image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಬಿಎಸ್‌ಸಿ ಸೌತ್ ಜೋನ್ ಬಾಕ್ಸಿಂಗ್ ನಲ್ಲಿ ಮದಿಹ ಇಬ್ರಾಹಿಂ ಗೆ ಪದಕ

ಸಿಬಿಎಸ್‌ಸಿ ಸೌತ್ ಜೋನ್ ಬಾಕ್ಸಿಂಗ್ ನಲ್ಲಿ ಮದಿಹ ಇಬ್ರಾಹಿಂ ಗೆ ಪದಕ

ಶಿವಮೊಗ್ಗ: ಫೆಬ್ರವರಿ 9 ರಿಂದ 11 ರವರೆಗೆ ಮಹಾರಾಷ್ಟ್ರದ ಕೊಲ್ಲಾಪುರದ ಸಂಜಯ್ ಗೋದಾವತ್ ಶಾಲೆಯಲ್ಲಿ ನಡೆದ ಸಿಬಿಎಸ್ಇ ಸೌತ್ ಜೋನ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ ಜೈನ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಮದಿಹ ಇಬ್ರಾಹಿಂ 17 ವರ್ಷ ವಯೋಮಿತಿಯೊಳಗಿನ ಬಾಲಕಿರ 54-57 ಕೆಜಿ ತೂಕದ ವಿಭಾಗದಲ್ಲಿ ಭಾಗವಹಿಸಿ ತೃತೀಯ ಬಹುಮಾನ ಪಡೆದಿದ್ದು ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿ ಸಿಬಿಎಸ್ಇ ಪಂದ್ಯಾವಳಿಯ ಬಾಕ್ಸಿಂಗ್ ವಿಭಾಗದಲ್ಲಿ ಇದೇ ಮೊದಲು ಜಿಲ್ಲೆಯಿಂದ ಕ್ರೀಡಾಪಟುಗಳು ಸ್ಪರ್ಧಿಸಿದ್ದು ಮೊದಲ ಪ್ರಯತ್ನದಲ್ಲಿ ತೃತೀಯ ಬಹುಮಾನ ಪಡೆಯುವ ಮುಖಾಂತರ ಇತಿಹಾಸ ಸೃಷ್ಟಿಸಿದ್ದು ವಿಜೇತ ಕ್ರೀಡಾಪಟು ಈ ಹಿಂದೆ ಕರ್ನಾಟಕ ಸರ್ಕಾರದ ಮಿನಿ ಒಲಂಪಿಕ್ಸ್ ಸೇರಿದಂತೆ ವಿವಿಧ ಕ್ರೀಡಾಕೂಟ ಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದು ಕರಾಟೆ ಸ್ಕ್ವಾಯ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ಸಲುವಾಗಿ ಜಿಲ್ಲಾಡಳಿತಯಿಂದ ಗೌರವ ಸನ್ಮಾನವನ್ನು ಸಹ ಈ ಹಿಂದೆ ಸ್ವೀಕರಿಸಿದ್ದು ವಿಜೇತ ಕ್ರೀಡಾಪಟು ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ನ ಬಾಕ್ಸಿಂಗ್ ಕೋಚ್ ಮೀನಾಕ್ಷಿ ರವರ ಬಳಿ ತರಬೇತಿ ಪಡೆಯುತ್ತಿದ್ದು ವಿಜೇತ ಕ್ರೀಡಾಪಟುವಿಗೆ ಹಾಗೂ ಕ್ರೀಡಪಟುವಿನೊಂದಿಗೆ ಕೊಲ್ಲಾಪುರ ದಲ್ಲಿ ಕೋಚ್ ಮತ್ತು ಮ್ಯಾನೇಜರ್ ಆಗಿ ಭಾಗವಹಿಸಿದ್ದ ಮೊಹಮ್ಮದ್ ಯುನಸ್ ಮತ್ತು ರೇಷ್ಮಾ ರವರಿಗೆ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಅಮೆಚೂರು ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಅಭಿನಂದನೆ ಸಲ್ಲಿಸಿದ್ದಾರೆ

Category
ಕರಾವಳಿ ತರಂಗಿಣಿ