image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ(ರಿ) ಮಂಗಳೂರು ಇವರ ಮಕ್ಕಳ ಸಾಹಿತ್ಯಕ, ಸಾಂಸ್ಕೃತಿಕ ಸಮ್ಮೇಳನ ಮಕ್ಕಳ ಧ್ವನಿ

ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ(ರಿ) ಮಂಗಳೂರು ಇವರ ಮಕ್ಕಳ ಸಾಹಿತ್ಯಕ, ಸಾಂಸ್ಕೃತಿಕ ಸಮ್ಮೇಳನ ಮಕ್ಕಳ ಧ್ವನಿ

ಮಂಗಳೂರು: ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ(ರಿ) ಮಂಗಳೂರು ಇವರು ಮಕ್ಕಳ ಸಾಹಿತ್ಯಕ, ಸಾಂಸ್ಕೃತಿಕ ಸಮ್ಮೇಳನ 'ಮಕ್ಕಳ ಧ್ವನಿ' ಕಾರ್ಯಕ್ರಮವನ್ನು ಅನೇಕ ವರ್ಷಗಳಿಂದ ಆಯೋಜಿಸುತ್ತ ಬಂದಿದ್ದು, 31ನೇ ಮಕ್ಕಳ ಧ್ವನಿ ಸೆಪ್ಟೆಂಬರ್ 14 ಶನಿವಾರ ವಿದ್ಯಾದಾಯಿನಿ ಪ್ರೌಢಶಾಲೆ ಸುರತ್ಕಲ್ ఇల్లి ನಡೆಯಲಿದೆ ಎಂದು ಸುದಾಕರ ಪೇಜಾವರ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಮೂಡಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ, ಕಡಂದಲೆ ವಹಿಸಲಿದ್ದಾರೆ. ಮಂಗಳೂರಿನ ವಾಗೀಶ್ವರೀ ಪ್ರಕಾಶನದ ಶ್ರೀ ವಾಗೀಶ್ವರೀ ಶಿವರಾಂ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಹಿಂದು ವಿದ್ಯಾದಾಯಿನೀ ಸಂಘ(ರಿ), ಸುರತ್ಕಲ್‌ ಅಧ್ಯಕ್ಷರಾದ ಶ್ರೀ ಜಯಚಂದ್ರ ಹತ್ವಾರ್ ಹಾಗು ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಗಳಾಗಿದ್ದಾರೆ. ಮೂರೂ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ಹಿಂದೂ ವಿದ್ಯಾದಾಯಿನೀ ಸಂಘ ಹಾಗೂ ಮಕ್ಕಳ ಸಾಹಿತ್ಯ ಸಂಗಮದ ಪದಾಧಿಕಾರಿಗಳ ಗೌರವ ಉಪಸ್ಥಿತಿ ಇರುವುದು. ಒಂದನೇ ತರಗತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಈ ಕಾರ್ಯಕ್ರಮ ನಡೆಯಲಿದೆ. ಇದು ಸಂಪೂರ್ಣ ಮಕ್ಕಳಿಗಾಗಿ, ಮಕ್ಕಳಿಂದಲೇ ನಡೆಸಲ್ಪಡುವ ಮಕ್ಕಳ ಕಾರ್ಯಕ್ರಮವಾಗಿದ್ದು, ಅಭಿನಯ ಗೀತೆಗೋಷ್ಠಿ, ಕವಿಗೋಷ್ಠಿ, ಹಾಗೂ ಕಥಾಗೋಷ್ಠಿ ಗಳನ್ನು ಒಳಗೊಂಡಿದೆ. ಪೂರ್ವ ಪ್ರಾಥಮಿಕ ಶಾಲೆಯ ಮೂವರು ಪುಟಾಣಿಗಳು ಅಭಿನಯ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಆಯ್ಕೆಗೊಂಡ 30 ಮಂದಿ ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಮತ್ತು 20 ಮಂದಿ ಕಥಾಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ ಇಲ್ಲಿನ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಮಾನಸ ಜಿ ಹಾಗೂ ಕಥಾಗೋಷ್ಠಿಯ ಅಧ್ಯಕ್ಷತೆಯನ್ನು ಜನತಾ ಪದವಿಪೂರ್ವ ಕಾಲೇಜು, ಹೆಮ್ಮಾಡಿ ಇಲ್ಲಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕುಮಾರಿ ತನ್ವಿತಾ ವಿ ಇವರು ವಹಿಸಲಿದ್ದಾರೆ. ಅಪರಾಹ್ನ 3.00ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ರಘು ಇಡ್ಡಿದು ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿಂದೂ ವಿದ್ಯಾದಾಯಿನೀ ಸಂಘ(ರಿ)ನ ಕಾರ್ಯದರ್ಶಿಗಳಾದ ಶ್ರೀ ಶ್ರೀರಂಗ ಎಚ್ ಹಾಗೂ ಸುರತ್ಕಲ್ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಗುಣವತಿ ರಮೇಶ್ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಮಕ್ಕಳ ಸಾಹಿತಿ ನಿರ್ಮಲ ಸುರತ್ಕಲ್ ಇವರನ್ನು ಸನ್ಮಾನಿಸಲಾಗುವುದು. ಹಿರಿಯರು ಮಕ್ಕಳಿಗಾಗಿ ಬರೆದ ಪುಸ್ತಕ ಸ್ಪರ್ಧೆಯ ಬಹುಮಾನ ವಿಜೇತರಾದ ಶ್ರೀ ಶಂಕರ್.ಎನ್. ತಾಮನ್ಯರ್, ಮುಂಡಾಜೆ ಇವರಿಗೆ ಗೌರವಧನ ನೀಡಿ ಅಭಿನಂದಿಸಲಾಗುವುದು. ಪೂರ್ಣ ಕಾರ್ಯಕ್ರಮ ವಿದ್ಯಾರ್ಥಿಗಳಿಂದಲೇ ನಿರ್ವಹಣೆಗೊಳ್ಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ

ರಾಮಕೃಷ್ಣ ಭಟ್, ರಮೇಶ್, ಅನಂತ್ ಪದ್ಮನಾಭ ರಾವ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ