ಮಂಗಳೂರು: ಪಾವೂರು ಬಳಿಯ ಉಳಿಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಮಾತನಾಡುತ್ತಾ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕಠಿಣ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಸಹಾಯಕ ಆಯುಕ್ತರ ನೇತ್ರದಲ್ಲಿ 6 ಮಂದಿಯ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯ ವರದಿಯನ್ನು ಆಧರಿಸಿ ಎಲ್ಲೆಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅದರ ದಾಸ್ತಾನು ಉಪಯೋಗಿಸುತ್ತಿರುವ ಬೋಟ್ಗಳು ವಾಹನಗಳು ಅವುಗಳ ಜಪ್ತಿ ದಾಸ್ತಾನಿಗೆ ಸಹಕರಿಸಿದ ಬಹುಮಾಲೀಕರಿಗೆ ಎಚ್ಚರಿಕೆ ಮತ್ತು ಕಾನೂನಿನ ಕ್ರಮ ಜರುಗಿಸುವುದು ಅಕ್ರಮ ಮರಳುಗಾರಿಕೆ ವಾಹನಗಳು ಸಂಚರಿಸದಂತೆ ನಿಗಾ ವೈಸಬೇಕಾಗಿದೆ. ಸಮನ್ವಯತೆ ಯೊಂದಿಗೆ ಕೆಲಸ ಸಾಧಿಸಬೇಕು. ಪೊಲೀಸರು ರಾತ್ರಿ ಹೊತ್ತಲ್ಲಿ ಗತ್ತು ಹೆಚ್ಚಿಸಬೇಕು. ಅಕ್ರಮ ಮರಳುಗಾರಿಕೆ ತಡೆಯಲು ಬೇಕಾಗಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು.
ಈ ಎಲ್ಲಾ ಸೂಚನೆಗಳ ನಂತರವೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.