image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಾರಾದ ನಾಟ್ಯಾಲಯಕ್ಕೆ 30ವರ್ಷ

ಶಾರಾದ ನಾಟ್ಯಾಲಯಕ್ಕೆ 30ವರ್ಷ

1995 ರಲ್ಲಿ ಸ್ಥಾಪನೆಗೊಂಡ ಶ್ರೀ ಶಾರದಾ ನಾಟ್ಯಾಲಯ' ಇದೀಗ ಸಾರ್ಥಕ 30 ವರ್ಷಗಳನ್ನು ಪೂರೈಸುತ್ತಿದೆ ಎಂದು ನೃತ್ಯ ಗುರು ವಿದುಷಿ ಶ್ರೀಮತಿ ಭಾರತಿ ಸುರೇಶ್ ತಿಳಿಸಿದರು. ಅವರು ನಗರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಅವರು  ಕಳೆದ ಮೂರು ದಶಕಗಳಿಂದ ಕುಳಾಯಿ, ಹೊಸಬೆಟ್ಟು ಹಾಗೂ ಅನತಿ ದೂರದ ಪ್ರದೇಶಗಳಲ್ಲಿ ನೃತ್ಯಶಿಕ್ಷಣವನ್ನು ನೀಡುತ್ತಾ ಕಲೋಪಾಸನೆಯ ಕೈಂಕರ್ಯವನ್ನು ಇವರು ಸಾರ್ಥಕವಾಗಿ ಮುನ್ನಡೆಸುತ್ತಾ ಬಂದಿರುತ್ತಾರೆ. ಸಮರ್ಪಣಾ ಮನೋಭಾವ ಹಾಗೂ ಕಲಾಬದ್ಧತೆಯನ್ನು ಹೊಂದಿರುವ ಶ್ರೀಮತಿ ಭಾರತಿ ಸುರೇಶ್ ಅವರ ವಿದ್ಯಾರ್ಥಿಗಳು ಸುಮಾರು ೫೦೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ನೀಡಿರುತ್ತಾರೆ. ಶ್ರೀಕೃಷ್ಣಚರಿತ', 'ಮಹಿಷಾಸುರ ಮರ್ದಿನಿ', 'ಗಂಗಾವತರಣ', ಅಮೃತ ಸೋಮೇಶ್ವರ್ ಅವರ 'ಕರ್ಣಗಾಥಾ', ಶ್ರೀ ಪರಮಾನಂದ ಸಾಲ್ಯಾನ್ ಅವರ 'ಅಮೃತಮಂಥನ', ಶ್ರೀ ರಾಕೇಶ್ ಅವರ 'ಶ್ರೀ ರಾಮಚಂದ್ರ ಲೀಲಾ' ಇವರ ನಿರ್ದೇಶನದಲ್ಲಿ ಪ್ರದರ್ಶಿತವಾದ ಹಾಗೂ ಜನಮೆಚ್ಚುಗೆ ಪಡೆದ ಪ್ರಸಿದ್ಧ ನೃತ್ಯ ರೂಪಕಗಳು, ಇವರ ಮಾರ್ಗದರ್ಶನದಲ್ಲಿ ಈಗಾಗಲೇ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ವಿದ್ವತ್ ಪದವಿಯನ್ನು ಪಡೆದಿರುತ್ತಿರುವುದು ಮಾತ್ರವಲ್ಲದೇ ಅನೇಕ ಮಂದಿ ದೇಶ ವಿದೇಶಗಳಲ್ಲಿ ನೃತ್ಯ ತರಗತಿಗಳನ್ನು ನಡೆಸುತ್ತಿದ್ದಾರೆ ವಿದುಷಿ ಶ್ರೀಮತಿ ಭಾರತಿ ಸುರೇಶ್ ಅವರ ಸಾಧನೆ, ಬದ್ಧಯನ್ನು ಗುರುತಿಸಿಯೇ ಅವರಿಗೆ 'ಶ್ರೀ ನಾಟ್ಯಾಂಜಲಿ ಕಲಾ ಅಕಾಡಮಿ, ಶ್ರೀ ಚಕ್ರಪಾಣಿ ಶಿಕ್ಷಣ ಸಂಸ್ಥೆ ಶ್ರೀ ಸನಾತನ ನಾಟ್ಯಾಲಯ ಮೊದಲಾದ ಸಂಸ್ಥೆಗಳಿಂದ ಗೌರವ,ಪುರಸ್ಕಾರಗಳು ಲಭಿಸಿವೆ.

'ಶ್ರೀ ಶಾರದಾನಾಟ್ಯಾಲಯ ಮೂವತ್ತು ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಸಾರ್ಥಕ್ಯದ ಕ್ಷಣಗಳನ್ನು ಮೆಲುಕುಹಾಕುತ್ತ ಕಲಾಪೋಷಣೆ, ಕಲಾಪ್ರೇರಣೆಯ ಸದುದ್ದೇಶದೊಂದಿಗೆ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲಾಮಾತೆಯ ಆರಾಧನೆಯಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳುವ ಸದಿಚ್ಛೆಯನ್ನು ಹೊಂದಿದವರಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ರಮೇಶ್ ಭಟ್, ರಚನಾ ಕರ್ಕೋಡಿ, ಪ್ರಣತಿ ಸತೀಶ್ ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ