image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೆಹಲಿ ಸ್ಫೋಟಕ್ಕೂ ಪುಲ್ವಾಮಾಗೂ ಲಿಂಕ್, ಕಾರು ಮಾಲೀಕ ಸಲ್ಮಾನ್ ವಶಕ್ಕೆ, ನದೀಮ್‌ಗಾಗಿ ಹುಡುಕಾಟ

ದೆಹಲಿ ಸ್ಫೋಟಕ್ಕೂ ಪುಲ್ವಾಮಾಗೂ ಲಿಂಕ್, ಕಾರು ಮಾಲೀಕ ಸಲ್ಮಾನ್ ವಶಕ್ಕೆ, ನದೀಮ್‌ಗಾಗಿ ಹುಡುಕಾಟ

ನವದೆಹಲಿ : ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದಲ್ಲಿ ಉಗ್ರರ ಕೈವಾಡದ ಅನುಮಾನ ಬಲವಾಗುತ್ತಿದೆ. ತನಿಖೆ ನಡೆಸುತ್ತಿರುವ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಹ್ಯುಂಡೈ ಐ20 ಕಾರಿನ ಹಿಂಭಾಗದಲ್ಲಿ ಸ್ಫೋಟವಾಗಿದೆ. ಇಷ್ಟೇ ಅಲ್ಲ ಸ್ಫೋಟಕ ಬಳಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲ ಸ್ಫೋಟಗೊಂಡ ಕಾರು ಫರೀದಾಬಾದ್ ನೋಂದಣಿ ಕಾರಾಗಿದೆ. ಈ ಕಾರಿನ ಮಾಲೀಕ ಸಲ್ಮಾನ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾರನ್ನು ಮಾರಾಟ ಮಾಡಿರುವುದಾಗಿ ಸಲ್ಮಾನ್ ಹೇಳಿದ್ದಾನೆ. ಆದರೆ ಈ ಸ್ಫೋಟದ ಹಿಂದೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಲಿಂಕ್ ಪತ್ತೆಯಾಗಿದೆ.

ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಮೊದಲು ಬ್ಲಾಸ್ಟ್ ಆದ ಕಾರು ಐ20. ಇದರ ಮೊದಲ ನೋಂದಣಿ ಹರ್ಯಾಣ ರಿಜಿಸ್ಟ್ರೇಶನ್ ಹೊಂದಿದೆ. ಇದರ ಮಾಲೀಕ ಸಲ್ಮಾನ್. ಕಾರಿನ ರಿಜಿಸ್ಟ್ರೇಶನ್ ವಿಳಾಸ ಶಾಂತಿನಗರ, ಗುರುಗಾಂವ್, ಹರ್ಯಾಣ ಎಂದಿದೆ. ಈತ ಐಟಿ20 ಕಾರನ್ನು ಮಾರಾಟ ಮಾಡಿದ್ದಾನೆ ಎಂದು ಹೇಳಿದ್ದಾನೆ. ಈತ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ತಾರೀಖ್‌ಗೆ ಕಾರು ಮಾರಾಟ ಮಾಡಿದ್ದಾನೆ. ತಾರೀಖ್ ಈ ಕಾರನ್ನು ನದೀಮ್‌ಗೆ ಮಾರಾಟ ಮಾಡಿದ್ದಾನೆ. ಆದರೆ ನದೀಮ್ ಹೆಸರಿಗೆ ಕಾರು ರಿಜಿಸ್ಟ್ರೇಶನ್ ಆಗಿಲ್ಲ. ಯಾವುದೇ ದಾಖಲೆಗಳು ವರ್ಗಾವಣೆ ಆಗಿಲ್ಲ. ಇತ್ತ ನದೀಮ್ ನಾಪತ್ತೆಯಾಗಿದ್ದಾನೆ. ದೆಹಲಿ ಸ್ಫೋಟಕ್ಕೂ ಪುಲ್ವಾಮಾಗೂ ತೀವ್ರ ನಂಟು ಪತ್ತೆಯಾಗುತ್ತಿದೆ. ಮೊದಲು ಐ20 ಕಾರು ಸ್ಫೋಟಗೊಂಡಿತ್ತು. ಬಳಿಕ ಮತ್ತೊಂದು ಕಾರು ಸ್ಫೋಟಗೊಂಡಿದೆ. ಈ ಸ್ಫೋಟದ ತೀವ್ರತೆಗೆ 8 ರಿಂದ 10 ಕಾರುಗಳು ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು. ಘಟನೆಯಲ್ಲಿ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಹಿಂದೆ ಉಗ್ರರ ಕೈವಾಡವಿದೆ ಅನ್ನೋ ಅನುಮಾನ ಮತ್ತಷ್ಟು ಹೆಚ್ಚಾಗಲು ಕೆಲ ಕಾರಣಗಳಿವೆ.

ಜಮ್ಮು ಮತ್ತು ಕಾಶ್ಮೀರ ಭದ್ರತಾ ಪಡೆ, ಪೊಲೀಸರು ಹರ್ಯಾಣದ ಫರೀಬಾದ್‌ನಲ್ಲಿ ಎರಡು ಮನೆಯಿಂದ 2900 ಕೆಜಿ ಸ್ಫೋಟಕ ವಶಪಡಿಸಿದ್ದಾರೆ. ಬೆಳಗ್ಗೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರೆ ರಾತ್ರಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡುತ್ತಿರುವ ವೈಟ್ ಕಾಲರ್ ಉಗ್ರರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಈ ಪ್ರಕರಣದಲ್ಲಿ ವೈದ್ಯರಾದ ಡಾ ಆದಿಲ್, ಮುಜಾಮಿಲ್ ಸೇರಿ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಭಾರಿ ಪ್ರಮಾಣದಲ್ಲಿ ಸ್ಫೋಟಕ ವಶಕ್ಕೆ ಪಡೆಯುವ ಮೂಲಕ ಉಗ್ರರ ಪ್ಲಾನ್ ವಿಫಲಗೊಳಿಸಲಾಗಿತ್ತು. ಇದೀಗ ದೆಹಲಿಯಲ್ಲಿ ಕಾರು ಸ್ಫೋಟಗೊಂಡ ಪ್ರಕರಣದಲ್ಲಿ ಸ್ಫೋಟವಾಗಿರುವ ಕಾರು ಹರ್ಯಾಣದ ಕಾರಿಗಿದೆ. ದೆಹಲಿ ಸ್ಫೋಟದ ಬೆನ್ನಲ್ಲೇ ದೆಹಲಿ ಪೊಲೀಸರು ಇಂದು ಬೆಳಗ್ಗೆ ಅರೆಸ್ಟ್ ಆಗಿರುವ ಶಂಕಿತ ಉಗ್ರರಾದ ವೈದ್ಯ ಆದಿಲ್ ಹಾಗೂ ಮುಜಾಮಿಲ್ ವಿಚಾರಣೆ ನಡೆಸುತ್ತಿದ್ದಾರೆ. ದೆಹಲಿ ಕಾರು ಸ್ಫೋಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಗ್ರರ ಕೈವಾಡವಿದೆ ಅನ್ನೋ ಅನುಮಾನಗಳು ಹೆಚ್ಚಾಗಿದೆ.

Category
ಕರಾವಳಿ ತರಂಗಿಣಿ