image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಜಿತ್ ದೋವಲ್ ರಿಂದ ಟ್ರಂಪ್ ಆಡಳಿತಕ್ಕೆ ಬಿಗಿಯಾದ ಹಾಗೂ ಅಂತಿಮವಾದ ಎಚ್ಚರಿಕೆ!

ಅಜಿತ್ ದೋವಲ್ ರಿಂದ ಟ್ರಂಪ್ ಆಡಳಿತಕ್ಕೆ ಬಿಗಿಯಾದ ಹಾಗೂ ಅಂತಿಮವಾದ ಎಚ್ಚರಿಕೆ!

ನವದೆಹಲಿ : ಭಾರತ ಹಾಗೂ ಅಮೆರಿಕ ನಡುವಿನ ಮುರಿದುಬಿದ್ದ ರಾಜತಾಂತ್ರಿಕ ಸಂಬಂಧಗಳನ್ನು ಸರಿಪಡಿಸುವ ಕಾರ್ಯವನ್ನು ಭಾರತ ಸರ್ಕಾರ ರಾಷ್ಟ್ರೀಯ ಭದ್ರತಾ ಅಲಹೆಗಾರ ಅಜಿತ್‌ ದೋವಲ್‌ಗೆ ವಹಿಸಿತ್ತು ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಟ್ರಂಪ್ ಆಡಳಿತಕ್ಕೆ ಬಿಗಿಯಾದ ಹಾಗೂ ಅಂತಿಮವಾದ ಎಚ್ಚರಿಕೆಯನ್ನು ನೀಡಿದ್ದರು. ಅಂದು ಸಭೆಯಲ್ಲಿ ಅಜಿತ್‌ ದೋವಲ್‌, 'ಭಾರತ ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಬಯಸುತ್ತದೆ. ಆದರೆ, ಅವರ ಬೆದರಿಕೆಗೆ ಮಾತ್ರ ಬಗ್ಗೋದಿಲ್ಲ' ಎಂದಿದ್ದರು ಎಂದು ಪತ್ರಿಕೆ ವರದಿ ಮಾಡಿದೆ. ಅಧಿಕಾರಿಗಳ ಪ್ರಕಾರ, ಸೆಪ್ಟೆಂಬರ್ ಆರಂಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಭೇಟಿ ಮಾಡಲು ವಾಷಿಂಗ್ಟನ್‌ಗೆ ಪ್ರಯಾಣ ಬೆಳೆಸಿದಾಗ ರಾಜತಾಂತ್ರಿಕ ಒತ್ತಡ ಹೇರುವ ಯತ್ನ ಆರಂಭವಾಗಿತ್ತು. ಮೋದಿ ಅವರು ಚೀನಾದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಕೆಲವೇ ಸಮಯದಲ್ಲಿ ಈ ಭೇಟಿ ನಿಗದಿಯಾಗಿತ್ತು. ವರದಿಯ ಪ್ರಕಾರ, ಅಜಿತ್‌ ದೋವಲ್‌ ಸಭೆ ಬಳಿಕ ವಾಷಿಂಗ್ಟನ್‌ನಲ್ಲಿ ನೆಮ್ಮದಿ ಇಲ್ಲದಾಗಿತ್ತು ಎನ್ನಲಾಗಿದೆ.

ಸಭೆಯ ಸಮಯದಲ್ಲಿ, ಭಾರತವು ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಮೀರಿ ವ್ಯಾಪಾರ ಮಾತುಕತೆಗಳನ್ನು ಪುನರಾರಂಭಿಸಲು ಬಯಸುತ್ತದೆ ಎಂದು ದೋವಲ್ ಸ್ಪಷ್ಟವಾಗಿ ತಿಳಿಸಿದ್ದರು. ಇದೇ ವೇಳೆ, ಯಾವುದೇ ಕಾರಣಕ್ಕೂ ವಾಷಿಂಗ್ಟನ್‌ನಿಂದ ಒತ್ತಡಕ್ಕೆ ಭಾರತ ಒಳಗಾಗುವುದಿಲ್ಲ. ಹಾಗೇನಾದರೂ ಅಗತ್ಯ ಬಿದ್ದರೆ ಟ್ರೇಡ್‌ ಡೀಲ್‌ಗಾಗಿ ಪ್ರಸ್ತುತ ಇರುವ ಡೊನಾಲ್ಡ್‌ ಟ್ರಂಪ್‌ ಅವರ ಅಧಿಕಾರ ಮುಗಿಯುವವರೆಗೂ ಕಾಯಲಿದೆ ಎಂದು ಸ್ಪಷ್ಟಪಡಿಸಿದ್ದರು ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ. ಇದೇ ವೇಳೆ ಎರಡೂ ದೇಶಗಳ ಸಂಬಂಧ ಸುಧಾರಿಸಬೇಕಾದಲ್ಲಿ ಅಮೆರಿಕ ಸಾರ್ವಜನಿಕವಾಗಿ ಮಾಡುತ್ತಿರುವ ಟೀಕೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯ ಮಾಡಿದ್ದರು. ಆಗಸ್ಟ್‌ನಲ್ಲಿ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದಾಗ ಮತ್ತು ತೈಲ ಖರೀದಿಯ ಮೂಲಕ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಭಾರತ ಹಣಕಾಸು ಒದಗಿಸುತ್ತಿದೆ ಎಂದು ಆರೋಪಿಸಿದಾಗ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು. ಅಮೆರಿಕದ ಅಧ್ಯಕ್ಷರು ಭಾರತದ ಆರ್ಥಿಕ ನೀತಿಗಳು ಮತ್ತು ಸುಂಕ ರಚನೆಯನ್ನು ಸಾರ್ವಜನಿಕವಾಗಿ ಟೀಕಿಸಿದರು.

Category
ಕರಾವಳಿ ತರಂಗಿಣಿ