image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಂದಾನಗರಿಯಲ್ಲಿ ಮೆಕ್ಕಾ, ಮದೀನಾ ಪ್ರತಿರೂಪಗಳ ಆಕರ್ಷಣೆ, ವಿದ್ಯುತ್ ದೀಪಾಲಂಕಾರ

ಕುಂದಾನಗರಿಯಲ್ಲಿ ಮೆಕ್ಕಾ, ಮದೀನಾ ಪ್ರತಿರೂಪಗಳ ಆಕರ್ಷಣೆ, ವಿದ್ಯುತ್ ದೀಪಾಲಂಕಾರ

ಬೆಳಗಾವಿ: ಕಳೆದ ಎರಡು ವಾರಗಳಿಂದ ಅದ್ಧೂರಿ ಗಣೇಶೋತ್ಸವಕ್ಕೆ ಸಾಕ್ಷಿಯಾಗಿದ್ದ ಕುಂದಾನಗರಿ ಬೆಳಗಾವಿ ಈಗ ಇಸ್ಲಾಂ ಸಮುದಾಯದ ಪವಿತ್ರ ಈದ್-ಮಿಲಾದ್ ಹಬ್ಬದ ಸಂಭ್ರಮಕ್ಕೆ ಹೊರಳಿದೆ. ಮೆಕ್ಕಾ, ಮದೀನಾ ಮಸೀದಿಗಳ ಪ್ರತಿರೂಪಗಳು ನಗರದಲ್ಲಿ ಆಕರ್ಷಿಸುತ್ತಿವೆ.

ಗಡಿನಾಡಿನಲ್ಲಿ ಎಲ್ಲ ಧರ್ಮಗಳ ಪ್ರತಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲದೇ ಭಾವೈಕ್ಯತೆ ಸಂದೇಶವನ್ನು ಸಾರುವಲ್ಲೂ ಇಲ್ಲಿನ ಜನ ಮುಂದಿದ್ದಾರೆ. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜಯಂತಿ ಅಂಗವಾಗಿ ಸೆ.16ರಂದು ನಡೆಯಬೇಕಿದ್ದ ಈದ್-ಮಿಲಾದ್ ಮೆರವಣಿಗೆಯನ್ನು ಗಣೇಶೋತ್ಸವ ಹಿನ್ನೆಲೆಯಲ್ಲಿ ಸೆ.22ಕ್ಕೆ ಮುಂದೂಡಲಾಗಿತ್ತು. ಸಾಮರಸ್ಯ ಮತ್ತು ಭಾವೈಕತ್ಯೆಗಾಗಿ ಮುಸ್ಲಿಂ ಮುಖಂಡರು ಈ ತೀರ್ಮಾನ ಕೈಗೊಂಡಿದ್ದರು.

ಬೆಳಗಾವಿಯ ಪೊಲೀಸ್ ಕೇಂದ್ರ ಸ್ಥಾನದಲ್ಲಿ ಖಾದ್ರಿ ಯಂಗ್ ಕಮಿಟಿ ಮತ್ತು ಸುನ್ನಿ ಮುಸ್ಲಿಂ ಜಮಾತ್ ವತಿಯಿಂದ ತಯಾರಿಸಿರುವ ಇಸ್ಲಾಂ ಧಾರ್ಮಿಕ ಕ್ಷೇತ್ರಗಳಾದ ಮೆಕ್ಕಾ, ಮದೀನಾ, ಕಾಬಾ ಪ್ರತಿರೂಪಗಳು ಗಮನ ಸೆಳೆಯುತ್ತಿವೆ. ಕುಟುಂಬ ಸಮೇತರಾಗಿ ಆಗಮಿಸುತ್ತಿರುವ ಜನ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ