image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೆ ಟ್ವಿಸ್ಟ್: ಅನನ್ಯ ಭಟ್ ಕತೆ ಸುಳ್ಳು, ಫೋಟೋ ನಕಲಿ ಎಂದು ಬಾಯ್ಬಿಟ್ಟ ಸುಜಾತ್ ಭಟ್

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೆ ಟ್ವಿಸ್ಟ್: ಅನನ್ಯ ಭಟ್ ಕತೆ ಸುಳ್ಳು, ಫೋಟೋ ನಕಲಿ ಎಂದು ಬಾಯ್ಬಿಟ್ಟ ಸುಜಾತ್ ಭಟ್

ಬೆಂಗಳೂರು: ಧರ್ಮಸ್ಥಳದಲ್ಲಿ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂಬ ಕತೆ ಸುಳ್ಳು. ಕೆಲವರ ಒತ್ತಡದಿಂದ ಈ ಕತೆ ಕಟ್ಟಿ ಹೇಳಿದ್ದೇನೆ. ಆಸ್ತಿ ವಿಚಾರಕ್ಕಾಗಿ ಈ ಸುಳ್ಳು ಹೇಳಿದೆ ಎಂದು ಸುಜಾತ್ ಭಟ್ ಖಾಸಗಿ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಮಗಳು ಅನ್ನೋ ಕತೆ ಸತ್ಯವೇ ಅಥವಾ ಸುಳ್ಳೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಜಾತಾ ಭಟ್, ಅನನ್ಯಾ ಭಟ್ ಅನ್ನೋ ಮಗಳು ಸುಳ್ಳು ಕತೆ, ಗಿರೀಶ್ ಮಟ್ಟೆಣ್ಣನವ‌ರ್, ಜಯಂತ್ ಟಿ ಹೇಳಿದ ಹಾಗೇ ನಾನು ಹೇಳಿದೆ. ಆಸ್ತಿ ವಿಚಾರವಾಗಿ ಈ ಕತೆ ಹೇಳಿಕೊಟ್ಟಿದ್ದರು. ಹೀಗಾಗಿ ಈ ಕತೆ ಹೇಳಿದೆ. ನನಗೆ ದುಡ್ಡಿಗಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ನನಗೂ ಯಾರೂ ಆಫರ್ ಕೊಟ್ಟಿಲ್ಲ. ಆದರೆ ನನ್ನ ತಾತನ ಆಸ್ತಿಯನ್ನು ಧರ್ಮಸ್ಥಳಕ್ಕೆ ದಾನವಾಗಿ ಹೇಗೆ ಕೊಟ್ಟರು ಅನ್ನೋದು ನನ್ನ ಪ್ರಶ್ನೆ. ಅದು ನನಗೂ ಸಿಗಬೇಕಿತ್ತು. ಆದರೆ ನನಗೆ ಪಾಲು ಸಿಗಲಿಲ್ಲ ಎಂದು ಸುಜಾತ್ ಭಟ್ ನೋವು ತೋಡಿಕೊಂಡಿದ್ದಾರೆ.

ಮಗಳು ಫೋಟೋ ಬಿಡುಗಡೆ ಮಾಡಿದ್ದು ಸುಳ್ಳು, ಅದು ಖಂಡಿತ ಸುಳ್ಳು ಫೋಟೋ ಎಂದು ಸುಜಾತಾ ಭಟ್ ಹೇಳಿದ್ದಾರೆ. ಇದೇ ವೇಳೆ ತಾನು ಧರ್ಮಸ್ಥಳದ ಜನರ ನಂಬಿಕೆ, ಜನರ ಭಾವನೆ ಜೊತೆ ಆಟವಾಡಿಲ್ಲ. ಆದರೆ ನನ್ನನ್ನು ಜನರ ಭಾವನೆ ಜೊತೆ ಆಟವಾಡುವಂತೆ ಕೆಲವರು ಪ್ರಚೋದಿಸಿದರು ಎಂದು ಸುಜಾತಾ ಭಟ್ ಹೇಳಿದ್ದಾರೆ. 

 ನಾನು ಧರ್ಮಸ್ಥಳ ದೇವಸ್ಥಾನಕ್ಕೆ ಧಕ್ಕೆ ತಂದಿಲ್ಲ.  ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಗೆ ಧಕ್ಕೆ ತಂದಿಲ್ಲ. ಧರ್ಮಸ್ಥಳ ಗ್ರಾಮದಲ್ಲಿ ಎಂದು ಹೇಳಿದ್ದೇನೆ ಎಂದು ಸುಜಾತ್ ಭಟ್ ತಮ್ಮ ಸುಳ್ಳಿನ ಅಸಲಿ ಕತೆಯನ್ನು ಬಹಿರಂಗಪಡಿಸಿದ್ದು, ದೇಶದ ಜನರ ಹತ್ತಿರ ಮತ್ತು ಧರ್ಮಸ್ಥಳ ದವರ ಹತ್ತಿರ ಕ್ಷಮೆ ಯಾಚಿಸಿದ್ದಾರೆ.

Category
ಕರಾವಳಿ ತರಂಗಿಣಿ