ಮಂಗಳೂರು: ನೀರುಮಾರ್ಗ ಕೆಲರಾಯಿನಲ್ಲಿರುವ ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜಿನ ವತಿಯಿಂದ ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಸಭಾಗಿತ್ವದಲ್ಲಿ ಬಾಲಕ -ಬಾಲಕಿಯರ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಹಾಗೂ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಗಳು ಸೆಪ್ಟೆಂಬರ್ 12 ರಂದು ಜರುಗಿತು .
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಡಿಡಿಪಿಯು ರವರಾದ ಶ್ರೀಯುತ ಜಯಣ್ಣ ಸಿ.ಡಿ ಇವರು ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದ ಕ್ರೀಡಾ ಒಕ್ಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯನ್ನು ಪ್ರಶಂಸಿಸಿ ಸುಮಾರು 1000 ಕ್ಕಿಂತಲೂ ಹೆಚ್ಚಿನ ಕ್ರೀಡಾ ಪಟುಗಳು ಈ ಕ್ರಿಡಾಕೂಟದಲ್ಲಿ ಭಾಗವಹಿಸಿದ್ದು ಇಲ್ಲಿಯವರಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ನಡೆಯಲ್ಪಟ್ಟ ಕ್ರೀಡಾ ಒಕ್ಕೂಟಗಳಲ್ಲಿ ಇದೇ ಮೊದಲ ಬಾರಿಗೆ ಬಲಿಷ್ಠ ತಂಡಗಳು ಭಾಗವಹಿಸಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಗೌರವಾನ್ವಿತ ಅತಿಥಿಗಳಾಗಿ ಕೆವಿಜಿ ಡೆಂಟಲ್ ಕಾಲೇಜು ಸುಳ್ಯ ವಿಭಾಗದ ಮುಖ್ಯಸ್ಥರಾದ ಡಾI ಶರತ್ ಕುಮಾರ್ ಶೆಟ್ಟಿ, ವಾಮಂಜೂರು ಪೋಲಿಸ್ ಠಾಣೆಯ ಉಪ ನಿರೀಕ್ಷಕ ಶ್ರೀ ಅರುಣ್ ಕುಮಾರ್ ಡಿ ಮತ್ತು ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರಿಧರ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಕ್ರೀಡಾ ಕೂಟದಲ್ಲಿ ಸುಮಾರು 57 ಕ್ಕೂ ಹೆಚ್ಚು ಕಾಲೇಜುಗಳು ಪಾಲ್ಗೊಂಡಿದ್ದು, 90 ಕ್ಕೂ ಅಧಿಕ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪಂದ್ಯಗಳು ಪೂರ್ವಾಹ್ನ 9:30 ಕ್ಕೆ ಪ್ರಾರಂಭಗೊಂಡು ಅಪರಾಹ್ನ 6:30 ಕ್ಕೆ ಮುಕ್ತಾಯವಾಯಿತು. ಜಿಲ್ಲಾ ಮಟ್ಟದ ಬಾಲಕರ ವಿಭಾಗದ ಬಸ್ಕೆಟ್ಬಾಲ್ ಪಂದ್ಯಾಟದಲ್ಲಿ ಸೈಂಟ್ ಆಲೋಸಿಯಸ್ ಪಿಯು ಕಾಲೇಜು ಪ್ರಥಮ ಸ್ಥಾನವನ್ನು ಹಾಗೂ ದ್ವಿತೀಯ ಸ್ಥಾನವನ್ನು ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜು ಪಡೆದಿರುತ್ತದೆ. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸೈಂಟ್ ಆಲೋಸಿಯಸ್ ಪಿಯು ಕಾಲೇಜು ಹಾಗೂ ದ್ವಿತೀಯ ಸ್ಥಾನವನ್ನು ಪ್ರೆಸಿಡೆನ್ಸಿ ಪದವಿ ಪೂರ್ವ ಕಾಲೇಜು ಪಡೆದಿರುತ್ತದೆ. ವಿಜೇತ ತಂಡಗಳು ಮುಂದಿನ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.
ತಾಲ್ಲೂಕು ಮಟ್ಟದ ಬಾಲಕರ ವಿಭಾಗದ ವಾಲಿ ಬಾಲ್ ಪಂದ್ಯಾಟದಲ್ಲಿ ಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನವನ್ನು ಹಾಗೂ ದ್ವಿತೀಯ ಸ್ಥಾನವನ್ನು ಸೈಂಟ್ ಆಲೋಸಿಯಸ್ ಪದವಿ ಪೂರ್ವ ಕಾಲೇಜು ಪಡೆದಿರುತ್ತದೆ. ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸೈಂಟ್ ಆಲೋಸಿಯಸ್ ಪಿಯು ಕಾಲೇಜು ಹಾಗೂ ದ್ವಿತೀಯ ಸ್ಥಾನವನ್ನು ಸೈಂಟ್ ಆಗ್ನೇಸ್ ಪದವಿ ಪೂರ್ವ ಕಾಲೇಜು ಪಡೆದಿರುತ್ತದೆ. ವಿಜೇತ ತಂಡಗಳು ಮುಂದಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ಈ ಕ್ರೀಡಾ ಕೂಟಕ್ಕೆ ಅನುಮೋದನೆಯಿತ್ತು, ಇದರ ಯಶಸ್ವಿಗೆ ಕಾರಣಿಕರ್ತರಾದ ಪ್ರೆಸಿಡೆನ್ಸಿ ಸಮೂಹ ಸಂಸ್ಥೆಗಳ ಗೌರವಾನ್ವಿತ ಅಧ್ಯಕ್ಷರು ಹಾಗೂ ಕುಲಪತಿಗಳು ಆದ ಡಾ. ನಿಸಾರ್ ಅಹಮದ್, ಉಪಾಧ್ಯಕ್ಷರಾದ ಶ್ರೀಯುತ ಸುಹೇಲ್ ಅಹಮದ್, ವೈಸ್ ಪ್ರೆಸಿಡೆಂಟ್ ರವರಾದ ಶ್ರೀಯುತ ಸಲ್ಮಾನ್ ಅಹಮದ್ ಇವರುಗಳು ಕಾರ್ಯಕ್ರಮಕ್ಕೆ ಶುಭಕೋರಿ ವಿಜೇತ ತಂಡಗಳಿಗೆ ಶುಭಾಶಯಗಳನ್ನು ಕೋರಿದರು.
ಈ ಕ್ರೀಡಾ ಕೂಟಕ್ಕೆ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಶ್ರೀ ಅರುಣ್ ದೇವರಾಜ್, ಪ್ರಾಂಶುಪಾಲರಾದ ಶ್ರೀಮತಿ ಶೈಲಾ ಸಲ್ದಾನಾ, ಆಡಳಿತ ವ್ಯವಸ್ಥಾಪಕಿ ಶ್ರೀಮತಿ ಪ್ರತಿಭಾ ಚೇತನ್, ಕ್ರೀಡಾ ಸಂಯೋಜಕರಾದ ಶ್ರೀಮತಿ ಅಕ್ಷಿತಾ , ದೈಹಿಕ ಶಿಕ್ಷಕರಾದ ಶ್ರೀಯುತ ತುಷಾರ್, ಶ್ರೀಯುತ ಶರತ್ ಕೆ ಕೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರು, ಜಿಲ್ಲಾ ಕ್ರೀಡಾ ಸಂಯೋಜಕರು ಮತ್ತು ತಾಲೂಕು ಕ್ರೀಡಾ ಸಂಯೋಜಕರುಗಳು ಕ್ರಿಡಾಕೂಟದ ಜವಾಬ್ಧಾರಿಯನ್ನು ನಿರ್ವಹಿಸಿದರು.