image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಡವಾಗಿ ಬೆಳಕಿಗೆ ಬಂದ ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಖ್ವಾಜಾ ನಫಾಯ್ ಮೋಸದಾಟ

ತಡವಾಗಿ ಬೆಳಕಿಗೆ ಬಂದ ಪಾಕಿಸ್ತಾನ ತಂಡದ ವಿಕೆಟ್ ಕೀಪರ್ ಖ್ವಾಜಾ ನಫಾಯ್ ಮೋಸದಾಟ

ಲಾಹೋರ್ : ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಖ್ವಾಜಾ ನಫಾಯ್ ಮಾಡಿದ ಮೋಸದಾಟ ತಡವಾಗಿ ಬೆಳಕಿಗೆ ಬಂದಿದೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 207 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 13ಓವರ್​ಗಳಲ್ಲಿ 82 ರನ್ ಕಲೆಹಾಕಿದ್ದರು. 14ನೇ ಓವರ್​ನಲ್ಲಿ ದಾಳಿಗಿಳಿದ ಸ್ಪಿನ್ನರ್ ಮೊಹಮ್ಮದ್ ನವಾಝ್ 3ನೇ ಎಸೆತದಲ್ಲಿ ಜೋಶ್ ಫಿಲಿಪೆ ವಿಕೆಟ್ ಕಬಳಿಸಿದ್ದರು. ಇನ್ನು 5ನೇ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಮುಂದಾದ ಕೂಪರ್ ಕೊನೊಲಿ ಸ್ಟಂಪ್ ಔಟ್ ಆಗಿ ಹೊರ ನಡೆದಿದ್ದರು. ಆದರೆ ಇದು ನಾಟೌಟ್ ಆಗಿತ್ತು ಎಂಬುದು ಇದೀಗ ಬಹಿರಂಗವಾಗಿದೆ. ಏಕೆಂದರೆ ಪಾಕಿಸ್ತಾನ್ ವಿಕೆಟ್ ಕೀಪರ್ ತನ್ನ ಬಲಗೈನಲ್ಲಿ ಚೆಂಡನ್ನು ಹಿಡಿದು ಎಡಗೈನಲ್ಲಿ ಸ್ಟಂಪ್ ಔಟ್ ಮಾಡಿದ್ದರು. ಅಂದರೆ ಇಲ್ಲಿ ಚೆಂಡು ಹಾಗೂ ವಿಕೆಟ್​ಗೆ ಯಾವುದೇ ಕಾಂಟಾಕ್ಟ್ ಇರಲಿಲ್ಲ.

ಇದಾಗ್ಯೂ ಪಾಕಿಸ್ತಾನ್ ವಿಕೆಟ್ ಕೀಪರ್ ಖ್ವಾಜಾ ನಫಾಯ್ ಔಟ್ ಎಂದು ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೆ ಫೀಲ್ಡ್ ಅಂಪೈರ್ ಹಾಗೂ ಮೂರನೇ ಅಂಪೈರ್ ಸಹ ಸ್ಟಂಪ್ ಔಟ್ ನೀಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಮಹಾ ಮೋಸದಾಟದ ವಿಡಿಯೋ ವೈರಲ್ ಆಗಿದ್ದು, ಅಂಪೈರ್ ಹಾಗೂ ಪಾಕ್ ಆಟಗಾರರ ಕಳ್ಳಾಟದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇನ್ನು ಈ ಪಂದ್ಯದಲ್ಲಿ 208 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು 16.5 ಓವರ್​ಗಳಲ್ಲಿ 96 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕಿಸ್ತಾನ್ ತಂಡ 111 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Category
ಕರಾವಳಿ ತರಂಗಿಣಿ