ವಿಯೆಟ್ನಾಂ : ಯಾಗಿ ಚಂಡಮಾರುತದ ಸಂಭವಿಸಿದ ಪರಿಣಾಮ ಭೂಕುಸಿತ ಮತ್ತು ಪ್ರವಾಹದಿಂದಾಗಿ ವಿಯೆಟ್ನಾಂನ ಉತ್ತರ ಭಾಗದಲ್ಲಿ 254 ಮಂದಿ ಸಾವನ್ನಪ್ಪಿದ್ದಾರೆ ಮತ್ತು 82 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಲಾವೊ ಕೈ, ಕಾವೊ ಬ್ಯಾಂಗ್ ಮತ್ತು ಯೆನ್ ಬಾಯಿ ಅತ್ಯಂತ ಹೆಚ್ಚು ಹಾನಿಗೊಳಗಾದ ಪ್ರಾಂತ್ಯಗಳಾಗಿವೆ. ಸಾವುಗಳು ಕ್ರಮವಾಗಿ 111, 43 ಮತ್ತು 49 ಕ್ಕೆ ಏರಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಶುಕ್ರವಾರ ವರದಿ ಮಾಡಿದೆ. ವಿಪತ್ತು ತಡೆಗಟ್ಟುವಿಕೆ, ನಿಯಂತ್ರಣ, ಹುಡುಕಾಟ ಮುಂದುವರೆದಿದೆ. ನಗರದ ಸ್ಟೀರಿಂಗ್ ಸಮಿತಿಯ ಪ್ರಕಾರ, ರಾಜಧಾನಿ ಹನೋಯಿಯಲ್ಲಿ ಕೆಂಪು ನದಿಯ ಪ್ರವಾಹವು ಎಚ್ಚರಿಕೆಯ ಮಟ್ಟಕ್ಕಿಂತ ಕಡಿಮೆಯಾಗಿದೆ. ಸ್ಥಳಾಂತರಿಸಲ್ಪಟ್ಟ ಜನರು ತಮ್ಮ ಮನೆಗಳಿಗೆ ಮರಳಿದ್ದಾರೆ. ಆದರೆ ಪ್ರವಾಹ ಪ್ರದೇಶಗಳನ್ನು ಸ್ವಚ್ಛಗೊಳಿಸಲು ಅನೇಕ ಪಡೆಗಳನ್ನು ಸಜ್ಜುಗೊಳಿಸಲಾಗಿದೆ.ಈಶಾನ್ಯ ಪ್ರಾಂತ್ಯದ ಕ್ವಾಂಗ್ ನಿನ್ಹ್ ಚಂಡಮಾರುತದಿಂದ ಹಾನಿಗೊಳಗಾದ UNESCO ವಿಶ್ವ ಪರಂಪರೆಯ ಹಾ ಲಾಂಗ್ ಬೇಗಾಗಿ ಮೂರು ದಿನಗಳ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದೆ.