image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಕ್ಷ ಸಂಫಟನೆ ಮತ್ತು ಎಮ್ ಎಲ್ ಸಿ ಚುನಾವಣೆ ಜವಾಬ್ದಾರಿ ಬಗ್ಗೆ ಸಭೆ ಮಾಡಲು ಮೊದಲಿಗೆ ದಕ್ಷಿಣ ಕನ್ನಡ ವನ್ನು ಆಯ್ಕೆ ಮಾಡಿಕೊಂಡಿದ್ದೇವೆ - ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್

ಪಕ್ಷ ಸಂಫಟನೆ ಮತ್ತು ಎಮ್ ಎಲ್ ಸಿ ಚುನಾವಣೆ ಜವಾಬ್ದಾರಿ ಬಗ್ಗೆ ಸಭೆ ಮಾಡಲು ಮೊದಲಿಗೆ ದಕ್ಷಿಣ ಕನ್ನಡ ವನ್ನು ಆಯ್ಕೆ ಮಾಡಿಕೊಂಡಿದ್ದೇವೆ - ಕೆ ಪಿ ಸಿ ಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್

ಪಕ್ಷ ಸಂಫಟನೆ ಮತ್ತು ಎಮ್ ಎಲ್ ಸಿ ಚುನಾವಣೆ ಜವಾಬ್ದಾರಿ ಬಗ್ಗೆ ಸಭೆ ಮಾಡಲು ಮೊದಲಿಗೆ ದಕ್ಷಿಣ ಕನ್ನಡ ವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಹೇಳಿದರು. ಅವರು ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ಸಂಫಟನೆ ಮತ್ತು ಎಮ್ ಎಲ್ ಸಿ ಚುನಾವಣೆ ಜವಾಬ್ದಾರಿ ಬಗ್ಗೆ ಸಭೆ ಮಾಡಲು ಬಂದಿರುತ್ತೇವೆ. ಬ್ಲಾಕ್ ಅಧ್ಯಕ್ಷರು ಮತ್ತು ಜಿಲ್ಲಾ ಅಧ್ಯಕ್ಷರುಗಳ ಬದಲಾವಣೆ ಮತ್ತು ಉಪಚುನಾವಣೆ ಮೇಲೆ ಅಧಿಕ ಒತ್ತು ಕೊಡುವ ಬಗ್ಗೆ ಚರ್ಚಿಸಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆ ಜವಾಬ್ದಾರಿ, ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಸಂಘಟನೆಗೆ ಶಕ್ತಿ ತುಂಬುವ ಕಡೆ ಹೆಚ್ಚು ಗಮನ ಹರಿಸುವ ಬಗ್ಗೆ, ಮಂಗಳೂರಿಗೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಡುವ ವಿಷಯಗಳ ಬಗ್ಗೆ ಯೋಜನೆ ಮಾಡಬೇಗಾದ ಅಗತ್ಯತೆ ಬಗ್ಗೆ ಮಾತನಾಡಲಾಗುತ್ತದೆ. ರಾಜಕೀಯವನ್ನು ಬದಿಗೊತ್ತಿ ಮಂಗಳೂರಿನ ಅಭಿವೃದ್ಧಿ ಬಗ್ಗೆ ಚಿಂತನೆ ಅಗತ್ಯ ಇದೆ ಎಂದರು. ಅನಂತ್ ಕುಮಾರ್ ಕೇಂದ್ರ ಮಂತ್ರಿಯಾಗಿದ್ದಾಗ ಕೆಲವು ಕೆಲಸಗಳನ್ನು ಪಕ್ಷ ಭೇದ ಮರೆತು ಮಾಡುತ್ತಿದ್ದರು. ಬರೀ ರಾಜಕೀಯದಿಂದ ಪ್ರಯೋಜನವಿಲ್ಲ. ಎಲ್ಲರೂ ಒಟ್ಟಾಗಿ ಕೆಲಸಮಾಡಬೇಕು. ಮಧ್ಯಮಗಳು ಇದರಲ್ಲಿ ಕೈ ಜೋಡಿಸಬೇಕು. ರಾಜ್ಯ ಮಟ್ಟದಲ್ಲೂ ಅಮುಲಾಗ್ರ ಬದಲಾವಣೆ ಪಕ್ಷದ ಒಳಗೆ ಮಾಡ್ಬೇಕಾಗಿರುವ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಮಹಿಳೆಯರಿಗೆ ಸ್ಥಾನಮಾನ ಕೊಡುವ ಬಗ್ಗೆಯೂ ಚರ್ಚಿಸಲಾಗುತ್ತದೆ  ಎಂದರು. ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡಿ ಕರಾವಳಿಯಲ್ಲಿ ಪ್ರವಾಸೋಧ್ಯಮವನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ  ಎಲ್ಲಾ ಪಕ್ಷದ ನಾಯಕರುಗಳನ್ನು ಒಟ್ಟು ಸೇರಿಸಿಕೊಂಡು ಹೋಗಬೇಕಾದ ಅಗತ್ಯ ಇದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ  ಕೆಪಿಸಿಸಿ ಕಾರ್ಯಧ್ಯಕ್ಷರುಗಳಾದ ವಸಂತ್ ಕುಮಾರ್, ವಿಜಯ ಮುರುಗನ್, ಬಾಲರಾಜ್, ಸತ್ಯನಾರಾಯಣ, ಇನಾಯತ್ ಅಲಿ,  ಜಿಲ್ಲಾಧ್ಯಕ್ಷ ಹರಿಶ್ ಕುಮಾರ್ ಹಾಗೂ ವಸಂತ್ ಕುಮಾರ್  ಅವರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತಿತರಿದ್ದರು.

Category
ಕರಾವಳಿ ತರಂಗಿಣಿ