ್ದಿದೆ. ಈಗಾಗಲೇ ಆರ್ಥಿಕವಾಗಿ ಜರ್ಝರಿತರಾಗಿರುವ ಪಾಕಿಸ್ತಾನಕ್ಕೆ ಎಲ್ಲಿ ಈ ವರದಿ ಬುಡಕ್ಕೆ ಬರುತ್ತೋ ಎಂದು ಅಮೆರಿಕಕ್ಕೆ ಸ್ಪಷ್ಟನೆಯನ್ನು ನೀಡಿದೆ. ರಾಜತಾಂತ್ರಿಕವಾಗಿ ಹೇಳಿಕೆಯನ್ನು ನೀಡುವುದನ್ನು ಬಿಟ್ಟು, ಕೊಟ್ಟ ಸ್ಪಷ್ಟನೆಯಲ್ಲಿ ಇನ್ನಷ್ಟು ಆಂತರಿಕ ಶಕ್ತಿಯನ್ನು ಬಯಲು ಮಾಡಿಕೊಂಡಿದೆ. ಕಳವಳಕಾರಿಯಾಗಿರುವುದು ನಮ್ಮ ಪರಮಾಣು ಕಾರ್ಯಕ್ರಮವಲ್ಲ, ಬದಲಿಗೆ ಭಾರತದ ಶಸ್ತ್ರಾಸ್ತ್ರಗಳ ಮುಂದೆ ನಮ್ಮದೇನೂ ಇಲ್ಲ ಎಂದು ಪರೋಕ್ಷವಾಗಿ ಹೇಳಿದೆ. ಪಾಕಿಸ್ತಾನದ ದೀರ್ಘ ಶ್ರೇಣೀಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಅಮೆರಿಕವನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಆ ದೇಶದ ಹೆಚ್ಚಿನ ಪರಮಾಣು ಕಾರ್ಯಕ್ರಮಗಳು, ಅಮೆರಿಕವನ್ನು ಟಾರ್ಗೆಟ್ ಮಾಡುವ ರೀತಿಯಲ್ಲಿ ಸಿದ್ದಪಡಿಸಲಾಗುತ್ತಿದೆ ಎಂದು ಇಂಟೆಲ್ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಇತ್ತೀಚೆಗೆ ವರದಿಯನ್ನು ನೀಡಿದ್ದರು. ಈ ವರದಿಯು ಪಾಕಿಸ್ತಾನದಲ್ಲಿ ಸಂಚಲನವನ್ನು ಮೂಡಿಸಿತ್ತು. ಮತ್ತು, ಇದಕ್ಕೆ ಸ್ಪಷ್ಟನೆ ಕೊಡುವ ಅನಿವಾರ್ತೆಗೆ ಪಾಕ್ ಬಿದ್ದಿತ್ತು.

ತನ್ನ ದೇಶದ ಕ್ಷಿಪಣಿ ಸಾಮರ್ಥ್ಯದ ಕುರಿತು ಅಮೆರಿಕದ ಗುಪ್ತಚರ ವರದಿಯನ್ನು ಪಾಕಿಸ್ತಾನ ಸ್ಪಷ್ಟವಾಗಿ ತಿರಸ್ಕರಿಸಿದೆ. ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಹೋಗಿ ಪಾಕಿಸ್ತಾನವು, ಭಾರತವನ್ನು ಎಳೆದು ತಂದಿದೆ. "ನಮ್ಮ ದೇಶದ ಕ್ಷಿಪಣಿ ಕಾರ್ಯಕ್ರಮಗಳು ಖಂಡಾಂತರ ವ್ಯಾಪ್ತಿಗಿಂತ ಕೆಳಗಿದೆ. ನಮ್ಮ ಪರಮಾಣು ಕಾರ್ಯಕ್ರಮಗಳು, ಭಾರತದ ವಿರುದ್ದ ಕನಿಷ್ಠ ಪ್ರತಿರೋಧವನ್ನು ತೋರುವ ಸಿದ್ದಾಂತವನ್ನು ಇಟ್ಟುಕೊಂಡು ಸಿದ್ದಪಡಿಸಲಾಗಿದೆ. ಪಾಕಿಸ್ತಾನವು, ಅಮೆರಿಕದ ಜೊತೆಗೆ ಪರಸ್ಪರ ಗೌರವ ಮತ್ತು ಸತ್ಯದ ಆಧಾರದ ಮೇಲೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಬದ್ದವಾಗಿದೆ" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರಾದ ತಾಹಿರ್ ಅಂದ್ರಾಬಿ ಹೇಳಿದ್ದಾರೆ. ಅಂದ್ರಾಬಿ ಸ್ಪಷ್ಟನೆಯನ್ನು ಮುಂದುವರಿಸುತ್ತಾ, 'ಭಾರತದ ಕ್ಷಿಪಣಿ ಸಾಮರ್ಥ್ಯದ ಮುಂದೆ ನಮ್ಮದೇನೂ ಇಲ್ಲ. ನಮ್ಮದು ಖಂಡಾಂತರ ವ್ಯಾಪ್ತಿಗಿಂತ ಕಮ್ಮಿಯಿದೆ. ಭಾರತವು 12 ಸಾವಿರ ಕಿಲೋಮೀಟರ್'ಗಿಂತಲೂ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ಕ್ಷಿಪಣಿ ಸಾಮರ್ಥ್ಯವನ್ನು ಹೊಂದಿದೆ. ಪ್ರಾದೇಶಿಕ ಭದ್ರತೆಯ ಆಲೋಚನೆಗಳನ್ನು ಮೀರಿ ಭಾರತ ತನ್ನ ಶಸ್ತ್ರಾಸ್ತ್ರವನ್ನು ವೃದ್ದಿಗೊಳಿಸುತ್ತಿದೆ. ಇದು, ಖಂಡಿತವಾಗಿಯೂ, ನೆರೆಹೊರೆಯ ರಾಷ್ಟ್ರಗಳಿಗೆ ಕಳವಳಕಾರಿ ವಿಚಾರವಾಗಿದೆ' ಎಂದು ಹೇಳಿಕೆಯನ್ನು ನೀಡಿದ್ದಾರೆ.

Category
ಕರಾವಳಿ ತರಂಗಿಣಿ