image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತದ ಕೃಷಿಕರ ಹಿತಾಸಕ್ತಿ ಕಾಪಾಡಲು ನಾವು ದುಬಾರಿ ಸುಂಕ ಪಾವತಿಗೆ ಸಿದ್ದವಾಗಿದ್ದೇವೆ : ಪ್ರಧಾನಿ ಮೋದಿ

ಭಾರತದ ಕೃಷಿಕರ ಹಿತಾಸಕ್ತಿ ಕಾಪಾಡಲು ನಾವು ದುಬಾರಿ ಸುಂಕ ಪಾವತಿಗೆ ಸಿದ್ದವಾಗಿದ್ದೇವೆ : ಪ್ರಧಾನಿ ಮೋದಿ

ನವದೆಹಲಿ: ಭಾರತವು ಎಂದಿಗೂ ತನ್ನ ಕೃಷಿಕರು, ಮೀನುಗಾರರು, ಹೈನು ಕೃಷಿಕರ ಹಿತಾಸಕ್ತಿಯಲ್ಲಿ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಈ ಕುರಿತು ಖಚಿತಪಡಿಸಲು ಯಾವುದೇ ಬೆಲೆ ತೆರಲು ಸಿದ್ದವಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಭಾರತದ ಆಮದು ವಸ್ತುಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ವಿಧಿಸುವ ಕುರಿತು ಘೋಷಣೆ ಹೊರಬಿದ್ದ ಬೆನ್ನಲ್ಲೇ ಪ್ರಧಾನಿಯಿಂದ ಈ ಹೇಳಿಕೆ ಬಂದಿದೆ. ಅಮೆರಿಕದ ಈ ಸುಂಕದಲ್ಲಿ ಕೃಷಿ ಉತ್ಪನ್ನಗಳ ಮೇಲಿನ ಸುಂಕ ಕೂಡ ಒಳಗೊಂಡಿದೆ. ಭಾರತ ರತ್ನ ಎಂಎಸ್​ ಸ್ವಾಮಿನಾಥನ್​ ಶತಮಾನೋತ್ಸವ ಜಾಗತಿಕ ಸಮ್ಮೇಳದಲ್ಲಿ ಮಾತನಾಡಿದ ಅವರು, ನಮಗೆ ನಮ್ಮ ರೈತರ ಹಿತಾಸಕ್ತಿ ಪ್ರಮುಖ ಆದ್ಯತೆಯಾಗಿದ್ದು, ಭಾರತ ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನನಗೆ ಗೊತ್ತಿದೆ ನಾವು ಹೆಚ್ಚಿನ ಸುಂಕ ಪಾವತಿ ಮಾಡಬೇಕು ಎಂದು. ಅದಕ್ಕೆ ಭಾರತ ಸಿದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷರಿಗೆ ಖಡಕ್​ ಸಂದೇಶ ರವಾನಿಸಿದರು.

ಕೃಷಿ ಕ್ರಾಂತಿಕಾರಿ ಪ್ರೊ ಎಂಎಸ್​ ಸ್ವಾಮಿನಾಥನ್​ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆ ಮೂರು ದಿನದ ಜಾಗತಿಕ ಸಮ್ಮೇಳನ ನಡೆಯುತ್ತಿದ್ದು, ಈ ವೇಳೆ ಅವರ ಸ್ಮರಣಾರ್ಥವಾಗಿ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಸ್ವಾಮಿನಾಥನ್​ ಅವರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಪ್ರಧಾನಿ, ಕೆಲವು ವ್ಯಕ್ತಿಗಳ ಕೊಡುಗೆ ಒಂದು ಕಾಲಕ್ಕೆ ಅಥವಾ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅಂತಹ ದೊಡ್ಡ ವಿಜ್ಞಾನಿಗಳು ಮತ್ತು ಭಾರತದ ನಿಜವಾದ ಮಗ ಪ್ರೊ ಎಂಎಸ್​ ಸ್ವಾಮಿನಾಥನ್​ ಎಂದು ಪ್ರಧಾನಿ ಬಣ್ಣಿಸಿದರು. ವಿಜ್ಞಾನವನ್ನು ಸಾರ್ವಜನಿಕ ಸೇವೆಯ ಮಾಧ್ಯಮವಾಗಿಸಿದರು. ದೇಶದ ಆಹಾರ ಭದ್ರತೆಯನ್ನು ತಮ್ಮ ಜೀವನದ ಮಿಷನ್​ ಆಗಿ ಮಾಡಿಕೊಂಡರು. ಮುಂದಿನ ಹಲವು ಶತಮಾನದವರೆಗೆ ಭಾರತದ ನೀತಿಗಳು ಮತ್ತು ಆದ್ಯತೆಗಳಿಗೆ ಮಾರ್ಗದರ್ಶನವನ್ನು ನೀಡಿದರು. ಕಳೆದ 10 ವರ್ಷಗಳಲ್ಲಿ ಕೈಮಗ್ಗ ವಲಯವು ಹೆಚ್ಚಿನ ಮನ್ನಣೆ ಪಡೆದಿದ್ದು, ದೇಶಾದ್ಯಂತ ಬಲಗೊಂಡಿದೆ ಎಂದು ಪ್ರಧಾನಿ ತಿಳಿಸಿದರು.

ತಮ್ಮ ಹಾಗೂ ಸ್ವಾಮಿನಾಥನ್​ ನಡುವಿನ ಒಡನಾಟ ಮೆಲುಕು ಹಾಕಿದ ಪ್ರಧಾನಿ, ಗುಜರಾತ್​ನಲ್ಲಿ ಬರ, ಸೈಕ್ಲೋನ್​ನಿಂದಾಗಿ ಕೃಷಿಯು ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಿತ್ತು. ಕಛ್​​​ನಲ್ಲಿ ಮರುಭೂಮಿ ವಿಸ್ತರಣೆ ಕಂಡಿತು. ನಾನು ಗುಜರಾತ್​ ಸಿಎಂ ಆಗಿದ್ದ ಸಂದರ್ಭದಲ್ಲಿ ಪ್ರೊ ಸ್ವಾಮಿನಾಥತ್​ ಜೊತೆಗೆ ಮಣ್ಣಿನ ಆರೋಗ್ಯದ ಕಾರ್ಡ್​ಗೆ ಕೆಲಸ ಮಾಡಿದ್ದು, ಈ ಬಗ್ಗೆ ಅವರು ಅತೀವ ಆಸಕ್ತಿ ತೋರಿಸಿದ್ದರು. ಅವರು ಮುಕ್ತವಾಗಿ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದರು. ಅವರ ಕೊಡುಗೆಯ ಫಲವಾಗಿ ಈ ಉಪಕ್ರಮವು ಸಾಕಷ್ಟು ಯಶಸ್ಸು ಕಂಡಿತು ಎಂದರು.

Category
ಕರಾವಳಿ ತರಂಗಿಣಿ