ಮಂಗಳೂರು: ನಗರದ ಹೃದಯ ಭಾಗವಾದ ಭಾವುಟ ಗುಡ್ಡೆ ಹಲವಾರು ವರ್ಷಗಳ ಇತಿಹಾಸವಿದೆ. ಕೆದಂಬಾಡಿ ರಾಮಯ್ಯ ಗೌಡ ಮತ್ರು ಅವರ ತಂಡ ಬ್ರಿಟೀಷರ ವಿರುದ್ದ ಸಾರಿದ ಹೋರಾಟದ ಕತೆಯನ್ನು ಈ ಬಾವುಟಗುಡ್ಡೆ ಹೇಳಿತ್ತದೆ.
ಅಂತಹ ಬಾವುಟ ಗುಡ್ಡೆಯಲ್ಲಿ ಇತ್ತೀಚೆಗೆ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ಅನಾವರಣ ಮಾಡಲಾಗಿತ್ತು. ಈಗ ಅಲ್ಲೆ ಪಕ್ಕದಲ್ಲಿ ಎಪ್ಪತ್ತೈದು ಮೀಟರ್ ಎತ್ತರದ ದ್ವಜ ಸ್ತಂಭಕ್ಕೆ ಗುದ್ದಲಿ ಪೂಜೆ ನೆರವೇರಿತು. (ಆದರೆ ಅದನ್ನು 120 ಮೀಟರ್ ಗೆ ಏರಿಸಲು ಯೋಜಿಸಲಾಗುತ್ತಿದೆ)
ಈ ಸಂದರ್ಭದಲ್ಲಿ ಮಾತಾಡಿದ ಎಮ್ ಎಲ್ ಸಿ ಮಂಜುನಾಥ ಭಂಡಾರಿ " ಬಾವುಟ ಗುಡ್ಡೆಯ ಇತಿಹಾಸ ಹಲವರಿಗೆ ಗೊತ್ತಿಲ್ಲ. ಅದರಲ್ಲೂ ಯುವ ಪೀಳಿಗೆಗೆ ಇದರ ಬಗ್ಗೆ ತಿಳಿಸಿಕೊಡಬೆಕಾಗಿದೆ. ಈ ಯೋಜನೆಯ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ಹತ್ತಿರ ಮಾತಾಡಿದಾಗ ಇದಕ್ಕೂ ಅನುದಾನ ಇಡುವುದಾಗಿ ಹೇಳಿದರು. ಇದಕ್ಕೆ ಸುಮಾರು ಎಪ್ಪತ್ತೈದು ಲಕ್ಷ ಖರ್ಚಾಗುವ ಅಂದಾಜಿದೆ. ಕಡಿಮೆಯಾದರೆ ನನ್ನ ಅನುದಾನದಿಂದಲೂ ಕೊಡುತ್ತೇನೆ. ಸಾದ್ಯವಾದರೆ ಇದರ ಎತ್ತರವನ್ನು ಜಾಸ್ತಿ ಮಾಡಲಾಗುವುದು" ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ " ಬಾವುಟ ಗುಡ್ಡೆಗೆ ಅದರದೇ ಆದ ಇತಿಹಾಸವಿದೆ. ಕೆದಂಬಾಡಿ ರಾಮಯ್ಯನವರ ತಂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹದಿಮೂರು ದಿವಸಗಳ ಕಾಲ ಹೋರಾಟ ಮಾಡಿ ಬ್ರಿಟಿಷರನ್ನು ಓಡಿಸಿದ ನಂತರ ಈ ಜಿಲ್ಲೆಯನ್ನು ಆಡಳಿತ ಮಾಡಿದ ಪವಿತ್ರ ನೆಲ ಬಾವುಟಗುಡ್ಡೆ. ಹಾಗಾಗಿ ಇಲ್ಲಿ ಬೃಹತ್ ಗಾತ್ರದ ದ್ವಜವನ್ನು ರಾರಾಜಿಸಬೇಕು . ಅದರ ಮೂಲಕ ಭಾರತದ ಮೇಲಿರುವ ಗೌರವ ಪ್ರಜ್ವಲಿಸಬೇಕು ಎಂದರು.