ಮಂಗಳೂರು: ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ನಗರದ ಪಿ ವಿ ಎಸ್ ಬಳಿ ಇರುವ ಬಿ ಜೆ ಪಿ ಜಿಲ್ಲಾ ಕಛೇರಿಯಲ್ಲಿ ರಕ್ತದಾನ ನಡೆಯಿತು. ಈ ರಕ್ತದಾನ ಶಿಬಿರವನ್ನು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. ರಕ್ತದಾನದ ನಂತರ ಮಾತನಾಡಿದ ಬ್ರಿಜೇಶ್ ಚೌಟ
" ಪ್ರದಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷದಿಂದ ಈ ದೇಶದ ಬಡವರ, ರೈತರ, ಮಹಿಳೆಯರ ಮತ್ತು ಯುವ ಸಮೂಹಕ್ಕೋಸ್ಕರ ಪ್ರಮಾಣಿಕವಾಗಿ ಕೆಲಸ ಮಾಡಿ, ವಿಶ್ವದಲ್ಲಿ ಭಾರತವನ್ನ ಆರ್ಥಿಕವಾಗಿ ಐದನೇ ದೊಡ್ಡ ದೇಶವನ್ನಾಗಿ ಮಾಡುವಲ್ಲಿ ಬಹಳ ಶ್ರಮವನ್ನು ವಹಿಸಿದ್ದಾರೆ. ಅವರ ಜನ್ಮದಿನದ ಈ ಶುಭ ಸಂದರ್ಭದಲ್ಲಿ ನಮ್ಮೆಲ್ಲಾ ಕಾರ್ಯಕರ್ತರು ನರೇಮದ್ರ ಮೋದಿಯವರಿಗೆ ಆರೋಗ್ಯ ಆಯಸ್ಸನ್ನು ನೀಡಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ವಿಕಸಿತ ಭಾರತದ ಆ ಸಂಕಲ್ಪ ಏನಿದೆಯೋ ಅ ಸಂಕಲ್ಪಕ್ಕೆ ನಾವೆಲ್ಲರೂ ಕನಸು ತುಂಬುವ ಕೆಲಸವನ್ನು ಮಾಡುತ್ತೇವೆ ಎಂದರು.
ಇದರೊಂದಿಗೆ ದೀನ್ ದಯಾಳ್ ಉಪಾಧ್ಯಯರ ಮತ್ತು ಗಾಂಧೀಜಿಯವರ ಜಯಂತಿ ಇದ್ದು ಈ ವಿವಿಧ ಸೇವಾ ಕಾರ್ಯಕ್ರಮ ಇಂದಿನಿಂದ ಅಕ್ಟೊಬರ್ 2 ರ ವರೆಗೆ ನಡೆಯಲಿದ್ದು,
ರಕ್ತ ದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ಅಯುಷ್ಮಾನ್ ಕಾರ್ಡ್ ಬಗ್ಗೆ ಮಾಹಿತಿ ಹಾಗೂ ಹೊಸ ಕಾರ್ಡ್ ಮಾಡಿಸುವುದು, ಪ್ರತಿ ಭೂತ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ, ಸದಸ್ಯತನ ಅಭಿಯಾನ ಹೀಗೆ ಹಲವಾರು ಸೇವಾ ಕಾರ್ಯಗಳು ನಡೆಯಲಿದೆ ಎಂದರು.