image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಮೆರಿಕದ ದ್ವಿದಳ ಧಾನ್ಯಗಳು ಭಾರತಕ್ಕೆ ರಫ್ತಾಗುವುದಿಲ್ಲ : ಶ್ವೇತ ಭವನದಿಂದ ಹೇಳಿಕೆ

ಅಮೆರಿಕದ ದ್ವಿದಳ ಧಾನ್ಯಗಳು ಭಾರತಕ್ಕೆ ರಫ್ತಾಗುವುದಿಲ್ಲ : ಶ್ವೇತ ಭವನದಿಂದ ಹೇಳಿಕೆ

ವಾಷಿಂಗ್ಟನ್‌ : ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಮಾತುಕತೆ ಮುಂದುವರಿದಂತೆ ಅಮೆರಿಕವು ಮೃದು ಧೋರಣೆಯನ್ನು ತಾಳುತ್ತಿದೆ ಎನ್ನಲಾಗಿದೆ. ಅಮೆರಿಕದ ದ್ವಿದಳ ಧಾನ್ಯಗಳು ಭಾರತಕ್ಕೆ ರಫ್ತಾಗುತ್ತವೆ ಎಂಬ ಅಂಶವನ್ನು ಕೈಬಿಟ್ಟು ಹೊಸ ಹೇಳಿಕೆಯನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಈ ಮೊದಲು ಬಿಡುಗಡೆ ಮಾಡಿದ ಹೇಳಿಕೆಯಲ್ಲಿದ್ದ ಒಂದಷ್ಟು ಅಂಶಗಳು ಭಾರತದ ಕೃಷಿ ಮತ್ತು ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಿದ್ದವು. ಇದೀಗ ಈ ಅಂಶಗಳನ್ನು ಅಮೆರಿಕ ಕೈಬಿಟ್ಟಿದೆ. ಇದಕ್ಕಾಗಿ ಹೊಸ ಮಾಹಿತಿ ಪತ್ರ (ಫ್ಯಾಕ್ಟ್‌ ಶೀಟ್‌)ವನ್ನು ಶ್ವೇತಭವನವು ಬಿಡುಗಡೆ ಮಾಡಿದ್ದು, ಅಮೆರಿಕದ ಆದ್ಯತೆಗಳು ಮತ್ತು ಯಾವೆಲ್ಲಾ ಅಂಶಗಳಿಗೆ ಭಾರತದ ಸಮ್ಮತಿಯಿದೆ ಎಂಬ ಅಂಶಗಳನ್ನು ಈ ಪತ್ರ ಒಳಗೊಂಡಿದೆ. ಹೊಸ ಮಾಹಿತಿ ಪತ್ರದಲ್ಲಿನ ಅಂಶಗಳು ಈ ಹಿಂದೆ ಬಿಡುಗಡೆಯಾದ ಆವೃತ್ತಿಗಿಂತ ಕೊಂಚ ಭಿನ್ನವಾಗಿವೆ.
ಭಾರತವು ತನ್ನ ಡಿಜಿಟಲ್ ಸೇವಾ ತೆರಿಗೆಗಳನ್ನು ತೆಗೆದುಹಾಕಲಿದೆ ಎಂದು ಉಲ್ಲೇಖಿಸಲಾಗಿದ್ದ ಭಾಗವನ್ನು ಮತ್ತು ಎಲೆಕ್ಟ್ರಾನಿಕ್ ಪ್ರಸರಣಗಳ ಮೇಲೆ ಕಸ್ಟಮ್ಸ್ ಸುಂಕ ವಿಧಿಸುವುದನ್ನು ನಿಷೇಧಿಸುವ ನಿಯಮಗಳ ಉಲ್ಲೇಖವನ್ನು ಪರಿಷ್ಕೃತ ಮಾಹಿತಿ ಪತ್ರದಿಂದ ತೆಗೆದುಹಾಕಲಾಗಿದೆ. ಅಲ್ಲದೆ, ಭಾರತವು ಅಮೆರಿಕದಿಂದ ಏನನ್ನು ಖರೀದಿಸಲು ಉದ್ದೇಶಿಸಿದೆ ಎಂದು ಉಲ್ಲೇಖಿಸುವಾಗ ಕೃಷಿ ಉತ್ಪನ್ನಗಳನ್ನೂ ತೆಗೆದುಹಾಕಲಾಗಿದೆ. ಅಮೆರಿಕದ ಕೃಷಿ ಉತ್ಪನ್ನಗಳ ಪಟ್ಟಿಯಲ್ಲಿದ್ದ 'ಕೆಲ ಬೇಳೆಕಾಳುಗಳು' ಎಂಬ ಉಲ್ಲೇಖವನ್ನು ತೆಗೆದುಹಾಕಲಾಗಿದೆ. ಅಮೆರಿಕದ ಉತ್ಪನ್ನಗಳ ಖರೀದಿ ಕುರಿತಾದ ವಾಕ್ಯವನ್ನೂ ಪರಿಷ್ಕರಿಸಲಾಗಿದ್ದು, ಇಂಧನ, ಮಾಹಿತಿ, ಸಂವಹನ ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮುಂತಾದ ವಲಯಗಳಲ್ಲಿ 45.35 ಲಕ್ಷ ಕೋಟಿ ರೂ.ಗಿಂತ (500 ಬಿಲಿಯನ್ ಡಾಲರ್‌) ಹೆಚ್ಚಿನ ಮೌಲ್ಯದ ಸರಕುಗಳನ್ನು ಅಮೆರಿಕದಿಂದ ಭಾರತವು 'ಖರೀದಿಸಲು ಬದ್ಧವಾಗಿದೆ' ಎಂಬ ಪದವನ್ನು 'ಖರೀದಿಸಲು ಉದ್ದೇಶಿಸಿದೆ' ಎಂದು ಬದಲಾಯಿಸಲಾಗಿದೆ.

Category
ಕರಾವಳಿ ತರಂಗಿಣಿ