image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪತ್ರ ಬರೆದು 14 ಸೈಟ್ ಗಳನ್ನು ವಾಪಸ್ ಕೊಟ್ಟು ಸಿದ್ದರಾಮಯ್ಯ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ- ಕ್ಯಾ.ಬ್ರಿಜೇಶ್ ಚೌಟ

ಪತ್ರ ಬರೆದು 14 ಸೈಟ್ ಗಳನ್ನು ವಾಪಸ್ ಕೊಟ್ಟು ಸಿದ್ದರಾಮಯ್ಯ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ- ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು: ಪತ್ರ ಬರೆದು 14 ಸೈಟ್ ಗಳನ್ನು ವಾಪಸ್ ಕೊಟ್ಟು ಸಿದ್ದರಾಮಯ್ಯ ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ   ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಅವರು‌ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,

ಹೇಗೆ ವಾಲ್ಮೀಕಿ ಹಗರಣದಲ್ಲಿ 187 ಕೋಟಿ ಹಗರಣ ಅಲ್ಲ 84 ಕೋಟಿ ಹಗರಣ ಅಂತ ಹೇಳಿ ತಮ್ಮ ತಪ್ಪನ್ನು ಸದನದ ಒಳಗೆ ಒಪ್ಪಿಕೊಂಡಿದ್ದರೋ, ಅದೇ ರೀತಿ ಈಗ 14 ಸೈಟ್ ಗಳನ್ನು ವಾಪಸ್ ಕೊಟ್ಟು ತಪ್ಪಾಗಿದೆ  ಕ್ಷಮಿಸಿ ಅನ್ನುವ ರೀತಿಯ ವರ್ತನೆಯನ್ನು ಈ ರಾಜ್ಯದ ಮುಖ್ಯಮಂತ್ರಿಗಳು ಮಾಡುತ್ತಾ ಇದ್ದಾರೆ. ವಿಶೇಷವಾಗಿ ಕಾನೂನು ಮತ್ತು ಸಂವಿಧಾನಕ್ಕೆ ಒಂದು ಇಂಚು ಗೌರವವನ್ನು ಕೊಡದೆ ಕೇವಲ ಕುರ್ಚಿಯಲ್ಲಿ ಮಾತ್ರ ಕುಳಿತುಕೊಳ್ಳಬೇಕು ಎನ್ನುವ ಮಾನ್ಯ ಮುಖ್ಯಮಂತ್ರಿ ಅವರು ತತ್ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. 

 ಸಂವಿಧಾನದ ಆಶಯಗಳಿಗೆ ಗೌರವವನ್ನು ಕೊಟ್ಟು ರಾಜಕೀಯವನ್ನು ಮಾಡಬೇಕು ಮತ್ತು ವಿಶೇಷವಾಗಿ ಕರ್ನಾಟಕದ ಜನತೆಯ ಗೌರವ ಮತ್ತು ಕರ್ನಾಟಕದ ರಾಜಕೀಯ ಪರಂಪರೆ ಉಳಿಸಬೇಕು. ಸಿದ್ದರಾಮಯ್ಯ ತಮ್ಮ 40 ವರ್ಷದ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಜಂಬ ಕೊಚ್ಚಿಕೊಂಡು ರಾಜಕಾರಣವನ್ನು ಮಾಡಿಕೊಂಡು ಬಂದಿದ್ದಾರೆ. ಇವತ್ತು ಅವರ ರಾಜಕಾರಣದಲ್ಲಿ ಬಿಳಿ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಇಂದು ಇದೆ. 

ರಾಜ್ಯದ ಆರ್ಥಿಕ ಸ್ಥಿತಿಯನ್ನು ದಿವಾಳಿ ಹಂತಕ್ಕೆ ತಂದು ನಿಲ್ಲಿಸಿ, ಇಡೀ ರಾಜ್ಯದಲ್ಲಿ ಅಭಿವೃದ್ಧಿಗೆ ಇದ್ದ ಹಣವನ್ನು ಶಾಸಕರು  ಟ್ರಾನ್ಸ್ ಫರ್ ಮಾಡಿ ಲೋಕಸಭಾ ಚುನಾವಣೆಗೆ ಹಂಚಿಕೆ ಮಾಡಿದ ರೀತಿಯಲ್ಲಿ ವಾಲ್ಮೀಕಿ ನಿಗಮದ ಹಗರಣ ಆಗಿದೆ. ಬಡವರ ಜಾಗವನ್ನು ಕಬಳಿಸಿ ನೇರವಾಗಿ ತಮ್ಮ ಪತ್ನಿಗೆ ಈ ಸೈಟನ್ನು ಹಂಚಿಕೆ ಮಾಡಿ ಯಾವುದೇ ರೀತಿಯ ಮೌಲ್ಯಗಳನ್ನು ಪಾಲಿಸದೆ ರಾಜಕಾರಣವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಭಾರತೀಯ ಜನತಾ ಪಾರ್ಟಿ  ಈ ಹಗರಣ ಬಯಲಿಗೆ ಬಂದ ದಿನದಿಂದ ಜನರ ಆಶಯಗಳಿಗೆ ಅನುಗುಣವಾಗಿ ದೊಡ್ಡ ಹೋರಾಟವನ್ನು ಸದನದ ಒಳಗೆ ಸದನದ ಹೊರಗಡೆ  ಮಾಡಿಕೊಂಡು ಬಂದಿದೆ.     

ನಾನು ಮತ್ತೆ ಸಿದ್ದರಾಮಯ್ಯನವರಿಗೆ ಅಗ್ರಹವನ್ನು ಮಾಡುತ್ತೆನೆ. ನಾಚಿಕೆ ಮಾನ ಮರ್ಯಾದೆಯನ್ನು ಉಳಿಸಿಕೊಳ್ಳಲು ತಾವು ರಾಜೀನಾಮೆ ಕೊಡೋದು ಉತ್ತಮ ಎಂದರು. ಪತ್ರಿಕಾಗೋಷ್ಠಿಯಲ್ಲಿ  ಸತೀಶ್ ಕುಂಪಲ,  ಮಂಗಳೂರು ಉತ್ತರದ ಶಾಸಕರಾದ ಭರತ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ರಾಕೇಶ್ ರೈ, ನಂದನ್ ಮಲ್ಯ ಸುಜಿತ್ ಆಳ್ವ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ