image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಿರುಪತಿ ಲಡ್ಡಿನಲ್ಲಿ ಪ್ರಾಣಿ ಜನ್ಯ ಕೊಬ್ಬು ಆರೋಪ: ಹನ್ನೊಂದು ದಿನ ಉಪವಾಸ ಕೈಗೊಂಡ ಪವನ್ ಕಲ್ಯಾಣ್

ತಿರುಪತಿ ಲಡ್ಡಿನಲ್ಲಿ ಪ್ರಾಣಿ ಜನ್ಯ ಕೊಬ್ಬು ಆರೋಪ: ಹನ್ನೊಂದು ದಿನ ಉಪವಾಸ ಕೈಗೊಂಡ ಪವನ್ ಕಲ್ಯಾಣ್

ಆಂಧ್ರ ಪ್ರದೇಶ: ಆಂಧ್ರದ  ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದ್ದು, ರಾಜಕೀಯವಾಗಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು 11 ದಿನಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಕೈಗೊಳ್ಳುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ  ಘೋಷಿಸಿದ್ದಾರೆ.

'ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಿದ ಸಂಗತಿಯನ್ನು ಇದಕ್ಕೂ ಮುನ್ನವೇ ಪತ್ತೆ ಹಚ್ಚಲು ಸಾಧ್ಯವಾಗದೇ ಇರುವುದಕ್ಕೆ ನನಗೆ ಅಪರಾಧ ಪ್ರಜ್ಞೆ ಕಾಡುತ್ತಿದೆ. ಅತ್ಯಂತ ಪವಿತ್ರವೆಂದು ಭಾವಿಸಲಾಗುವ ಲಡ್ಡು ಪ್ರಸಾದವನ್ನು ಈ ಹಿಂದಿನ ಆಡಳಿತ ಅಪವಿತ್ರಗೊಳಿಸಿದೆ. ಇಂಥ ಪಾಪವನ್ನು ಸಾಕಷ್ಟು ಮುನ್ನವೇ ಕಂಡುಹಿಡಿಯಲು ಸಾಧ್ಯವಾಗದೇ ಇರುವುದರಿಂದ ಹಿಂದೂ ಕುಲಕ್ಕೆ ಕಳಂಕ ಬಂದಿದೆ.

ಜನರ ಯೋಗಕ್ಷೇಮಕ್ಕೋಸ್ಕರ ಹೋರಾಟ ಮಾಡುತ್ತಿರುವ ನನಗೆ ಈ ಮೊದಲೇ ಇಂಥ ಘಟನೆಯನ್ನು ಪತ್ತೆ ಮಾಡಲು ಸಾಧ್ಯವಾಗದೇ ಇರುವುದು ಅತೀವ ನೋವು ತರಿಸಿದೆ' ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಸನಾತನ ಧರ್ಮವನ್ನು ನಂಬುವ ಪ್ರತಿಯೊಬ್ಬ ವ್ಯಕ್ತಿಯೂ ಕಲಿಯುಗದ ದೇವರಾದ ಬಾಲಾಜಿಗೆ ಮಾಡಿರುವ ಘೋರ ಅನ್ಯಾಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ. ಇದರ ಬಾಗವಾಗಿ ನಾನು ಹನ್ನೊಂದು ದಿನ ಉಪವಾಸ ಮಾಡಲಿದ್ದೇನೆ  ಎಂದಿದ್ದಾರೆ. ಸೆಪ್ಟಂಬರ್ 22ರಂದು ಬೆಳಿಗ್ಗೆ ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ದೇಗುಲದಲ್ಲಿ ವ್ರತ ಕೈಗೊಳ್ಳುತ್ತೇನೆ. ಹನ್ನೊಂದು ದಿನಗಳ ನಂತರ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ