ಮಂಗಳೂರು: ಜೈನ ಧರ್ಮದ ವಿರುದ್ದ ನಿಂದನೀಯ ಶಬ್ದಗಳನ್ನು ಬಳಸಿ, ಶಾಂತ ಸ್ವಭವದ ಜೈನರ ವಿರುದ್ದ ಹಿಂದೂಗಳನ್ನು ಎತ್ತಿಕಟ್ಟಿ, ಸಮಾಜದ ಅಶಾಂತಿಗೆ ಹಾಗೂ ಭಯದ ವಾತಾವರಣಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಇಂದು ಮಂಗಳೂರು ನಗರದ ಮಿನಿ ವಿಧಾನ ಸೌಧದ ಎದರು, ದಕ್ಷಿಣ ಕನ್ನಡ ಜಿಲ್ಲೆಯ ಜೈನ ಸಮೂದಾಯದ ವತಿಯಿಂದ ಭಾರತೀಯ ಜೈನ್ ಮಿಲನ್ ಶಾಂತಿಯುತವಾಗಿ ಪ್ರತಿಭಟನೆ ನಡೆಸಿತು.
ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಗಣೇಶೋತ್ಸವದ ಕಾರ್ಯಕ್ರಮ ವೇದಿಕೆಯಲ್ಲಿ ಜೈನ ಧರ್ಮದ ಬಗ್ಗೆ ಕೊಳಕು ಭಾಷೆಯನ್ನು ಬಳಸಿ ನಿಂದನೆ ಮಾಡಿದ್ದಷ್ಟೇ ಅಲ್ಲದೆ ಇನ್ನೊಂದು ಧರ್ಮದವರನ್ನು ಜೈನರ ವಿರುದ್ದ ಎತ್ತಿ ಕಟ್ಟುವಂತಹ ಹೇಯ ಕಾರ್ಯ ಮಾಡಿರುವಂತಹ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಅವರ ಸಹಚರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಾಗೆಯೇ ಶಾಂತಿಯುತವಾಗಿ ಎಲ್ಲರೊಂದಿಗೂ ಸಹ ಬಾಳ್ವೆಯಲ್ಲಿರುವ ಇಲ್ಲಿನ ಜೈನರಲ್ಲಿ ಇಂತಹ ಸಮಾಜ ಘಾತುಕರಿಂದಾಗಿ ಉದ್ದಭವಿಸಿರುವ ಭಯವನ್ನು ಹೋಗಲಾಡಿಸುವ ಕಾರ್ಯ ಶೀಘ್ರವಾಗಿ ಮಾಡಬೇಕು.ಎಂದು ಭಾರತೀಯ ಜೈನ್ ಮಿಲನ್ ಅಗ್ರಹಿಸಿತು. ಆದರೊಂದಿಗೆ ಪೊಲಿಸ್ ಇಲಾಖೆ ಅವರ ವಿರುದ್ದ ಕ್ರಮ ಕೈಗೊಳ್ಳಲು ಹಿದೇಟು ಹಾಕುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.