image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉದ್ಯೋಗಿಗಳ ನಿವೃತ್ತಿ ವಯಸ್ಸು ಏರಿಸಿದ ಚೀನಾ

ಉದ್ಯೋಗಿಗಳ ನಿವೃತ್ತಿ ವಯಸ್ಸು ಏರಿಸಿದ ಚೀನಾ

ಬೀಜಿಂಗ್​: ಚೀನಾ ಸರ್ಕಾರ ತನ್ನ ದೇಶದ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಿದೆ. ಚೀನಾದಲ್ಲಿ ಸದ್ಯ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಹಿರಿಯ ನಾಗರೀಕರ ಸಂಖ್ಯೆ ಹೆಚ್ಚಿದೆ. ಇದೀಗ ಈ ನಿವೃತ್ತಿ ವಯಸ್ಸು ಏರಿಕೆ ಮಾಡುವುದರಿಂದ ದುಡಿಯುವ ವರ್ಗದಲ್ಲಿ ಹಿರಿಯ ವಯಸ್ಸಿನವರನ್ನು ಕಾಣಬಹುದಾಗಿದೆ. ಚೀನಾದಲ್ಲಿ 15 ವರ್ಷಗಳ ಬಳಿಕ ಈ ನಿವೃತ್ತಿ ವಯಸ್ಸು ಏರಿಕೆ ಮಾಡಿ ಆದೇಶ ಮಾಡಲಾಗಿದೆ. ಹೊಸ ಆದೇಶದ ಪ್ರಕಾರ ಇನ್ಮುಂದೆ ಚೀನಾದಲ್ಲಿ ಸರ್ಕಾರಿ ಪುರುಷ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು 60 ರಿಂದ 63 ವರ್ಷಕ್ಕೆ ಏರಿಕೆ ಮಾಡಿದರೆ, ಮಹಿಳೆಯರ ನಿವೃತ್ತಿ ವಯಸ್ಸು 55 ರಿಂದ 58 ಕ್ಕೆ ಏರಿಕೆ ಆಗಲಿದೆ.

ದೇಶದ ಅತಿ ಪ್ರಮುಖ ಆರ್ಥಿಕತೆ ದೇಶವಾಗಿರುವ ಚೀನಾದಲ್ಲಿ ಉದ್ಯೋಗಿಗಳ ಹಿತರಕ್ಷಣೆ ಕಾಯುವ ನಿಟ್ಟಿನಲ್ಲಿ ಮಹಿಳೆಯರ ನಿವೃತ್ತಿ ವಯಸ್ಸನ್ನು 50 ವರ್ಷಕ್ಕೆ ನಿಗದಿಪಡಿಸಿತ್ತು. ಆದರೆ, ಇದೀಗ ಬ್ಲೂ ಕಾಲರ್ ವರ್ಗದ ದುಡಿಯುವ​ ಮಹಿಳೆಯರ ನಿವೃತ್ತಿ ವಯಸ್ಸು 55ಕ್ಕೆ ಏರಿಕೆಯಾಗಿದೆ. ಈ ನೀತಿಯು ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರಲಿದೆ ಎಂದು ಚೀನಾ ಸರ್ಕಾರ(ಚೀನಾ ಪೀಪಲ್ಸ್​​ ಕಾಂಗ್ರೆಸ್​​​​) ತಿಳಿಸಿದೆ ಎಂದು ಸಿಸಿಟಿವಿ ವರದಿ ಮಾಡಿದೆ.ಚೀನಾ ಇದೀಗ ನಿವೃತ್ತಿ ವಯಸ್ಸು ಹೆಚ್ಚಳ ಮಾಡಿರುವುದಕ್ಕೆ ಕಾರಣ ದುಡಿಯುವ ವರ್ಗದ ಕೊರತೆಯಲ್ಲ. ಬದಲಾಗಿ ಅಲ್ಲಿನ ಪಿಂಚಣಿ ಆರ್ಥಿಕತೆಯ ಕೊರತೆಯಾಗಿದೆ. ದಿ ಚೈನೀಸ್​ ಅಕಾಡೆಮಿ ಆಫ್​ ಸೆನ್ಸ್​​ ಪ್ರಕಾರ, ಚೀನಾದ ಆರ್ಥಿಕತೆ ಮೇಲೆ ಪಿಂಚಣಿ ವ್ಯವಸ್ಥೆ ಭಾರ ಹೆಚ್ಚಿದೆ, ಈ ಒತ್ತಡವನ್ನು ಕಡಿಮೆ ಮಾಡಬೇಕು ಎಂದರೆ, ಸದ್ಯ ಅವರನ್ನು ಇನ್ನು ಹೆಚ್ಚು ವರ್ಷ ದುಡಿಸಿಕೊಳ್ಳುವುದೇ ಉತ್ತಮ ಮಾರ್ಗವಾಗಿದೆ. ಇದರಿಂದ ಅವರಿಗೆ ಪಿಂಚಣಿ ನೀಡುವುದು ತಡವಾಗಲಿದೆ. ಇದರಿಂದ ದುಡಿಯುವ ಕೈಗಳು ಹೆಚ್ಚಲಿದೆ ಎಂದು ತಿಳಿಸಿದೆ.

Category
ಕರಾವಳಿ ತರಂಗಿಣಿ