image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೋದಿಯವರ ಒಂದು ದಶಕದ ಆಡಳಿತದಲ್ಲಿ ಟೆಕ್ನಾಲಜಿ ಜನಸಾಮಾನ್ಯರ ಲೈಫ್ ನ್ನೇ ಹೇಗೆ ಚೇಂಜ್ ಮಾಡಿದೆ : ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್

ಮೋದಿಯವರ ಒಂದು ದಶಕದ ಆಡಳಿತದಲ್ಲಿ ಟೆಕ್ನಾಲಜಿ ಜನಸಾಮಾನ್ಯರ ಲೈಫ್ ನ್ನೇ ಹೇಗೆ ಚೇಂಜ್ ಮಾಡಿದೆ : ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್

ನವದೆಹಲಿ : ಬರೀ ಹತ್ತೇ ವರ್ಷದಲ್ಲಿ, ಅಂದ್ರೆ ಮೋದಿಯವರ ಒಂದು ದಶಕದ ಆಡಳಿತದಲ್ಲಿ ಟೆಕ್ನಾಲಜಿ ನಮ್ಮ ಜನಸಾಮಾನ್ಯರ ಲೈಫ್ ಅನ್ನೇ ಹೇಗೆ ಚೇಂಜ್ ಮಾಡಿದೆ ಅಂತ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಭರ್ಜರಿಯಾಗಿ ವಿವರಿಸಿದ್ದಾರೆ. ಮುಖ್ಯವಾಗಿ, ಮುಂಬೈನ ಒಬ್ಬ ಸಾಮಾನ್ಯ ಬೀದಿ ವ್ಯಾಪಾರಿಯ ಉದಾಹರಣೆ ಕೊಟ್ಟು, ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಅಕೌಂಟ್ ಹಾಗೂ ಡಿಜಿಟಲ್ ಪೇಮೆಂಟ್ಸ್ ಎಷ್ಟು ಈಸಿಯಾಗಿ ಸಿಗ್ತಿದೆ ಅನ್ನೋದನ್ನ ಇಡೀ ಪ್ರಪಂಚದ ಮುಂದಿಟ್ಟಿದ್ದಾರೆ. ಮ್ಯಾಕ್ರನ್ ಅವರು ಭಾಷಣದಲ್ಲಿ ಹತ್ತು ವರ್ಷದ ಹಿಂದಿನ ಕಥೆನ ನೆನಪು ಮಾಡಿದರು. "ಹತ್ತು ವರ್ಷಗಳ ಹಿಂದೆ ಮುಂಬೈನಲ್ಲಿರೋ ಒಬ್ಬ ಬೀದಿ ವ್ಯಾಪಾರಿ ಬ್ಯಾಂಕ್‌ಗೆ ಹೋಗಿ ಅಕೌಂಟ್ ಓಪನ್ ಮಾಡ್ಬೇಕು ಅಂದ್ರೆ ಅದು ದೊಡ್ಡ ಸಾಹಸನೇ ಆಗಿತ್ತು. ಅವರ ಹತ್ರ ಸರಿಯಾದ ಅಡ್ರೆಸ್ ಪ್ರೂಫ್ ಇರ್ಲಿಲ್ಲ, ಪೇಪರ್ಸ್ ಇರ್ಲಿಲ್ಲ, ಬ್ಯಾಂಕ್ ಒಳಗಡೆ ಹೋಗೋಕೂ ಆಕ್ಸೆಸ್ ಇರ್ತಿರಲಿಲ್ಲ" ಅಂತ ಹೇಳಿದ್ದರು. 

ಆದರೆ ಇವತ್ತಿನ ಕಥೆನೇ ಬೇರೆ ಅಂತ ಮ್ಯಾಕ್ರನ್ ಹೆಮ್ಮೆಯಿಂದ ಹೇಳಿದ್ದಾರೆ. ಅವತ್ತು ಬ್ಯಾಂಕ್ ಮೆಟ್ಟಿಲು ಹತ್ತೋಕೆ ಪರದಾಡ್ತಿದ್ದ ಅದೇ ಬೀದಿ ವ್ಯಾಪಾರಿ, ಇವತ್ತು ತನ್ನ ಮೊಬೈಲ್‌ನಲ್ಲೇ ದೇಶದ ಮೂಲೆ ಮೂಲೆಯಿಂದ ಫ್ರೀಯಾಗಿ ಮತ್ತು ಕ್ಷಣಾರ್ಧದಲ್ಲಿ ಡಿಜಿಟಲ್ ಪೇಮೆಂಟ್ ರಿಸೀವ್ ಮಾಡ್ತಿದ್ದಾನೆ. ಇದು ಬರೀ ಟೆಕ್ನಾಲಜಿ ಬದಲಾವಣೆ ಅಲ್ಲ, ಇಡೀ ಭಾರತೀಯರ ಲೈಫ್‌ಸ್ಟೈಲ್ ಬದಲಾಗಿರೋದರ ಸಂಕೇತ ಅಂತ ಅವರು ಬಣ್ಣಿಸಿದ್ದಾರೆ. ಇವತ್ತು ಹಳ್ಳಿ ಮೂಲೆಗೂ ಕ್ಯೂಆರ್ (QR) ಕೋಡ್ ಮತ್ತೆ ಸ್ಕ್ಯಾನರ್ ಬಂದುಬಿಟ್ಟಿದೆ. ಪ್ರಪಂಚದ ಬೇರೆ ಯಾವ ದೊಡ್ಡ ದೇಶಕ್ಕೂ ಮಾಡೋಕೆ ಆಗದಂತಹ ಸಾಹಸನ ನಮ್ಮ ಭಾರತ ಮಾಡಿದೆ ಅಂತ ಫ್ರೆಂಚ್ ಅಧ್ಯಕ್ಷರು ಫುಲ್ ಹೊಗಳಿದ್ದಾರೆ. 1.4 ಬಿಲಿಯನ್ ಜನರಿಗೆ ಡಿಜಿಟಲ್ ಐಡೆಂಟಿಟಿ (ಆಧಾರ್) ಕೊಟ್ಟಿರೋದು, ಪ್ರತಿ ತಿಂಗಳು ಬರೋಬ್ಬರಿ 20 ಬಿಲಿಯನ್ ಟ್ರಾನ್ಸಾಕ್ಷನ್ ಹ್ಯಾಂಡಲ್ ಮಾಡ್ತಿರೋ ನಮ್ಮ 'ಯುಪಿಐ' (UPI) ಸಿಸ್ಟಮ್, ಮತ್ತೆ 500 ಮಿಲಿಯನ್ ಡಿಜಿಟಲ್ ಹೆಲ್ತ್ ಐಡಿಗಳನ್ನ ಕ್ರಿಯೇಟ್ ಮಾಡಿರೋದು ನಿಜಕ್ಕೂ ಗ್ರೇಟ್. ಈ ನಮ್ಮ 'ಇಂಡಿಯಾ ಸ್ಟಾಕ್' ಸಿಸ್ಟಮ್ ನೋಡಿ ಇಡೀ ಪ್ರಪಂಚವೇ ದಂಗಾಗಿದೆ. ಈ ಬೃಹತ್ ಎಐ ಸಮ್ಮಿಟ್‌ನಲ್ಲಿ ಡಿಜಿಟಲ್ ಪೇಮೆಂಟ್ ಮಾತ್ರವಲ್ಲ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ ನಮ್ಮ ದೇಶ ಕೃಷಿ, ಹೆಲ್ತ್‌ಕೇರ್ ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡುತ್ತಿರುವ ಕ್ರಾಂತಿಯ ಬಗ್ಗೆ ಚರ್ಚೆ ಆಯ್ತು. ಟೆಕ್ನಾಲಜಿಗೆ ಮನುಷ್ಯತ್ವವನ್ನು ಸೇರಿಸಿ ಕೆಲಸ ಮಾಡುತ್ತಿರುವ ಭಾರತದ ಯೋಜನೆಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಮ್ಯಾಕ್ರನ್ ಹೇಳಿದರು.

Category
ಕರಾವಳಿ ತರಂಗಿಣಿ