ಮಂಗಳೂರು: “ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘವು ಸಹಕಾರ ಇಲಾಖೆಯಿಂದ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಸಂಘವಾಗಿರುತ್ತದೆ. ಬೀದಿಬದಿ ವ್ಯಾಪಾರಕ್ಕೆ ಸಂಬಂಧಪಟ್ಟ ಯಾವುದೇ ಅನಧಿಕೃತವಾಗಿರುವಂತಹ ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಳ್ಳುವ ಉದ್ದೇಶದಿಂದ
ರಾಜಕೀಯ ಪಕ್ಷದ ಲಾಭಕ್ಕಾಗಿ ಬೀದಿ ಬದಿ ವ್ಯಾಪಾರಿಗಳನ್ನು ಸ್ವಂತ ಲಾಭಕ್ಕೆ
ಉಪಯೋಗಿಸಿಕೊಳ್ಳುವ ಯಾವುದೇ ಸಂಘಟನೆಗಳಿಗೆ ಮಹತ್ವವನ್ನು ಕೊಡಬಾರದು“ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಪತ್ರಿಕಾಗೋಷ್ಟಿಯಲ್ಲಿ ಮನವಿ ಮಾಡಿದರು.
”ಬೀದಿ ಬದಿ ವ್ಯಾಪಾರಸ್ಥರ ಸಂಘಟನೆ ಎಂಬ ಹೆಸರಿನ ಯಾವುದೇ ರಾಜಕೀಯ ಪ್ರೇರಿತ ಪಕ್ಷದ ಹೆಸರಿನಲ್ಲಿ ನಿಮಗೆ ನ್ಯಾಯ ದೊರಕಿಸಿ ಕೊಡುತ್ತೇನೆ ಎಂದು ನಿಮ್ಮ
ಬಳಿ ಬಂದರೆ ಜಾಗರೂಕರಾಗಿರಿ. ನಾವೆಲ್ಲರೂ ಮೋಸ ಹೋಗಿದ್ದೇವೆ.
ನಮಗೆಲ್ಲರಿಗೂ ನ್ಯಾಯ ದೊರಕಿಸಿ ಕೊಡುತ್ತೇನೆ ಎಂದು ಹೇಳಿ ಮೋಸ ಮಾಡಿದ ಬಿ.ಕೆ.ಇಮ್ತಿಯಾಜ್ ಇವರನ್ನು ನಮ್ಮ ಶ್ರೇಯೋಭಿವೃದ್ಧಿ ಸಂಘದಿಂದ
ವಜಾಗೊಳಿಸಿದ್ದೇವೆ. ಇವರನ್ನು ವಜಾ ಗೊಳಿಸಿದ ಕೇವಲ ಒಂದು ತಿಂಗಳ ಒಳಗೆ 93 ಬೀದಿ ವ್ಯಾಪಾರಿಗಳಿಗೆ ಪ್ರಮಾಣಪತ್ರ ಸಿಕ್ಕಿದೆ. ಬೀದಿ ವ್ಯಾಪಾರಿಗಳ ಪ್ರಮಾಣ ಪತ್ರಕ್ಕೆ ಸಂಬಂಧಪಟ್ಟ ಕೆಲಸ ಕಾರ್ಯಗಳು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಬೀದಿ ಬದಿ ವ್ಯಾಪಾರದ ಪ್ರಮಾಣ ಪತ್ರಕ್ಕೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಮಕ್ಷಮದೊಂದಿಗೆ ನಡೆಯುತ್ತಿದೆ. ಯಾರು ಗೊಂದಲಕ್ಕೊಳಗಾಗುವ ಅವಶ್ಯಕತೆ
ಇಲ್ಲ. ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘದ ನಿರ್ದೇಶಕರೊಬ್ಬರನ್ನು ಕೊಲೆ
ಮಾಡಲು ಯತ್ನಿಸಿದ ಘಟನೆ ಬಿ.ಕೆ.ಇಮ್ತಿಯಾಜ್ ರಿಂದ ನಡೆದಿದೆ. ಇವರನ್ನು ನಮ್ಮ ಸಂಘದಿಂದ ವಜಾಗೊಳಿಸುವ ಮೊದಲೇ ಅಧ್ಯಕ್ಷ
ಸ್ಥಾನಕ್ಕೆ ಮತ್ತು ನಿರ್ದೇಶಕ ಸ್ಥಾನಕ್ಕೆ ತನ್ನ ವೈಯುಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆಯನ್ನು ನೀಡಿದ್ದಾರೆ“ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ನಿರ್ದೇಶಕ ಪ್ರವೀಣ್ ಕುಮಾರ್, ಮುಹಮ್ಮದ್ ಮುಸ್ತಫಾ, ಅಬ್ದುಲ್ ರಹಿಮಾನ್, ಇಸ್ಮಾಯಿಲ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.