image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

36ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ವಿಶ್ವದ ಅಗ್ರ ಬಾಡಿ ಬಿಲ್ಡರ್

36ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ವಿಶ್ವದ ಅಗ್ರ ಬಾಡಿ ಬಿಲ್ಡರ್

ನವದೆಹಲಿ : ಜಗತ್ಪ್ರಸಿದ್ಧ ಬಾಡಿಬಿಲ್ಡರ್ ಎಂದೇ ಖ್ಯಾತಿ ಪಡೆದಿರುವ ಇಲ್ಯಾ ಗೊಲೆಮ್ ಯೆಫಿಮ್ಚಿಕ್ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. 36 ವರ್ಷದ ಈ ಬಾಡಿ ಬಿಲ್ಡರ್​ ಕಟುಮಸ್ತಾದ ದೇಹದೊಂದಿಗೆ ಫಿಟ್ ಆಗಿದ್ದರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

36 ವರ್ಷದ ಬೆಲರೂಸಿಯನ್ ಬಾಡಿಬಿಲ್ಡರ್ ಸೆಪ್ಟೆಂಬರ್ 6 ರಂದು ಹೃದಯಾಘಾತಕ್ಕೆ ತುತ್ತಾಗಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ನಂತರ ಕೋಮಾಕ್ಕೆ ಹೋದರು. ಇದಾದ ಬಳಿಕ ಬಿಲ್ಡರ್​ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಈ ಕ್ರೀಡಾಪಟು ತನ್ನ 25-ಇಂಚಿನ ಬೈಸೆಪ್‌ಗಳಿಗಾಗಿ ದಿನಕ್ಕೆ 16,500 ಕ್ಯಾಲೊರಿಗಳನ್ನು ಸೇವಿಸುತ್ತಿದ್ದರು. ಅದಕ್ಕಾಗಿ ಅವರು ಹೆಚ್ಚಿನ ಆಹಾರವನ್ನು ಸೇವಿಸುತ್ತಿದ್ದರು. 6-ಅಡಿ, 340-ಪೌಂಡ್ ಮೈಕಟ್ಟು ಕಾಪಾಡಿಕೊಳ್ಳಲು ದಿನಕ್ಕೆ ಏಳು ಬಾರಿ ವಿವಿಧ ಬಗೆಯ ಆಹಾರವನ್ನು ಸೇವಿಸುತ್ತಿದ್ದರು. 154 ಕೆಜಿ. ದೇಹದ ತೂಕವನ್ನು ಹೊಂದಿದ್ದ ಇವರನ್ನು ಬಾಹುಬಲಿ ಬಾಡಿಬಿಲ್ಡರ್ ಎಂದು ಕರೆಯಲಾಗುತ್ತಿತ್ತು. ದಿನಕ್ಕೆ ಏಳು ಬಾರಿ ಆಹಾರ ಸೇವನೆ ಮಾಡಿದರೂ ದೇಹದಲ್ಲಿ ಎಲ್ಲಿಯೂ ಕೊಬ್ಬು ಹೊಂದಿರಲಿಲ್ಲ ಆದ್ರೆ ಹಠಾಟ್​ ಹೃದಯಾಘಾತ ಸಂಭವಿಸಿದ್ದು ಅಚ್ಚರಿ ಮೂಡಿಸಿದೆ.

Category
ಕರಾವಳಿ ತರಂಗಿಣಿ