image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸರಕಾರಿ ಶಾಲಾ ಶಿಕ್ಷಕರ ಏಟಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿ: ಪ್ರಕರಣ ದಾಖಲು

ಸರಕಾರಿ ಶಾಲಾ ಶಿಕ್ಷಕರ ಏಟಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿದ್ಯಾರ್ಥಿ: ಪ್ರಕರಣ ದಾಖಲು

ಉಪ್ಪಿನಂಗಡಿ: ಶಿಕ್ಷಕರೊಬ್ಬರು ವಿದ್ಯಾರ್ಥಿ ತಪ್ಪು ಮಾಡಿದ್ದಾನೆ ಎಂದು 3 ದಿನ ಬೆತ್ತದಿಂದ ಹೊಡೆದಿದ್ದು, ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಉಪ್ಪಿನಂಗಡಿಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ನಡೆದಿದೆ.ಹಲ್ಲೆಗೆ ಒಳಗಾದ ವಿದ್ಯಾರ್ಥಿ ಬೆಳ್ತಂಗಡಿ ತಾಲ್ಲೂಕು ಉರುವಾಲು ನಿವಾಸಿಯಾಗಿದ್ದು, ಉಪ್ಪಿನಂಗಡಿ ಸರ್ಕಾರಿ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕ ಅನಂತ ಕುಮಾ‌ರ್ ಹಲ್ಲೆ ನಡೆಸಿದ ಶಿಕ್ಷಕ ಎನ್ನಲಾಗಿದೆ. ವಿದ್ಯಾರ್ಥಿಗೆ ಸೆ.9, 10, 11ರಂದು ಆರೋಪಿ ಶಿಕ್ಷಕ ಬೆತ್ತದಿಂದ ಹೊಡೆದ್ದು, ಈ ವಿಚಾರವನ್ನು ವಿದ್ಯಾರ್ಥಿ ಯಾರಿಗೂ ತಿಳಿಸಿರಲಿಲ್ಲ. ನೋವು ಜಾಸ್ತಿಯಾದಾಗ ಮನೆಯವರು ವಿಚಾರಿಸಿದ್ದು. ನಡೆದ ಘಟನೆಯನ್ನು ತಿಳಿಸಿದ್ದಾನೆ.ಬಳಿಕ ಮನೆಯವರು ವಿದ್ಯಾರ್ಥಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ, ಶಿಕ್ಷಕ ಅನಂತ ಕುಮಾ‌ರ್ ವಿರುದ್ಧ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿದಿದೆ.

Category
ಕರಾವಳಿ ತರಂಗಿಣಿ