ನೆಲದ ಕಾನೂನಿಗೆ ಬಾಗಿದ GMPL: ಲಾರೆನ್ಸ್ ಡಿ ಸೋಜಾ
ಜಿಲ್ಲೆಯ ಜನರು ಉದ್ಯಮ ಸೃಷ್ಟಿಗಾಗಿ ಸರ್ಕಾರಕ್ಕೆ ಅಥವಾ ಜಿಲ್ಲಾಡಳಿತಕ್ಕೆ, ಭೂಮಿಯನ್ನು ನೀಡಿದರೆ ಆ ಭೂಮಿಗೆ ಸಮಾನವಾಗಿ ಪ್ರತಿಯೊಂದು ಕುಟುಂಬಕ್ಕೆ, ಒಂದು ಉದ್ಯೋಗ ಕೊಡುವುದು ಕರ್ನಾಟಕ ರಾಜ್ಯ ಸರ್ಕಾರದ ಒಂದು ಕಾನೂನು.
ಈ ನಿಟ್ಟಿನಲ್ಲಿ ಜಿಲ್ಲೆಯ MSEZ ವಿಶೇಷ ಆರ್ಥಿಕ ವಲಯವು ವಶಪಡಿಸಿಕೊಂಡ ಸ್ಥಳದಲ್ಲಿ ಸುಮಾರು 115 ಎಕರೆ ಸ್ಥಳವನ್ನು ಜೆಬಿಎಫ್ ಕಂಪನಿ ಗಾಗಿ ನೀಡಿತು. ಈ ಕಂಪನಿಯಲ್ಲಿ ಸ್ಥಳೀಯರಾದ ಸುಮಾರು 75 ಸ್ಥಳೀಯರು ಕೆಲಸವನ್ನು ಗಿಟ್ಟಿಸಿಕೊಂಡಿದ್ದರು. ಬದಲಾದ ಸನ್ನಿವೇಶದಲ್ಲಿ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಂಪನಿ ದಿವಾಳಿ ಆಯಿತು.
NCLT ಮೂಲಕ ಈ 1BF ಕಂಪನಿಯನ್ನು GAIL ಇಂಡಿಯಾ ಕಂಪನಿಯವರು ತಮ್ಮ ವಶಕ್ಕೆ ಪಡೆದುಕೊಂಡರು. ವಶಪಡಿಸಿಕೊಂಡ ಕಂಪನಿಯು ರಾಜ್ಯ ಸರ್ಕಾರದ ಕಾನೂನಿನ ಪ್ರಕಾರ ಅಥವಾ ರಾಜ್ಯ ಸರ್ಕಾರದ ಕರಾರು ಪತ್ರದ (agreement) ಪ್ರಕಾರ ಸ್ಥಳೀಯ ಎಪ್ಪತ್ತೈದು ಜನರಿಗೆ ಉದ್ಯೋಗ ಕೊಡುವುದು ಕಡ್ಡಾಯ. ಆದರೆ ಕಳೆದ ಒಂದು ವರ್ಷದಿಂದ ಮೊಂಡು ತನವನ್ನು ಪ್ರದರ್ಶಿಸಿಕೊಂಡು ಬಂದಿದ್ದ ಗೇಲ್ ಇಂಡಿಯಾ ಕಂಪನಿಯವರು, ಸ್ಥಳೀಯರ ಹೋರಾಟ ಸ್ಥಳೀಯರ 45 ದಿನಗಳ ಪ್ರತಿಭಟನೆ, ವಿಧಾನ ಪರಿಷತ್ ನಲ್ಲಿ ಶಾಸಕರಾದ ಮಂಜುನಾಥ ಭಂಡಾರಿಯವರಿಂದ ಪ್ರಸ್ತಾಪ, ವಿಧಾನಸಭೆಯಲ್ಲಿ ವಿಧಾನಸಭಾ ಸ್ಪೀಕರ್ ಆದ ಯು ಟಿ ಖಾದರ್ ರವರಿಂದ ಪ್ರಸ್ತಾವನೆಗೊಂಡು ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಸಚಿವರಾದ ಎಂ ಬಿ ಪಾಟೀಲ್ ರವರಿಂದ ಉತ್ತರ ಪಡೆದುಕೊಂಡು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಸ್ಪಷ್ಟ ಮಾರ್ಗದರ್ಶನದಲ್ಲಿ, ಜಿಲ್ಲಾ MSEZ ಅಧಿಕಾರಿಗಳ ಸ್ಪಷ್ಟವಾದ ಕಾನೂನಿನ ಪರಿಪಾಲನೆ, ಜಿಲ್ಲಾಧಿಕಾರಿಗಳಿಂದ ಸ್ಪಷ್ಟವಾದ ಕಾನೂನು ಪರಿಪಾಲನೆ ಹಾಗೂ ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾದ ಮಾಹಿತಿಯನ್ನು ನೀಡುವ ಮೂಲಕ ರಾಜ್ಯ ಸರ್ಕಾರದ ನಿಲುವನ್ನು ಕೇಂದ್ರ ಸರ್ಕಾರ ಹಾಗೂ GMPL ಕಂಪನಿಯ ಮೇಲೆ ಹೇರಿದ ಒತ್ತಡದ ಪರಿಣಾಮವಾಗಿ ಹಾಗೂ ಒಂದು ವೇಳೆ ಸ್ಥಳೀಯರಿಗೆ ಉದ್ಯೋಗ ನೀಡದೇ ಇದ್ದಂತಹ ಸಂದರ್ಭದಲ್ಲಿ ಕಂಪನಿಯ ಪರವಾನಗಿ ನವೀಕರಿಸುವ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲವೆಂಬ ಸ್ಪಷ್ಟ ನಿಲುವನ್ನು ಸರ್ಕಾರ, MSEZ ನ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಹೊಂದಿದ್ದರ ಫಲವಾಗಿ ಇಂದು ಸ್ಥಳೀಯ 75 ಜನರಿಗೆ GMPL ನಲ್ಲಿ ದಿನಾಂಕ 30- 9- 2024ರ ಒಳಗೆ ನೇಮಕಾತಿ ಆದೇಶವನ್ನು ನೀಡುವ ಆದೇಶವನ್ನು ನೀಡಿರುವುದು ಬಹಳ ಸಂತೋಷದಾಯಕ ವಿಷಯ.
ಈ ಗೆಲುವು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಗೆಲುವು, ಈ ಗೆಲುವು ಭೂಮಿಯನ್ನು ಕಳೆದುಕೊಂಡು ಉದ್ಯೋಗಕ್ಕಾಗಿ 45 ದಿನಗಳ ಕಾಲ ಪ್ರತಿಭಟನೆ ಮಾಡಿದ ಒಂದು ವರ್ಷದಿಂದ ಕೆಲಸ ಇಲ್ಲದೆ ಅಲೆದಾಡುತ್ತಿರುವ ಸ್ಥಳೀಯರ ಗೆಲುವು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಗೆಲುವು, ಮಂಜುನಾಥ್ ಭಂಡಾರಿ ಅವರ ಗೆಲುವು, ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಎಂಬಿ ಪಾಟೀಲ್ ರವರ ಗೆಲುವು, ವಿಧಾನಸಭಾ ಸ್ಪೀಕರ್ ಆದ ಯು ಟಿ ಖಾದರ್ ಅವರ ಗೆಲುವು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಹಿಲನ್ ರವವರ ಗೆಲುವು, SEZ ಡಿ ಸಿ ಅವರಾದ ಹೇಮಲತಾ ಹಾಗೂ ಸಿಬ್ಬಂದಿಗಳರವರ ಗೆಲುವು, ಇದಕ್ಕೆ ಸಹಕರಿಸಿದ ಎಲ್ಲ ಮಾಧ್ಯಮ ಮಿತ್ರ ಹಾಗೂ ಪರೋಕ್ಷವಾಗಿ ಸಹಕರಿಸಿದವರ ಗೆಲುವು ಎಂದು ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರು ಲಾರೆನ್ಸ್ ಡಿ ಸೋಜಾ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಮನುರಾಜ್, ಕಾಂಗ್ರೆಸ್ ಮುಖಂಡರಾದ ಸುಭಾಷ್ ಚಂದ್ರ ಶೆಟ್ಟಿ ಕೊಲ್ನಾಡು, ಸದಾಶಿವ ಶೆಟ್ಟಿ, ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.