image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೆನಡಾದಲ್ಲಿ ಭಾರತೀಯ ಹೈ ಕಮಿಷನ್​ ಮೇಲೆ ದಾಳಿ ಪ್ರಕರಣ: ಪಂಜಾಬ್​ನಲ್ಲಿ ಎನ್​ಐಎ ಶೋಧ

ಕೆನಡಾದಲ್ಲಿ ಭಾರತೀಯ ಹೈ ಕಮಿಷನ್​ ಮೇಲೆ ದಾಳಿ ಪ್ರಕರಣ: ಪಂಜಾಬ್​ನಲ್ಲಿ ಎನ್​ಐಎ ಶೋಧ

ನವದೆಹಲಿ: ಕೆನಡಾದಲ್ಲಿರುವ ಭಾರತೀಯ ಹೈ ಕಮಿಷನ್​ ಕಟ್ಟಡದ ಮೇಲೆ ಖಲಿಸ್ತಾನಿ ಬೆಂಬಲಿಗರು ನಡೆಸಿರುವ ದಾಳಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಇಂದು ಪಂಜಾಬ್​ನಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದೆ. ಕಳೆದ ಜೂನ್​ನಲ್ಲಿ ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿತ್ತು.

2023ರ ಆಗಸ್ಟ್​ 23ರಂದು ಒಟ್ಟಾವಾದಲ್ಲಿ ಹೈ ಕಮಿಷನ್‌ನ ಹೊರಗೆ ಖಾಲಿಸ್ತಾನಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಭಾರತ ವಿರೋಧಿ ಘೋಷಣೆಗಳನ್ನು ಮೊಳಗಿಸಿದ್ದರು. ಹೈ ಕಮಿಷನ್​ ಕಚೇರಿ ಆವರಣದಲ್ಲಿ ಖಲಿಸ್ತಾನಿ ಬಾವುಟವನ್ನೂ ಅಳವಡಿಸಿದ್ದರು. ಅಷ್ಟೇ ಅಲ್ಲದೇ, ಕಟ್ಟಡದೊಳಗೆ ಎರಡು ಗ್ರೆನೇಡ್​ಗಳನ್ನು ಎಸೆದು ಪುಂಡಾಟ ಮೆರೆದಿದ್ದರು.

Category
ಕರಾವಳಿ ತರಂಗಿಣಿ