image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೀದಿಬದಿ ವ್ಯಾಪಾರಸ್ಥರ ಉತ್ತಮ ಬದುಕಿಗೆ ಕೆಂಬಾವುಟವೊಂದೇ ಉತ್ತರ - ಸುನಿಲ್ ಕುಮಾರ್ ಬಜಾಲ್

ಬೀದಿಬದಿ ವ್ಯಾಪಾರಸ್ಥರ ಉತ್ತಮ ಬದುಕಿಗೆ ಕೆಂಬಾವುಟವೊಂದೇ ಉತ್ತರ - ಸುನಿಲ್ ಕುಮಾರ್ ಬಜಾಲ್

ಮಂಗಳೂರು: ಸಮಾಜದಲ್ಲಿ ಅತ್ಯಂತ ನಿಕ್ರಷ್ಟವಾಗಿ ಜೀವನ ನಡೆಸುವ ಬೀದಿಬದಿ ವ್ಯಾಪಾರಸ್ಥರ ಉತ್ತಮ ಬದುಕಿಗಾಗಿ ಕಳೆದ ಹಲವು ದಶಕಗಳಿಂದ ಸಂಘಟಿತ ಹೋರಾಟ ನಡೆಸಲಾಗಿದೆ.ಆಳುವ ವರ್ಗಗಳ ನಿರಂತರ ಧಾಳಿಯಿಂದ ಕಂಗೆಟ್ಟ ಬೀದಿಬದಿ ವ್ಯಾಪಾರಸ್ಥರು ಕೆಂಬಾವುಟವನ್ನು ಎತ್ತಿ ಹಿಡಿಯುವ ಮೂಲಕ ಸಂಘಟಿತ ಹೋರಾಟ ನಡೆಸಿ ತಮ್ಮ ರಕ್ಷಣೆಯನ್ನು ಮಾಡಿಕೊಂಡರು.ಆ ಮೂಲಕ ಕಳೆದ 14 ವರ್ಷಗಳಲ್ಲಿ ಸ್ಥಳಿಯಾಡಳಿತದ ದೌರ್ಜನ್ಯವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ನಗರದ ನಾಸಿಕ್ ಬಂಗೇರ ಸಭಾಭವನದಲ್ಲಿ ಜರಗಿದ ಮಂಗಳೂರು ನಗರ ದಕ್ಷಿಣ ವಲಯ ಮಟ್ಟದ ಬೀದಿಬದಿ ವ್ಯಾಪಾರಸ್ಥರ ಸಮಾವೇಶ ಉದ್ಘಾಟಿಸಿ ಮಾತನಾಡಿ,

ಬೀದಿಬದಿ ವ್ಯಾಪಾರಸ್ಥರನ್ನು ಅಸ್ಪೃಶ್ಯರಾಗಿ ನೋಡುತ್ತಿದ್ದ ಕಾಲದಲ್ಲಿ ಅವರ ಸ್ವಾಭಿಮಾನ ಮತ್ತು ಘನತೆಯ ಬದುಕನ್ನು ಎತ್ತಿ ಹಿಡಿಯಲು ಸಿಐಟಿಯು ಮಂಗಳೂರಿನಲ್ಲಿ ನಡೆಸಿದ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ವಿರೋಧಿಗಳ ಯಾವುದೇ ರೀತಿಯ ಷಡ್ಯಂತ್ರಗಳು ವಿಫಲಗೊಳ್ಳಲಿದೆ ನೈಜ ಬೀದಿ ವ್ಯಾಪಾರಿಗಳು ಕೆಂಬಾವುಟದ ಜೋತೆ ನಿಲ್ಲಲಿದ್ದಾರೆ ಕೆಂಬಾವುಟವೇ ಅವರ ಬದುಕನ್ನು ರಕ್ಷಣೆ ಮಾಡಲಿದೆ ಎಂದರು.

ಸಂಘದ ಗೌರವಾಧ್ಯಕ್ಷರಾದ ಬಿಕೆ ಇಮ್ತಿಯಾಜ್  ಮಾತನಾಡಿ ಅಪಪ್ರಚಾರ, ಟ್ರೋಲ್ ಮತ್ತು ವೈಯಕ್ತಿಕ ತೇಜೋವಧೆ ಮಾಡುವುದರಿಂದ ನಮ್ಮ ಗುರಿ ತಪ್ಪಿಸಲು ಸಾಧ್ಯವಿಲ್ಲ. ಬೀದಿ ವ್ಯಾಪಾರಿಗಳ ಪರವಾದ ಹೋರಾಟವನ್ನು ಪ್ರಾಮಾಣಿಕವಾಗಿ ಮುನ್ನಡೆಸಿದ್ದೇವೆ 667 ಮಂದಿಗೆ ಗುರುತಿನ ಚೀಟಿ 2022 ಅಕ್ಟೋಬರ್ ತಿಂಗಳಲ್ಲೇ ತಯಾರಾಗಿತ್ತು ಬಿಜೆಪಿ ನಗರಾಡಳಿತ ರಾಜಕೀಯ ಕಾರಣಕ್ಕಾಗಿ ತಡೆ ಹಿಡಿಯುತ್ತಾ ಬಂದಿದೆ . 

ಟೈಗರ್ ಕಾರ್ಯಾಚರಣೆ ಮೂಲಕ ಮಂಗಳೂರಿನ ಬೀದಿ ವ್ಯಾಪಾರಿಗಳ ಬದುಕನ್ನು ಹಾಳು ಮಾಡಿದೆ. ಬೀದಿ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ಬೀದಿ ವ್ಯಾಪಾರ ವಲಯ ರಚನೆ ಮಾಡಿದ್ದಾರೆ 93 ಜನರಿಗೆ ನಿರ್ಮಿಸಿರುವ ಬೀದಿ ವ್ಯಾಪಾರ ವಲಯ ವ್ಯಾಪಾರಿ, ಗ್ರಾಹಕ ಸ್ನೇಹಿಯಾಗಿಲ್ಲ ಹಣ್ಣು ತರಕಾರಿ ಮಾರಾಟಗಾರರಿಗೆ ಪೂರಕವಾಗಿಲ್ಲ ರಾಜ್ಯದ ಅನೇಕ ನಗರಗಳಲ್ಲಿ ನಿರ್ಮಿಸಲಾಗಿರುವ ವ್ಯಾಪಾರ  ವಲಯದಂತೆ ನಿರ್ಮಾಣ ಮಾಡಿಲ್ಲ. ವಲಯ ನಿರ್ಮಾಣ ಕಾಮಗಾರಿಯು ಕಳಪೆಯಾಗಿದೆ ಭ್ರಷ್ಟಾಚಾರ ಆಗಿರುವ ಬಗ್ಗೆ ಅನುಮಾನ ಇದ್ದು ತನಿಖೆ ನಡೆಸಲು ಒತ್ತಾಯಿಸಿದ ಅವರು ಎಲ್ಲಾ ಬೀದಿ ವ್ಯಾಪಾರಿಗಳಿಗೆ ಐಡಿ ಕಾರ್ಡ್ ವಿತರಿಸಬೇಕೆಂದು ಬಿಕೆ ಇಮ್ತಿಯಾಜ್ ಆಗ್ರಹಿಸಿದರು.

ಸಂಘದ ಹಿರಿಯ ಮುಖಂಡ ಹಸನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು.  ಬೀದಿಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಘಟಕದ ಮುಖಂಡರಾದ ಮುಜಾಫರ್ ಅಹ್ಮದ್, ಶಿವಪ್ಪ, ಸುಂದರ ದೇವಾಡಿಗ, ಸಿಕಂದರ್ ಬೇಗ್,ಕಾಜ ಮೊಯ್ದಿನ್,ಹಂಝ, ವಿಜಯ್,ಗುಡ್ಡಪ್ಪ,ಚಂದ್ರಶೇಖರ್ ಭಟ್,ಅಬ್ದುಲ್ ಖಾದರ್ ವಾಮಂಜೂರ್ ಸಾಬುದ್ದೀನ್, ಜಾಕಿರ್ ,ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್ ಎಸ್ ಸ್ವಾಗತಿಸಿ ವಂದಿಸಿದರು. 

ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

Category
ಕರಾವಳಿ ತರಂಗಿಣಿ