ಬೆಂಗಳೂರು: 'ರೈತ ಸಮೃದ್ಧನಾದರೆ ಕರ್ನಾಟಕ ಸಮೃದ್ಧ' ಎಂಬ ಸಂಕಲ್ಪದೊಂದಿಗೆ 2026-27ನೇ ಸಾಲಿನ ಆಯವ್ಯಯದಲ್ಲಿ ಕೃಷಿ ಮತ್ತು ಜಲಸಂಪನ್ಮೂಲ ಕ್ಷೇತ್ರಕ್ಕೆ ಸರ್ಕಾರ ಭರಪೂರ ಕೊಡುಗೆ ನೀಡಿದೆ. ಬಿತ್ತನೆಯಿಂದ ಮಾರುಕಟ್ಟೆಯವರೆಗೆ ರೈತರಿಗೆ ಸಮಗ್ರ ಬೆಂಬಲ ನೀಡುವ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಲಾಗಿದೆ. ರೈತರ ಆರ್ಥಿಕ ಭದ್ರತೆಗೆ ಒತ್ತು
ಬೃಹತ್ ಕೃಷಿ ಸಾಲ: ಈ ಬಾರಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 30,000 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿದೆ.
ಮುಂದಿನ 3 ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕಕ್ಕಾಗಿ ಈ ಯೋಜನೆ ಜಾರಿಯಾಗಲಿದೆ.
ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ MSIL ವತಿಯಿಂದ ಒಂದೇ ಸೂರಿನಡಿ ಬಿತ್ತನೆ ಬೀಜ, ಗೊಬ್ಬರ ದೊರೆಯುವ 'ರೈತ ಮಾಲ್' ಆರಂಭಿಸಲಾಗುವುದು.
ರೈತ ಕರೆ ಕೇಂದ್ರಗಳನ್ನು AI ತಂತ್ರಜ್ಞಾನದ ಮೂಲಕ ಉನ್ನತೀಕರಿಸಿ ಹವಾಮಾನ ಮತ್ತು ಮಾರುಕಟ್ಟೆ ಮಾಹಿತಿಯನ್ನು ತ್ವರಿತವಾಗಿ ನೀಡಲಾಗುವುದು.
ಮಣ್ಣಿನ ಗುಣಮಟ್ಟ ಹೆಚ್ಚಿಸಲು 'ವಸುಧಾಮೃತ' ಹಾಗೂ ಬೆಳೆ ರೋಗ ನಿಯಂತ್ರಣಕ್ಕೆ 'ಸಸ್ಯ ಸಂಜೀವಿನಿ' ಯೋಜನೆ ಜಾರಿಗೊಳಿಸಲಾಗುವುದು.
ದಾವಣಗೆರೆಯ ಹೊನ್ನಾಳಿ ಮತ್ತು ವಿಜಯಪುರದ ತೊರವಿಯಲ್ಲಿ 64 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಶೀತಲಗೃಹಗಳ ನಿರ್ಮಾಣ.
ರಾಮನಗರ, ಶಿಡ್ಲಘಟ್ಟ, ಹಾವೇರಿ, ಮೈಸೂರು ಹಾಗೂ ಕಲಬುರಗಿಯಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆಗೆ ಕ್ರಮ. ಹೈಡ್ರೋಪೊನಿಕ್ಸ್ ಮತ್ತು ಕೋಕೋಪೀಟ್ ಆಧಾರಿತ ಆಧುನಿಕ ಕೃಷಿಗೆ ಪ್ರೋತ್ಸಾಹ.
ಪಶುಸಂಗೋಪನೆ ಮತ್ತು ಮೀನುಗಾರಿಕೆ:
ಪರಿಹಾರ ಧನ ಹೆಚ್ಚಳ: ಕುರಿ, ಮೇಕೆ ಮತ್ತು ರಾಸುಗಳ ಆಕಸ್ಮಿಕ ಸಾವಿಗೆ ನೀಡುವ ಪರಿಹಾರ ಧನವನ್ನು ಹೆಚ್ಚಿಸಲಾಗಿದೆ.
ವರ್ಷಕ್ಕೊಂದು ಕರು: ಜಾನುವಾರುಗಳ ಸಂತಾನೋತ್ಪತ್ತಿ ಸುಧಾರಿಸಲು 1,000 ಗ್ರಾ.ಪಂ.ಗಳಲ್ಲಿ 'ಫಲಧಾರೆ' ಶಿಬಿರ.
ಜಾನುವಾರುಗಳ ರೋಗ ಪತ್ತೆಗೆ ಬೆಂಗಳೂರು ಮತ್ತು ಬೀದರ್‌ನಲ್ಲಿ ಮೊದಲ ಬಾರಿಗೆ ಸಿ.ಟಿ. ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆ.
ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಗುಣಮಟ್ಟದ ಮೀನು ಉತ್ಪನ್ನಗಳಿಗಾಗಿ 'ಮತ್ಸ್ಯದರ್ಶಿನಿ' ಸ್ಥಾಪನೆ.
ಜಲಸಂಪನ್ಮೂಲ: ಪ್ರಮುಖ ನೀರಾವರಿ ಯೋಜನೆಗಳು
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಯ ಪರಿಷ್ಕೃತ DPR ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು.
ಆಲಮಟ್ಟಿ ಅಣೆಕಟ್ಟು ಎತ್ತರಿಸುವ ಕಾರ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭ. ಖುಷ್ಕಿ ಜಮೀನಿಗೆ ಎಕರೆಗೆ 30 ಲಕ್ಷ ರೂ. ಹಾಗೂ ತರಿ ಜಮೀನಿಗೆ 40 ಲಕ್ಷ ರೂ. ಪರಿಹಾರ ನಿಗದಿ.
ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದ್ದು, 2ನೇ ಹಂತದ ಕಾಮಗಾರಿಗಳಿಗೆ ವೇಗ ನೀಡಲಾಗುವುದು.
ಅಣೆಕಟ್ಟಿನ 33 ಗೇಟುಗಳನ್ನು ಮುಂಗಾರು ಪೂರ್ವದಲ್ಲೇ ಬದಲಾಯಿಸಲಾಗುವುದು.
ಕಲಬುರಗಿ ಮತ್ತು ಬೆಳಗಾವಿ ವಿಭಾಗದ 10,000 ಫಲಾನುಭವಿಗಳಿಗೆ ಕುರಿ/ಮೇಕೆ ಘಟಕ ಸ್ಥಾಪಿಸಲು ಶೇ. 25 ರಷ್ಟು ಸಹಾಯಧನ ನೀಡಲಾಗುವುದು.