ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ಅಂಬೇಡ್ಕರ್ ವೃತ್ತದ (ಜ್ಯೋತಿ-ಕೆ.ಎಂ.ಸಿ ಆಸ್ಪತ್ರೆ ಬಳಿ) ಮಧ್ಯಭಾಗದಲ್ಲಿ ಭಾರತದ ಪ್ರಜಾಪ್ರಭುತ್ವ ಪಿತಾಮಹ ಹಾಗೂ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ರವರ ಸ್ಪೂರ್ತಿದಾಯಕ ಪ್ರತಿಮೆಯೊಂದಿಗೆ ಸುಂದರವಾದ ವೃತ್ತ ನಿರ್ಮಾಣದ ಕಾಮಗಾರಿಗೆ ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನವಾದ ಸೆಪ್ಟೆಂಬರ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಶಿಲಾನ್ಯಾಸ ನೆರವೇರಿಸಲು ಮಂಗಳೂರು ಮಹಾನಗರಪಾಲಿಕೆಯ ಪೂಜ್ಯ ಮಹಾಪೌರರಾದ ಸನ್ಮಾನ್ಯ ಶ್ರೀ ಸುಧೀರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಗಿದೆ.
ಅಂಬೇಡ್ಕರ್ ವೃತ್ತದ ಮಧ್ಯಭಾಗದಲ್ಲಿ ಸುಂದರವಾದ ವೃತ್ತ ಹಾಗೂ ಅದರ ನಡುವೆ ಅಂಬೇಡ್ಕರ್ ಪ್ರತಿಮೆ ಮತ್ತು ಈಗಾಗಲೇ ಈ ಹಿಂದೆ ನಿರ್ಧರಿಸಿರುವಂತೆ ರಸ್ತೆಯ ಪಕ್ಕದಲ್ಲಿ ಅಂಬೇಡ್ಕರ್ ಸ್ತೂಪವನ್ನು ನಿರ್ಮಿಸಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು. ಅಂಬೇಡ್ಕರ್ ವೃತ್ತದಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಟ್ರಾಫಿಕ್ ಸಿಗ್ನಲ್ಗಳು, ಬ್ಯಾರಿಕೇಡ್ ಸಹಿತ ಫುಟ್ಪಾತ್ಗಳು, ಪಾದಚಾರಿ ಕೋರಿಕೆಯ ಸಿಗ್ನಲ್ ವ್ಯವಸ್ಥೆ, ವ್ಯವಸ್ಥಿತ ಝೀಬ್ರಾ ಕ್ರಾಸಿಂಗ್, ಇತ್ಯಾದಿಗಳನ್ನು ನಿರ್ಮಾಣ ಮಾಡುವ ಮೂಲಕ ಸೈಕಲ್ ಸವಾರರ, ಪಾದಚಾರಿಗಳ ಸಂಪೂರ್ಣ ಸುರಕ್ಷೆ ಮತ್ತು ವೇಗ ನಿಯಂತ್ರಣದೊAದಿಗೆ ಎಲ್ಲಾ ವಾಹನಗಳ ಸುಗಮ ಸಂಚಾರಕ್ಕೆ ನಿರ್ಧಾರ ಕೈಗೊಳ್ಳಲಾಯಿತು.
ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟವು ಪೂಜ್ಯ ಮೇಯರ್ರವರ ಸೂಚನೆಯಂತೆ ಮಹಾನಗರಪಾಲಿಕೆಗೆ ಸಲ್ಲಿಸಿರುವ ನುರಿತ ಇಂಜಿನಿಯರ್/ವಾಸ್ತು ಶಿಲ್ಪಿಗಳ ತಂಡದಿAದ ಸಿದ್ದಪಡಿಸಲಾದ ಮಾದರಿ ನಕ್ಷೆ ಮತ್ತು ವಿನ್ಯಾಸವನ್ನು ಸಭೆಯು ಪರಿಶೀಲಿಸಿ, ಈ ವಿನ್ಯಾಸದಂತೆ ವೃತ್ತ ನಿರ್ಮಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಈ ಸಭೆಯಲ್ಲಿ ಸನ್ಮಾನ್ಯ ಉಪಮೇಯರ್ ಸುನೀತಾ, ಮ.ನ.ಪಾ ಆಯುಕ್ತರಾದ ಶ್ರೀ ಆನಂದ್ ಸಿ.ಎಲ್., ಸಾರ್ವಜನಿಕ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಭರತ್ ಕುಮಾರ್, ಸದಸ್ಯರುಗಳಾದ ಶ್ರೀ ಮನೋಜ್ ಕುಮಾರ್, ಶ್ರೀಮತಿ ಸಂಗೀತಾ ಆರ್. ನಾಯಕ್ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಅರುಣ್ ಪ್ರಭಾ ಮತ್ತು ಇತರ ಅಧಿಕಾರಿಗಳು ಹಾಗೂ ವಿವಿಧ ದಲಿತ ಮತ್ತು ನಾಗರಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.